ಪ್ಯಾಂಟ್ ಜಿಪ್ ತೆಗೆದು ಮಹಿಳೆ ಮುಂದೆ ಸೆಕ್ಯುರಿಟಿ ಅಸಭ್ಯ ವರ್ತನೆ!

ಬೆಂಗಳೂರು:- ಕೆಂಗೇರಿ ಉಪನಗರದಲ್ಲಿ ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಸೆಕ್ಯೂರಿಟಿ ಅಸಭ್ಯ ವರ್ತನೆ ತೋರಿರುವ ಘಟನೆ ಜರುಗಿದೆ.
ಘಟನೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸೆಕ್ಯೂರಿಟಿ ಚಂದ್ರಹಾಸ ಪಕ್ಕದ ಅಂಗಡಿಯ ಮಹಿಳೆಯ ನಡುವೆ ಜಾಗದ ವಿಚಾರವಾಗಿ ಜಗಳ ತೆಗೆದಿದ್ದಾನೆ. ಈ ವೇಳೆ ಅಶ್ಲೀಲವಾಗಿ ನಿಂದಿಸಿದ್ದಾನೆ. ಅಷ್ಟೇ ಅಲ್ಲದೆ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ. ಸದ್ಯ ದೂರು ನೀಡಿರುವ ಮಹಿಳೆ ಚಂದ್ರಹಾಸ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ದೂರಿನಲ್ಲಿ ಏನಿದೆ?
ಕೆಂಗೇರಿ ಉಪನಗರದಲ್ಲಿ ಸುಮಾರು ನಾಲ್ಕು ವರ್ಷಗಳಿಂದ ವಾಸವಾಗಿದ್ದು, ಆಗಸ್ಟ್ 02ರಂದು ಸುಮಾರು ರಾತ್ರಿ 09 ಗಂಟೆಗೆ ಫಿಶ್ ಅಂಗಡಿ ಜಾಗದ ವಿಚಾರಕ್ಕೆ ಮೆಗಾ ಮಾರ್ಟ್ನ ಸೆಕ್ಯೂರಿಟಿ ಚಂದ್ರಹಾಸ ನನ್ನೊಂದಿಗೆ ಜಗಳ ಮಾಡಿದ್ದು, ಈ ವಿಷಯವಾಗಿ ಆತನಿಗೆ ಬುದ್ಧಿ ಹೇಳಿಸಲು ಮಾರ್ಟ್ನ ಮ್ಯಾನೇಜರ್ಗೆ ದೂರು ಹೇಳಲು ಹೋದ ಸಂದರ್ಭದಲ್ಲಿ ಚಂದ್ರಹಾಸ ಏಕಏಕಿ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಸಾರ್ವಜನಿಕರ ಸಮ್ಮುಖದಲಿಯೇ ಆತನು ತನ್ನ ಪ್ಯಾಂಟ್ ಜಿಪ್ ಅನ್ನು ತೆಗೆದು ಮಾರ್ಮಾಂಗ ತೋರಿಸಲು ಮುಂದಾಗಿದ್ದು ಹಾಗೂ ನನ್ನ ಮೇಲೆ ಚೂಪಾದ ವಸ್ತುವಿನಿಂದ ಕಿವಿ ಹಾಗೂ ಕುತ್ತಿಗೆ ಭಾಗಕ್ಕೆ ಬಲವಾಗಿ ಹೊಡೆದು ಗಾಯ ಮಾಡಿದ್ದು, ಅದೇ ಸಮಯದಲ್ಲಿ ಸಾರ್ವಜನಿಕರು 112 ಗೆ ಕರೆ ಮಾಡಿದಾಗ ಪೊಲೀಸರು ಬಂದು ಮುಂದಿನ ಅನಾಹುತವನ್ನು ತಪ್ಪಿಸಿರುತ್ತಾರೆ.
ಹೀಗಾಗಿ ನನ್ನ ಮೇಲೆ ಹಲ್ಲೆ ಮಾಡಿರುವ ಚಂದ್ರಹಾಸನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಉಲೇಖಿಸಲಾಗಿದೆ
ನಿಮ್ಮ ಪ್ರತಿಕ್ರಿಯೆ ಏನು?






