ನಿರುದ್ಯೋಗಿಗಳಿಗೆ ಬಂಪರ್ ಸುದ್ದಿ! SSLC ಪಾಸಾದವರಿಗೂ ಸರ್ಕಾರಿ JOB! ಸಂಬಳ ಎಷ್ಟು!?

ಡಿಸೆಂಬರ್ 4, 2024 - 08:10
 0  10
ನಿರುದ್ಯೋಗಿಗಳಿಗೆ ಬಂಪರ್ ಸುದ್ದಿ! SSLC ಪಾಸಾದವರಿಗೂ ಸರ್ಕಾರಿ JOB! ಸಂಬಳ ಎಷ್ಟು!?

ನಿರುದ್ಯೋಗಿಗಳಿಗೆ ಬಂಪರ್ ಸುದ್ದಿ ಒಂದು ಹೊರ ಬಿದ್ದಿದ್ದು, SSLC ಪಾಸಾದವರಿಗೂ ಸರ್ಕಾರಿ ಉದ್ಯೋಗ ಸಿಗಲಿದೆ. ಹಾಗಿದ್ರೆ ಎಲ್ಲಿ, ಹೇಗೆ? ಸಂಬಳ ಎಷ್ಟು ಅಂತ ಯೋಚ್ನೆ ಮಾಡ್ತಿದ್ರೆ ಸುದ್ದಿ ಪೂರ್ತಿ ಓದಿ. 

ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹೊಸದಾಗಿ ನೇಮಕಾತಿ ಮಾಡಿಕೊಳ್ಳುತ್ತಿದೆ. 10ನೇ ತರಗತಿ ಉತ್ತೀಣ ಆದವರೂ ಸಹ ಸರ್ಕಾರಿ ಹುದ್ದೆ ಪಡೆಯಬಹುದು. ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಕೂಡಲೇ ಅರ್ಜಿ ಸಲ್ಲಿಸಬೇಕು ಎಂದು ಕೆಕೆಆರ್‌ಟಿಸಿ ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಒಟ್ಟು 150 ಬಸ್ ಚಾಲಕ ಹಾಗೂ ತಾಂತ್ರಿಕ ಸಹಾಯಕ ಹುದ್ದೆಗಳು ಖಾಲಿ ಇವೆ. ಸರ್ಕಾರಿ ಉದ್ಯೋಗದಲ್ಲಿ ಆಸಕ್ತಿ ಇರುವ ಕನಿಷ್ಠ ವಿದ್ಯಾರ್ಹತೆ ಇರುವವರು ಕೂಡ ಈ ಹುದ್ದೆಗಳಿಗೆ ಕೂಡಲೇ ಅರ್ಜಿ ಸಲ್ಲಿಸಬೇಕು. ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿಸೆಂಬರ್ 4 ಕೊನೆಯ ದಿನಾಂಕವಾಗಿದೆ. ಮಾಸಿಕ ವೇತನ, ವಯಸ್ಸು ಸೇರಿದಂತೆ ನೇಮಕಾತಿ ಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

ನೇಮಕಾತಿ ಹುದ್ದೆಗಳು: ಬಸ್ ಚಾಲಕ, ತಾಂತ್ರಿಕ ಸಹಾಯಕ

ಬಸ್ ಚಾಲಕ ಹುದ್ದೆ: 100

ತಾಂತ್ರಿಕ ಸಹಾಯಕ ಹುದ್ದೆ: 50

ಒಟ್ಟು ಹುದ್ದೆಗಳು: 150

ಅರ್ಜಿ ಸಲ್ಲಿಕೆ ವಿಧಾನ: ಆಫ್‌ಲೈನ್

ಶಿಕ್ಷಣ: ಹತ್ತನೇ ತರಗತಿ ಪಾಸ್ ಕಡ್ಡಾಯ

ಅರ್ಜಿ ಸಲ್ಲಿಕೆ ಕೊನೆ ದಿನ: ಡಿಸೆಂಬರ್ 04

ಪೋಸ್ಟಿಂಗ್ ಸ್ಥಳ: ಬೀದರ್

KKRTC ಹುದ್ದೆ ಸೇರಬಯಸುವ ಅಭ್ಯರ್ಥಿಗಳು ಮಾನ್ಯ ಪಡೆದ ಶೈಕ್ಷಣಿಕ ಮಂಡಳಿಯಲ್ಲಿ ಹತ್ತನೇ ತರಗತಿ ಉತ್ತೀರ್ಣ ಆಗಿರಬೇಕು ಎಂದು ಅಧಿಸೂಚನೆ ಹೇಳಿದೆ.

ಆಯ್ಕೆ ವಿಧಾನ ಹೇಗೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ನೇರ ಸಂದರ್ಶನ ನಡೆಸುವ ಮೂಲಕ ನಿಗಮ/ ಸಾರಿಗೆ ಇಲಾಖೆ ಅಧಿಕಾರಿಗಳು ನೇಮಕ ಮಾಡಿಕೊಳ್ಳಲಿದ್ದಾರೆ. ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಚಾಲನಾ ತರಬೇತಿ ಸಹಿತ, ಬೀದರ್ ನಲ್ಲಿ ಪೋಸ್ಟಿಂಗ್ ನೀಡಲಾಗುತ್ತಿದೆ.

ಮಾಸಿಕ ವೇತನ ವಿವರ
ಆಯ್ಕೆ ಆಗುವ ಬಸ್ ಚಾಲಕ ಅಭ್ಯರ್ಥಿಗಳಿಗೆ ಮಾಸಿಕವಾಗಿ 16973 ರೂಪಾಯಿವರೆಗೆ ವೇತನ ನೀಡಲಾಗುವುದು. ಕೊನೆ ದಿನಾಂಕವರೆಗೆ ಕಾಯದೇ ಈ ಹುದ್ದೆಗಳಿಗೆ ನೀವು ಕೂಡಲೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು KKRTC ತಿಳಿಸಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಜೊತೆಗೆ ಸಲ್ಲಿಸಬೇಕಾದ ದಾಖಲೆಗಳು, ಷರತ್ತುಗಳು ಹಾಗೂ ಪ್ರಮುಖ ಅಂಶಗಳನ್ನು ನಿಗಮವು ಈ ಸರ್ಕಾರದ ವೆಬ್‌ಸೈಟ್ www.bidar.nic.in ನಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ಪರಿಶೀಲಿಸಿಕೊಳ್ಳಬೇಕು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow