ರಸ್ತೆಯಲ್ಲಿದ್ದ ಬಾಲಕನಿಗೆ ಕಾರು ಡಿಕ್ಕಿ: 50 ಅಡಿ ದೂರಕ್ಕೆ ಹಾರಿಬಿದ್ದ ಹುಡುಗ! ಆಮೇಲೇನಾಯ್ತು!?

ಡಿಸೆಂಬರ್ 10, 2024 - 22:30
 0  13
ರಸ್ತೆಯಲ್ಲಿದ್ದ ಬಾಲಕನಿಗೆ ಕಾರು ಡಿಕ್ಕಿ: 50 ಅಡಿ ದೂರಕ್ಕೆ ಹಾರಿಬಿದ್ದ ಹುಡುಗ! ಆಮೇಲೇನಾಯ್ತು!?

ರಾಜಸ್ಥಾನ:- ರಸ್ತೆಯಲ್ಲಿದ್ದ ಬಾಲಕನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಹುಡುಗ 50 ಅಡಿ ದೂರಕ್ಕೆ ಹಾರಿಬಿದ್ದ ಘಟನೆ ರಾಜಸ್ಥಾನದ ಸಿಕಾರ್‌ನಲ್ಲಿ ಜರುಗಿದೆ. 

ಗಾಳಿಪಟವನ್ನು ಹಿಂಬಾಲಿಸುತ್ತಾ ರಸ್ತೆಗೆ ಓಡಿ ಬಂದ ಬಾಲಕನಿಗೆ ಕಾರು ಡಿಕ್ಕಿಯಾಗಿರುವುದಾಗಿ ವರದಿಯಾಗಿದೆ. ಅಪಘಾತದಲ್ಲಿ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 

ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಸ್ತೆ ದಾಟಲು ಯತ್ನಿಸುತ್ತಿದ್ದ ಬಾಲಕ ಓಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅದೃಷ್ಟವಶಾತ್, ಮಗುವಿಗೆ ಡಿಕ್ಕಿ ಹೊಡೆದ ನಂತರ ಕಾರು ಚಾಲಕ ಬ್ರೇಕ್ ಹಾಕಿದ್ದಾನೆ. ಬಳಿಕ ತನ್ನ ಕಾರಿನಲ್ಲೇ ಆಸ್ಪತ್ರೆಗೆ ಕರೆದ್ಯೊಯ್ದಿದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಬಾಲಕನನ್ನು ಸ್ಥಳೀಯ ಎಸ್‌ಕೆ ಆಸ್ಪತ್ರೆಗೆ ಕರೆದೊಯ್ದಲಾಗಿದೆ. ಬಳಿಕ ಅಲ್ಲಿಂದ ಜೈಪುರದ ಎಸ್‌ಎಂಎಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಇದೀಗ ಬಾಲಕ ಎಸ್‌ಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಲೆ ಮತ್ತು ದೇಹದ ಇತರ ಭಾಗಗಳಿಗೆ ಗಾಯಗಳಾಗಿವೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow