ಪದವೀಧರರಿಗೆ ಭರ್ಜರಿ ಉದ್ಯೋಗಾವಕಾಶ: ಧಾರವಾಡ ಕೃಷಿ ಮಹಾವಿದ್ಯಾಲಯದಲ್ಲಿದೆ JOB.. ಅರ್ಹರು ಅಪ್ಲೈ ಮಾಡಿ!

ಜನವರಿ 18, 2025 - 08:01
 0  9
ಪದವೀಧರರಿಗೆ ಭರ್ಜರಿ ಉದ್ಯೋಗಾವಕಾಶ: ಧಾರವಾಡ ಕೃಷಿ ಮಹಾವಿದ್ಯಾಲಯದಲ್ಲಿದೆ JOB.. ಅರ್ಹರು ಅಪ್ಲೈ ಮಾಡಿ!

ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಧಾರವಾಡ ಕೃಷಿ ಮಹಾವಿದ್ಯಾಲಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 

ಆಣ್ವಿಕ ತಳಿ ವಿಧಾನಗಳನ್ನು ಬಳಸಿಕೊಂಡು ಹೆಚ್ಚಿನ ತಾಪಮಾನದ ತಳಿ ಸಹಿಷ್ಣುತೆಗಾಗಿ ನೆಲಗಡಲೆ ಜೀನೋಟೈಪ್‌ಗಳ ಅಭಿವೃದ್ಧಿ" ಎಂಬ ಯೋಜನೆಯಡಿ ಪ್ರಾಜೆಕ್ಟ್‌ ಅಸಿಸ್ಟಂಟ್ ಹುದ್ದೆಗಳನ್ನು ನೇಮಕ ಮಾಡಲು, ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.

ಹುದ್ದೆಯನ್ನು ಒಂದು ವರ್ಷದ ವರೆಗೆ ಅಥವಾ ಯೋಜನೆ ಮುಕ್ತಾಯದವರೆಗೆ ಯಾವುದು ಮೊದಲೋ ಅಲ್ಲಿಯವರಗೆ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲು ಈ ಕೆಳಕಾಣಿಸಿದ ವಿದ್ಯಾರ್ಹತೆ ಹೊಂದಿದ ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನೇಮಕಾತಿ ಸಂಸ್ಥೆ: ಕೃಷಿ ಮಹಾವಿದ್ಯಾಲಯ, ಧಾರವಾಡ.
ಹುದ್ದೆ ಪದನಾಮ : ಪ್ರಾಜೆಕ್ಟ್‌ ಅಸಿಸ್ಟಂಟ್
ಹುದ್ದೆಗಳ ಸಂಖ್ಯೆ : 01
ಶೈಕ್ಷಣಿಕ ಅರ್ಹತೆ : ಕೃಷಿ / ಬಯೋಟೆಕ್ನಾಲಜಿ / ಮಾಲಿಕ್ಯೂಲರ್ ಬಯೋಲಜಿ / ಜೆನೆಟಿಕ್ಸ್‌ ವಿಷಯಗಳಲ್ಲಿ ಬಿಎಸ್ಸಿ ಪಾಸ್.
ಪ್ರತಿ ತಿಂಗಳ ವೇತನ: Rs.25,000
ಉದ್ಯೋಗ ಸ್ಥಳ: ಧಾರವಾಡ

ಮೇಲಿನ ಹುದ್ದೆಗೆ ನೇಮಕಾತಿ ಪಡೆಯಲು ಬಯಸುವ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಎರಡು ಪ್ರತಿಗಳೊಂದಿಗೆ ದಿನಾಂಕ 20-01-2025 ರಂದು ಬೆಳಿಗ್ಗೆ 11-00 ಘಂಟೆಗೆ ಸಂದರ್ಶನಕ್ಕೆ ಹಾಜರಾಗಬೇಕು. ಅರ್ಜಿ ನಮೂನೆಗಾಗಿ ಕೃಷಿ ಮಹಾವಿದ್ಯಾಲಯದ ವೆಬ್‌ಸೈಟ್‌ಗೆ ಭೇಟಿ ನೀಡಿ. 

ನೇರ ಸಂದರ್ಶನ ವಿಳಾಸ: ಡೀನ್ (ಕೃಷಿ) ರವರ ಕಛೇರಿ, ಕೃಷಿ ಮಹಾವಿದ್ಯಾಲಯ, ಧಾರವಾಡ.
ನೇರ ಸಂದರ್ಶನ ದಿನಾಂಕ : 20-01-2025

ಸಂದರ್ಶನಕ್ಕೆ ಬರುವಾಗ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲ ಮೂಲ ದಾಖಲೆಗಳನ್ನು ಹಾಗೂ ಎರಡು ಪ್ರತಿಗಳನ್ನು ಸಂದರ್ಶನದ ಸಮಯದಲ್ಲಿ ತರಲು ತಿಳಿಸಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow