‘ಪುಷ್ಪ 2’ ಕಮಾಲ್: ತೆಲುಗುಗಿಂತ ಹಿಂದಿಯಲ್ಲಿ ಹೆಚ್ಚಾಯ್ತು ಕಲೆಕ್ಷನ್! ಕನ್ನಡದಲ್ಲಿ ಎಷ್ಟು?

ಡಿಸೆಂಬರ್ 10, 2024 - 20:56
 0  9
‘ಪುಷ್ಪ 2’ ಕಮಾಲ್: ತೆಲುಗುಗಿಂತ ಹಿಂದಿಯಲ್ಲಿ ಹೆಚ್ಚಾಯ್ತು ಕಲೆಕ್ಷನ್! ಕನ್ನಡದಲ್ಲಿ ಎಷ್ಟು?

ನಟ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಪುಷ್ಪ 2 ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ. 

ಇನ್ನೂ ಸಿನಿಮಾದ ಗಳಿಕೆ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಚಿತ್ರ ಸೋಮವಾರದ ಗಳಿಕೆ ವಿಚಾರದಲ್ಲಿ ಪಾಸ್ ಆಗಿದೆ. ಈ ಸಿನಿಮಾದ ಹಿಂದಿ ಕಲೆಕ್ಷನ್ ಲೆಕ್ಕ ಅನೇಕರಿಗೆ ಅಚ್ಚರಿ ಮೂಡಿಸಿದೆ.

ಪುಷ್ಪ 2’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಮೊದಲ ದಿನದಿಂದಲೂ ಅಬ್ಬರದ ಗಳಿಕೆ ಮಾಡುತ್ತಾ ಬಂದಿದೆ. ಈ ಚಿತ್ರ ವೀಕೆಂಡ್​ನಲ್ಲಿ ಅಭೂತಪೂರ್ವ ಕಲೆಕ್ಷನ್ ಮಾಡಿತು. ವಾರದ ದಿನಗಳಲ್ಲಿ ಈ ಚಿತ್ರ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಅದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ.

ಸೋಮವಾರ  ಈ ಸಿನಿಮಾ ಭಾರತದಲ್ಲಿ ಒಟ್ಟೂ 46 ಕೋಟಿ ರೂಪಾಯಿ ಗಳಿಕೆ ಮಾಡಿದೆ. ತೆಲುಗು ವರ್ಷನ್​ನಿಂದ 14 ಕೋಟಿ ರೂಪಾಯಿ ಗಳಿಕೆ ಆಗಿದೆ. ಕನ್ನಡ ಹಾಗೂ ಮಲಯಾಳಂ ಸೇರಿ 1 ಕೋಟಿ ರೂಪಾಯಿ ಆಗಿದೆ. ತಮಿಳು 
ವರ್ಷನ್ 3 ಕೋಟಿ ರೂಪಾಯಿ ಗಳಿಸಿದೆ. ಹಿಂದಿ ವರ್ಷನ್​ನಿಂದ ಒಂದೇ 46 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಗಳಿಕೆ ಅನೇಕರಿಗೆ ಅಚ್ಚರಿ ತಂದಿದೆ.

ಪುಷ್ಪ 2’ ಸಿನಿಮಾದ ಒಟ್ಟಾರೆ ಗಳಿಕೆ 593 ಕೋಟಿ ರೂಪಾಯಿ ಬಾಚಿಕೊಂಡಿದೆ. ಇದರಲ್ಲಿ ತೆಲುಗು ವರ್ಷನ್​ನಿಂದ 211 ಕೋಟಿ ರೂಪಾಯಿ, ಹಿಂದಿ ವರ್ಷನ್​ನಿಂದ 331 ಕೋಟಿ ರೂಪಾಯಿ, ತಮಿಳಿನಿಂದ 34 ಕೋಟಿ ರೂಪಾಯಿ, ಮಲಯಾಳಂನಿಂದ 11 ಕೋಟಿ ರೂಪಾಯಿ, ಕನ್ನಡದಿಂದ 4 ಕೋಟಿ ರೂಪಾಯಿ ಗಳಿಕೆ ಆಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow