ಪಾಕ್ʼನಿಂದ ಭಾರತಕ್ಕೆ ಬಂದಿದ್ದ ಸೀಮಾ ಹೈದರ್ 7 ತಿಂಗಳ ಗರ್ಭಿಣಿ! Video Viral

ಪಬ್ಜಿ ಆನ್‌ಲೈನ್ ಗೇಮ್ ಮೂಲಕ ಪರಿಚಯವಾದ ಉತ್ತರ ಪ್ರದೇಶದ ಸಚಿನ್ ಮೀನಾ ಎಂಬ ಯುವಕನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಸೀಮಾ ಹೈದರ್ ಲವ್ ಸ್ಟೋರಿಯು ದೇಶಾದ್ಯಂತ ಸುದ್ದಿಯಾಗಿತ್ತಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಪ್ರಿಯಕರನೊಂದಿಗೆ ನೆಲೆಸಿರುವ ಪಾಕಿಸ್ತಾನದ ಪ್ರಜೆ ಸೀಮಾ ಹೈದರ್ ಇದೀಗ ಗರ್ಭಿಣಿಯಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಆ್ಯಕ್ಟಿವ್ ಆಗಿರುವ ಸೀಮಾ ಹೈದರ್ ಮತ್ತು ಸಚಿನ್ ಮೀನಾ ಜೋಡಿ ಆಗಾಗ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬAಧಿಸಿದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಗರ್ಭಿಣಿಯಾಗಿರುವ ಖುಷಿಯ ವಿಚಾರವನ್ನು ವಿಡಿಯೋ ಮೂಲಕ ತಿಳಿಸಿದ್ದಾರೆ. ಈ ವಿಡಿಯೋದಲ್ಲಿ ಸೀಮಾ ಗರ್ಭಧಾರಣೆಯ ಪರೀಕ್ಷಾ ಕಿಟ್‌ನೊಂದಿಗೆ ಕಾಣಿಸಿಕೊಂಡಿದ್ದು, ಗರ್ಭಿಣಿಯಾಗಿರುವ ಬಗ್ಗೆ ಪತಿ ಸಚಿನ್‌ಗೆ ತಿಳಿಸಿದ್ದಾರೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜಕೋಬಾಬಾದ್ ಮೂಲದ ಸೀಮಾ ಹೈದರ್ ಸಂದರ್ಶನವೊಂದರಲ್ಲಿ ‘ತಾನು ಹಿಂದು ಧರ್ಮವನ್ನು ಸ್ವೀಕರಿಸಿದ್ದೇನೆ. ತಾಯ್ನಾಡಿಗೆ (ಪಾಕಿಸ್ತಾನ) ಮರಳಲು ಇಷ್ಟವಿಲ್ಲ. ತನ್ನ ನಾಲ್ಕು ಮಕ್ಕಳು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ’ ಎಂದು ಹೇಳಿದ್ದರು.
ನಿಮ್ಮ ಪ್ರತಿಕ್ರಿಯೆ ಏನು?






