ಪಾಕಿಸ್ತಾನಕ್ಕೆ ತವರಿನಲ್ಲೇ ಮುಖಭಂಗ: ಬಾಂಗ್ಲಾದೇಶ ವಿರುದ್ಧ 10 ವಿಕೆಟ್‌ ಹೀನಾಯ ಸೋಲು.!

ಆಗಸ್ಟ್ 26, 2024 - 12:36
 0  14
ಪಾಕಿಸ್ತಾನಕ್ಕೆ ತವರಿನಲ್ಲೇ ಮುಖಭಂಗ: ಬಾಂಗ್ಲಾದೇಶ ವಿರುದ್ಧ 10 ವಿಕೆಟ್‌ ಹೀನಾಯ ಸೋಲು.!
FOCUS KARNATAKA Bangladesh vs Pakisthan

ಪಾಕಿಸ್ತಾನಕ್ಕೆ ತವರಿನಲ್ಲೇ ಮುಖಭಂಗ: ಬಾಂಗ್ಲಾದೇಶ ವಿರುದ್ಧ 10 ವಿಕೆಟ್‌ ಹೀನಾಯ ಸೋಲು.!


ಬಾಂಗ್ಲಾದೇಶ ವಿರುದ್ಧ ತನ್ನದೇ ತವರಿನಲ್ಲಿ ಪಾಕಿಸ್ತಾನ ಹೀನಾಯ ಸೋಲಿನ ಮುಖಭಂಗಕ್ಕೊಳಗಾಗಿದೆ. ಭಾನುವಾರ ಕೊನೆಗೊಂಡ ಮೊದಲ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್‌ ಹೀನಾಯ ಸೋಲನುಭವಿಸಿತು. 

ಈ ಮೂಲಕ ಟೆಸ್ಟ್‌ನಲ್ಲಿ ಬಾಂಗ್ಲಾ ತಂಡ ಪಾಕ್‌ ವಿರುದ್ಧ ಮೊದಲ ಬಾರಿ ಗೆಲುವು ಸಾಧಿಸಿತು.ಮೊದಲ ಇನ್ನಿಂಗ್ಸ್‌ನಲ್ಲಿ ಪಾಕ್‌ 6 ವಿಕೆಟ್‌ಗೆ 448 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು. ಇದಕ್ಕುತ್ತರವಾಗಿ ಬಾಂಗ್ಲಾ 565 ರನ್‌ ಗಳಿಸಿ, 117 ರನ್‌ ಮುನ್ನಡೆ ಪಡೆದಿತ್ತು. 

ಬಳಿಕ 2ನೇ ಇನ್ನಿಂಗ್ಸ್‌ ಆರಂಭಿಸಿದ್ದ ಪಾಕ್‌ 4ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 23 ರನ್‌ ಗಳಿಸಿತ್ತು. ಆದರೆ ಭಾನುವಾದ ಬ್ಯಾಟಿಂಗ್‌ ವೈಫಲ್ಯಕ್ಕೆ ಗುರಿಯಾಗಿ ಕೇವಲ 146 ರನ್‌ಗೆ ಸರ್ವಪತನ ಕಂಡಿತು. ಮೆಹಿದಿ ಹಸನ್‌ ಮೀರಾಜ್‌ 4, ಶಕೀಬ್‌ ಹಸನ್‌ 3 ವಿಕೆಟ್‌ ಕಬಳಿಸಿದರು. 30 ರನ್‌ಗಳ ಸುಲಭ ಗುರಿ ಪಡೆದ ಬಾಂಗ್ಲಾ 6.3 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ ಜಯಗಳಿಸಿತು. ಪಾಕ್‌ ಇದೇ ಮೊದಲ ಬಾರಿ ತವರಿನಲ್ಲಿ 10 ವಿಕೆಟ್‌ಗಳ ಸೋಲಿನ ರುಚಿ ಅನುಭವಿಸಿತು.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow