ದೇವರಿಂದ ಅಭಿಮಾನಿಗಳನ್ನು ಉಡುಗೊರೆಯಾಗಿ ಪಡೆದ RCB: ಬೆಂಗಳೂರು ಫ್ಯಾನ್ಸ್ ಹಾಡಿ ಹೊಗಳಿದ ಅಶ್ವಿನ್!

ಅಕ್ಟೋಬರ್ 17, 2024 - 08:56
 0  14
ದೇವರಿಂದ ಅಭಿಮಾನಿಗಳನ್ನು ಉಡುಗೊರೆಯಾಗಿ ಪಡೆದ RCB: ಬೆಂಗಳೂರು ಫ್ಯಾನ್ಸ್ ಹಾಡಿ ಹೊಗಳಿದ ಅಶ್ವಿನ್!

ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಅಶ್ವಿನ್ ಅವರು RCB ಅಭಿಮಾನಿಗಳನ್ನು ಹಾಡಿ ಹೊಗಳಿದ್ದಾರೆ. 

 RCB ಕಪ್ ಗೆಲ್ಲದೇ ಇದ್ರೂ ಅಭಿಮಾನಿಗಳು ತೋರುವ ಎನ್ ಕ್ರೇಜ್ ಎಂಥವರನ್ನು ಬಾಯಿ ಮೇಲೆ ಬೆರಳಿಟ್ಟು ಕೊಳ್ಳುವಂತೆ ಮಾಡುತ್ತೆ. ಇಂತಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭಿಮಾನಿಗಳನ್ನು ಅಶ್ವಿನ್ ಅವರು ಹಾಡಿ ಹೊಗಳಿದ್ದಾರೆ. 

ಯೂಟ್ಯೂಬ್​ ಚಾನೆಲ್​ನಲ್ಲಿ ಆರ್​ಸಿಬಿ ಬಗ್ಗೆ ಮಾತನಾಡಿದ ಅಶ್ವಿನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ದೇವರಿಂದ ಪಡೆದಿರುವ ಉಡುಗೊರೆ ಎಂದರೆ ಅವರ ಅಭಿಮಾನಿಗಳು ಎಂದು ಹೊಗಳಿದ್ದಾರೆ.

ಆರ್​ಸಿಬಿ ಅಭಿಮಾನಿಗಳು ವಿರಾಟ್ ಕೊಹ್ಲಿಯನ್ನು ತುಂಬಾ ಪ್ರೀತಿಸುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ನಡೆಯುವ ಟ್ರೋಲಿಂಗ್‌ಗಳನ್ನು ನೋಡಿ ಹಲವರು ಖಿನ್ನತೆಗೆ ಒಳಗಾಗುತ್ತಾರೆ. ಇದಾಗ್ಯೂ ತಂಡದ ಮೇಲಿನ ಅವರ ನಿಷ್ಠೆ ಮಾತ್ರ ಬದಲಾಗಲ್ಲ ಎಂದು ರವಿಚಂದ್ರನ್ ಅಶ್ವಿನ್ ಆರ್​ಸಿಬಿ ಅಭಿಮಾನಿಗಳ ನಿಯತ್ತನ್ನು ಕೊಂಡಾಡಿದ್ದಾರೆ.

ನನ್ನ ಪ್ರಕಾರ, ಆರ್​ಸಿಬಿ ಫ್ರಾಂಚೈಸಿ ದೇವರಿಂದ ಪಡೆದ ಉಡುಗೊರೆ ಎಂದರೆ ಅದು ಅತ್ಯಂತ ನಿಷ್ಠಾವಂತ ಅಭಿಮಾನಿಗಳು. ಅವರ ಅಭಿಮಾನಿಗಳು ಯಾವಾಗಲೂ ಅವರ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿಯೇ ಕಳೆದ 10 ವರ್ಷಗಳಲ್ಲಿ ಆರ್​ಸಿಬಿ ಅತ್ಯಂತ ಸ್ಥಿರವಾದ ತಂಡವಾಗಿ ನಿಂತಿದೆ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

ಟೀಮ್ ಇಂಡಿಯಾದ ಸ್ಪಿನ್ ದಿಗ್ಗಜ ಅಶ್ವಿನ್ ಅವರ ಮಾತಿನಿಂದ ಇದೀಗ ಆರ್​ಸಿಬಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಅಲ್ಲದೆ ಸೋಷಿಯಲ್ ಮೀಡಿಯಾಗಳಲ್ಲಿ... ಇಂದಿಗೂ ಎಂದಿಗೂ ಎಂದೆಂದಿಗೂ ರಾಯಲ್ ಅಭಿಮಾನಿಗಳ ನಿಷ್ಠೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎಂಬುದನ್ನು ಸಾರಿ ಹೇಳುತ್ತಿದ್ದಾರೆ

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow