ಟೆಲಿಗ್ರಾಂ ಸಿಇಒ ಪಾವೆಲ್ ಡುರೋವ್ 100 ಕ್ಕೂ ಅಧಿಕ ಮಕ್ಕಳ ತಂದೆ! 12 ಕ್ಕೂ ಹೆಚ್ಚು ದೇಶಗಳಲ್ಲಿದ್ದಾರೆ ಈತನ ಕುಡಿಗಳು

ಟೆಲಿಗ್ರಾಂ ಸಿಇಒ ಪಾವೆಲ್ ಡುರೋವ್ 100 ಕ್ಕೂ ಅಧಿಕ ಮಕ್ಕಳ ತಂದೆ! 12 ಕ್ಕೂ ಹೆಚ್ಚು ದೇಶಗಳಲ್ಲಿದ್ದಾರೆ ಈತನ ಕುಡಿಗಳು
ಪ್ಯಾರಿಸ್‌ನಲ್ಲಿ ಬಂಧನಕ್ಕೊಳಗಾಗಿರುವ ಮೆಸೆಜಿಂಗ್ ಆ್ಯಪ್ ಟೆಲಿಗ್ರಾಂನ ಸಂಸ್ಥಾಪಕ ಹಾಗೂ ಸಿಇಒ ಪಾವೆಲ್ ಡುರೋವ್ ಅವರಿಗೆ 100 ಕ್ಕೂ ಅಧಿಕ ಮಕ್ಕಳಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ರಷ್ಯಾ ಮೂಲದ ಶತಕೋಟ್ಯಧಿಪತಿ ಪಾವೆಲ್ ಡುರೋವ್ ತಮ್ಮ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸುವ ವೇಳೆ ಬಂಧನಕ್ಕೊಳಗಾಗಿದ್ದರು. ಸದ್ಯ ಅವರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಅವರ ಹಿನ್ನೆಲೆಯನ್ನು ಜನ ಕೆದಕುತ್ತಿದ್ದಾರೆ. ಈ ವೇಳೆ ಅವರು ಹಿಂದಿನ ಸಂದರ್ಶನದ ತುಣುಕುಗಳು ವೈರಲ್ ಆಗುತ್ತಿದ್ದು, ಅವರು ಪ್ರಮುಖ ವೀರ್ಯ ದಾನಿಯಾಗಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.
ರಚ್ಚು ಜೈಲು ಭೇಟಿ ದಚ್ಚುಗೆ ತಂದ ಫಜೀತಿ?
ವಿಡಿಯೋ ನೋಡಲು ಕೆಳಗಿನ ಪೋಟೋ ಮೇಲೆ ಕ್ಲಿಕ್ ಮಾಡಿ.
2019 ರಲ್ಲಿ ಚಾನೆಲ್‌ವೊಂದಕ್ಕೆ ನೀಡಿದ್ದ ಸಂದರ್ಶನಲ್ಲಿ ಪಾವೆಲ್ ಡುರೋವ್ ಅವರು, ನಾನೊಬ್ಬ ವೀರ್ಯ ದಾನಿಯಾಗಿದ್ದು, ನನಗೆ 100 ಕ್ಕೂ ಹೆಚ್ಚು ಜೈವಿಕ ಮಕ್ಕಳಿದ್ದಾರೆ ಎಂದು ವೈದ್ಯರು ಹೇಳಿರುವುದಾಗಿ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
" ಹದಿನೈದು ವರ್ಷಗಳ ಹಿಂದೆ ನನ್ನ ಸ್ನೇಹಿತರೊಬ್ಬರು ನನ್ನನ್ನು ಸಂಪರ್ಕಿಸಿ ಅವರು ಹಾಗೂ ಅವರ ಪತ್ನಿ ಮಕ್ಕಳಾದ ವೀರ್ಯಾಣು ಫಲವತ್ತತೆ ಸಮಸ್ಯೆಯಿಂದ ಬಳಲುತ್ತಿರುವುದಾಗಿ ತಿಳಿಸಿದರು. ಅವರು ಮಗುವನ್ನು ಮಾಡಿಕೊಳ್ಳಲು ಕ್ಲಿನಿಕ್‌ನಲ್ಲಿ ನನಗೆ ವೀರ್ಯ ದಾನಕ್ಕೆ ಮನವಿ ಮಾಡಿದರು. ಆ ಸಂದರ್ಭದಲ್ಲಿ ಭೇಟಿಯಾದ ವೈದ್ಯರು, ನನಗೆ ಉತ್ತಮ ಗುಣಮಟ್ಟದ ವೀರ್ಯಗಳಿದ್ದು, ನಿರಂತರವಾಗಿ ದಾನ ಮಾಡಿದರೆ ಸಂತಾನ ಸಮಸ್ಯೆಯಿಂದ ಬಳಲುತ್ತಿರುವ ದಂಪತಿಗಳಿಗೆ ನೆರವಾಗುತ್ತದೆ ಎಂದು ನನಗೆ ದಾನ ಮಾಡಲು ಪ್ರಚೋದನೆ ಕೊಟ್ಟರು. ಸದ್ಯ ನನ್ನ ದಾನ ಕಾರ್ಯದಿಂದ 12 ದೇಶಗಳಲ್ಲಿ ನೂರು ದಂಪತಿಗಳು ಮಕ್ಕಳನ್ನು ಹೊಂದಿದ್ದಾರೆ " ಎಂದು ಪಾವೆಲ್ ಡುರೋವ್ ಸಂದರ್ಶನದಲ್ಲಿ ಹೇಳಿದ್ದಾರೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






