ಪಾಕಿಸ್ತಾನದಿಂದ ಆಮದಾಗುವ ವಸ್ತುಗಳಿಗೆ ಭಾರತ ನಿರ್ಬಂಧ!? ಪಾಕ್ ಗೆ ಆರ್ಥಿಕ ಸಂಕಷ್ಟದ ಭೀತಿ!?

ಮೇ 3, 2025 - 21:04
 0  11
ಪಾಕಿಸ್ತಾನದಿಂದ ಆಮದಾಗುವ ವಸ್ತುಗಳಿಗೆ ಭಾರತ ನಿರ್ಬಂಧ!? ಪಾಕ್ ಗೆ ಆರ್ಥಿಕ ಸಂಕಷ್ಟದ ಭೀತಿ!?

ನವದೆಹಲಿ:-ಪಾಕಿಸ್ತಾನದಿಂದ ಆಮದಾಗುವ ವಸ್ತುಗಳಿಗೆ ಭಾರತ ನಿರ್ಬಂಧ ವಿಧಿಸಿದ್ದು, ಪಾಕ್ ಗೆ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.ಭಾರತದ ಈ ನಿರ್ಧಾರದಿಂದ ಪಾಕ್ ಮತ್ತಷ್ಟು ಆರ್ಥಿಕ ಸಮಸ್ಯೆಗೆ ಒಳಗಾದರೆ, ಭಾರತದಲ್ಲಿ ಹಲವು ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆಗಳಿದೆ.

 ವಿದೇಶಿ ವ್ಯಾಪಾರ ನೀತಿ 2023ರ ಅನ್ವಯ ಈ ಘೋಷಣೆ ಮಾಡಲಾಗಿದ್ದು, ಮುಂದಿನ ಆದೇಶದವರೆಗೂ ಇದು ಜಾರಿಯಲ್ಲಿರಲಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಜನಿಕ ನೀತಿಯ ಹಿತದೃಷ್ಟಿಯಿಂದ ಈ ನಿರ್ಬಂಧ ಹೇರಲಾಗಿದೆ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶಕ ತಿಳಿಸಿದ್ದಾರೆ.

ಆಮದು ನಿಷೇಧ ಮಾಡಿದ ಹಿನ್ನೆಲೆ ಭಾರತದ ಮೇಲೆ ಹಲವು ರೀತಿಯ ಪರಿಣಾಮ ಬೀರಲಿದೆ. ಒಣ ಹಣ್ಣುಗಳು ಮತ್ತು ಕೃಷಿ ಉತ್ಪನ್ನಗಳ ಬೆಲೆ ಏರಿಕೆ ಕಾಶ್ಮೀರ ಮತ್ತು ಇತರ ಪ್ರದೇಶಗಳಿಂದ ಒಣ ಹಣ್ಣುಗಳ ಆಮದು ಕಡಿಮೆಯಾದರೆ ಈ ಉತ್ಪನ್ನಗಳ ಬೆಲೆ ಗಗನಕ್ಕೇರಬಹುದು. ಭಾರತವು ಈ ವಸ್ತುಗಳನ್ನು ಇತರ ದೇಶಗಳಿಂದ (ಉದಾ: ಆಫ್ಘಾನಿಸ್ತಾನ, ಇರಾನ್) ಆಮದು ಮಾಡಿಕೊಳ್ಳಬಹುದು. ಆದರೆ ಇದರಿಂದ ಸಾಗಣೆ ವೆಚ್ಚ ಮತ್ತು ಬೆಲೆ ಹೆಚ್ಚಾಗಬಹುದು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow