Christmas 2024: ಕ್ರಿಸ್ಮಸ್‌ ಹಬ್ಬದ ಮಹತ್ವ ಮತ್ತು ಇತಿಹಾಸವೇನೆಂಬುದು ನಿಮಗೆ ಗೊತ್ತಾ..?

ಡಿಸೆಂಬರ್ 25, 2024 - 07:12
 0  5
Christmas 2024: ಕ್ರಿಸ್ಮಸ್‌ ಹಬ್ಬದ ಮಹತ್ವ ಮತ್ತು ಇತಿಹಾಸವೇನೆಂಬುದು ನಿಮಗೆ ಗೊತ್ತಾ..?

ಪ್ರತಿ ವರ್ಷ ಡಿಸೆಂಬರ್‌ 25ರಂದು ದೇಶಾದ್ಯಂತ ಕ್ರೈಸ್ತ ಬಾಂಧವರು ಕ್ರಿಸ್ಮಸ್‌ ಹಬ್ಬವನ್ನು ಆಚರಿಸುತ್ತಾರೆ. ವಿವಿಧ ಚರ್ಚ್‌ಗಳಲ್ಲಿ ಯೇಸುವಿಗೆ ವಿಶೇಷ ಪೂಜೆ ಸಲ್ಲಿಸುವ ಜೊತೆ ಭಾರೀ ಗಾತ್ರದ ಕೇಕ್‌ಗಳನ್ನು ಕತ್ತರಿಸುತ್ತಾರೆ. ಪ್ರಮುಖ ನಗರದ ಮಾಲ್‌ಗಳಲ್ಲಿಯೂ ವಿಶೇಷ ಕ್ರಿಸ್ಮಸ್‌ ದೀಪಾಲಂಕಾರ, ಕ್ರಿಸ್ಮಸ್‌ ಟ್ರೀ ಸ್ಥಾಪಿಸಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತಾರೆ.

ಇತಿಹಾಸ

ಕ್ರೈಸ್ತ ಬಾಂಧವರ ಆರಾಧ್ಯ ದೈವ ಯೇಸುಕ್ರಿಸ್ತ. ಯೇಸು ಜನರ ಒಳಿತಿಗಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಿ ಮತ್ತೆ ಹುಟ್ಟಿಬಂದ ಎಂದು ಕ್ರಿಶ್ಚಿಯನ್ನರ ಪವಿತ್ರ ಗ್ರಂಥವಾದ ಬೈಬಲ್ ನಲ್ಲಿ ಹೇಳಲಾಗುತ್ತದೆ. ಇಸ್ರೇಲಿಯಾದ ಬೆಡ್ಲೆಹೆಮ್ ನಗರದಲ್ಲಿ ಕ್ರಿ.ಪೂ 4ರಲ್ಲಿ ಯೇಸು ಜನಿಸಿದ ಎಂದು ಹೇಳಲಾಗುತ್ತದೆ. ಜೋಸೆಫ್ ಮತ್ತು ಮೇರಿ ಮಾತ ಯೇಸುಕ್ರಿಸ್ತನ ತಂದೆ ತಾಯಿ. ಈ ದಂಪತಿಗೆ ದೇವರ ಆಶೀರ್ವಾದದಿಂದ ಯೇಸು ಜನಿಸಿದನು. ಯೇಸು ತಂದೆ ಜೋಸೆಫ್ ವೃತ್ತಿಯಲ್ಲಿ ಬಡವನಾಗಿದ್ದರು. ಆದರೆ ತಂದೆ ಕೆಲಸದಲ್ಲಿ ಸಹಾಯ ಮಾಡುವ ಮೂಲಕ ಯೇಸು ಸಮಾಜ ಕಲ್ಯಾಣವನ್ನೂ ಮಾಡುತ್ತಿದ್ದರು. ಕಥೆ ಪ್ರಕಾರ ಯಹೂದಿ ಧರ್ಮಕ್ಕೆ ಸೇರಿದ ಯೇಸು ಜನರಿಗೆ ಭೋದಿಸುವುದು ಯಹೂದಿಗಳ ಮೂಲಭೂತವಾದಿಗಳಿಗೆ ಇಷ್ಟವಿರಲಿಲ್ಲ. ಹೀಗಾಗಿ ಯೇಸುವಿನ ವಿರುದ್ಧ ಯಹೂದಿಗಳು ದ್ವೇಷ ಸಾಧಿಸುತ್ತಿದ್ದರು.

ಕ್ರಿಸ್ಮಸ್ ಆಚರಣೆ

ಕ್ರಿಸ್ಮಸ್ ಆಚರಣೆ ಮೊದಲ ಬಾರಿಗೆ ಕ್ರಿಸ್ತಪೂರ್ವ 336ರಲ್ಲಿ ರೋಮ್‌ನಲ್ಲಿ ಕ್ರಿಸ್ಮಸ್ ಆಚರಿಸಲಾಯಿತು. ಬಳಿಕ ಪೋಪ್ ಜೂಲಿಯಸ್ ಯೇಸುಕ್ರಿಸ್ತನ ಜನ್ಮದಿನವನ್ನು ಡಿಸೆಂಬರ್ 25ರಂದು ಆಚರಸಿದಲು ಅಧಿಕೃತವಾಗಿ ಘೋಷಣೆ ಮಾಡಿದರು. ಅಂದಿನಿಂದ ಪಾಶ್ಚಿಮಾತ್ಯ ದೇಶದಲ್ಲಿ ಕ್ರಿಸ್‌ಮಸ್‌ನ್ನು ರಜಾದಿನವಾಗಿ ಆಚರಿಸಲಾಗುತ್ತದೆ.

ಹಿಂಸಿಸಿದರೂ ಒಳಿತನ್ನೇ ಬಯಸಿದ ಯೇಸು

ಹಿಂಸಿಸಿದರೂ ಒಳಿತನ್ನೇ ಬಯಸಿದ ಯೇಸು ಆದರೂ ವಿರೋಧವನ್ನು ನಿರ್ಲಕ್ಷಿಸಿ ಯೇಸು ಸ್ಥಳದಿಂದ ಸ್ಥಳಕ್ಕೆ ಹೋಗಿ ಜನರಿಗೆ ಬೋಧನೆ ಮಾಡುತ್ತಿದ್ದರು. ಇದು ಯಹೂದಿಗಳ ಮೂಲಭೂತವಾದಿಗಳಿಗೆ ಸಹಿಸಲಾಗಲಿಲ್ಲ. ಹೀಗಾಗಿ ಯೇಸುವಿನನ್ನು ಸಾಯಿಸಲು ನಿರ್ಧರಿಸಿದರು. ಯೇಸುವನ್ನು ರೋಮನ್ ಗವರ್ನರ್ ಮುಂದೆ ಹಾಜರುಪಡಿಸಿದರು. ಬಳಿಕ ಯೇಸುವಿನನ್ನು ಶಿಲುಬೆಗೇರಿಸುವ ಮೂಲಕ ಶಿಕ್ಷೆ ನೀಡಿದರು.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow