ನ್ಯೂಯಾರ್ಕ್‌ನಲ್ಲಿ ಪ್ರಧಾನಿ ಮೋದಿ ಸಮಾವೇಶ: 24 ಸಾವಿರ ಭಾರತೀಯ ಅಮೆರಿಕನ್ನರ ನೋಂದಣಿ!

ಆಗಸ್ಟ್ 28, 2024 - 12:06
 0  5
ನ್ಯೂಯಾರ್ಕ್‌ನಲ್ಲಿ ಪ್ರಧಾನಿ ಮೋದಿ ಸಮಾವೇಶ: 24 ಸಾವಿರ ಭಾರತೀಯ ಅಮೆರಿಕನ್ನರ ನೋಂದಣಿ!
FOCUS KARNATAKA Modi in New York

2024ರ ಸೆಪ್ಟೆಂಬರ್ 22 ರಂದು ಅಮೆರಿಕದಲ್ಲಿ ನಡೆಯಲಿರುವ ಪ್ರಧಾನಿ ಮೋದಿ ಅವರ ಬೃಹತ್ ಸಮಾವೇಶಕ್ಕೆ ಹಾಜರಾಗಲು ಸಾವಿರಾರು ಭಾರತೀಯ ಅಮೆರಿಕನ್ನರು ತಮ್ಮ ಹೆಸರು ನಮೂದಿಸಿಕೊಂಡಿದ್ದಾರೆ. ‘ಮೋದಿ ಹಾಗೂ ಅಮೆರಿಕ ಒಟ್ಟಾಗಿ ಅಭಿವೃದ್ಧಿ ಹೊಂದೋಣ’ ಎಂಬ ಘೋಷ ವಾಕ್ಯ ಒಳಗೊಂಡಿರುವ ಈ ಕಾರ್ಯಕ್ರಮಕ್ಕೆ ಭಾರತೀಯ ಸಮುದಾಯದ 24 ಸಾವಿರ ಮಂದಿ ತಮ್ಮ ಹೆಸರು ನೋಂದಣಿ ಮಾಡಿದ್ದಾರೆ. ಈ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಎಂದಿನ ಶೈಲಿಯಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ನ್ಯೂಯಾರ್ಕ್ ನಗರದಲ್ಲಿ ಇರುವ ನಸ್ಸೌ ವೆಟರನ್ಸ್ ಮೆಮೋರಿಯಲ್ ಕೊಲಿಜಿಯಂನಲ್ಲಿ ಈ ಸಮಾವೇಶ ನಡೆಯಲಿದ್ದು, ಈ ಸಭಾಂಗಣದ ಒಟ್ಟು ಸಾಮರ್ಥ್ಯ 15 ಸಾವಿರ. ಆದರೆ, ಸಮಾವೇಶಕ್ಕೆ 24 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದು, ಭಾರೀ ಸಂಖ್ಯೆಯ ಭಾರತೀಯ ಸಮುದಾಯಕ್ಕೆ ಸ್ಥಳಾವಕಾಶ ಹೇಗೆ ಕಲ್ಪಿಸುತ್ತಾರೆ ಅನ್ನೋದೇ ದೊಡ್ಡ ಸವಾಲಾಗಿದೆ.

ಕಂಗನಾಗೆ ಮೋದಿಯಿಂದಲೇ ಕಪಾಳಮೋಕ್ಷ.! ವಿಡಿಯೋ ನೋಡಿ.. ????

ಇಂಡೋ - ಅಮೆರಿಕನ್ ಕಮ್ಯುನಿಟಿ ಆಫ್ ಯುಎಸ್‌ಎ (ಐಎಸಿಯು) ಸಂಘಟನೆಯು ಈ ಸಮಾವೇಶದ ಉಸ್ತುವಾರಿ ಹೊತ್ತಿದ್ದು, ಆಯೋಜಕರ ಪ್ರಕಾರ ಸುಮಾರು 24 ಸಾವಿರ ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಉತ್ಸುಕರಾಗಿದ್ದು, ಸೈನ್ ಅಪ್ ಕೂಡಾ ಮಾಡಿದ್ದಾರೆ. ಹೀಗಾಗಿ ಇದೊಂದು ಅತಿ ದೊಡ್ಡ ಸಮಾವೇಶ ಆಗಲಿದೆ ಎಂದು ಸಂಘಟಕರು ಹೇಳಿಕೊಂಡಿದ್ದಾರೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow