ನಾನು ಅಮೆರಿಕವನ್ನು ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿಡುವಂತೆ ಮಾಡುತ್ತೇನೆ: ಡೊನಾಲ್ಡ್ ಟ್ರಂಪ್
ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮಾತನಾಡಿದ ಡೊನಾಲ್ಡ್ ಟ್ರಂಪ್, “ಈ ಕ್ಷಣದಿಂದ ಅಮೆರಿಕದ ಅವನತಿ ಮುಗಿದಿದೆ. ಅಮೆರಿಕದ ಸುವರ್ಣಯುಗ ಈಗ ಪ್ರಾರಂಭವಾಗುತ್ತದೆ. ನಾನು ಅಮೆರಿಕವನ್ನು ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿಡುವಂತೆ ಮಾಡುತ್ತೇನೆ. ಇಂದಿನಿಂದ ಅಮೆರಿಕಕ್ಕೆ ಸುವರ್ಣ ಯುಗ ಆರಂಭವಾಗಿದೆ.” ಎಂದಿದ್ದಾರೆ.
“ನಾವು ನಮ್ಮ ಸಂವಿಧಾನವನ್ನು ಮರೆಯುವುದಿಲ್ಲ, ಮತ್ತು ನಮ್ಮ ದೇವರನ್ನು ಮರೆಯುವುದಿಲ್ಲ” ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದೇ ವೇಳೆ ಡೊನಾಲ್ಡ್ ಟ್ರಂಪ್ ಮೆಕ್ಸಿಕೋ ಗಡಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಇನ್ನೂ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾರತದಿಂದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾಗವಹಿಸಿದ್ದರು. ಪ್ರಮಾಣವಚನ ಸಮಾರಂಭದಲ್ಲಿ ಜೈಶಂಕರ್ ಅವರು ಈಕ್ವೆಡಾರ್ ಅಧ್ಯಕ್ಷ ಡೇನಿಯಲ್ ನೊಬೊವಾ ಅವರೊಂದಿಗೆ ಮೊದಲ ಸಾಲಿನಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು, ಇದು ಅಧಿಕೃತ ಪ್ರೋಟೋಕಾಲ್ ಆಗಿದೆ. ಇದು ಭಾರತ ಹಾಗೂ ಅಮೆರಿಕದ ಸಂಬಂಧವನ್ನು ಹೇಳುತ್ತದೆ. ಈ ಸಮಯದಲ್ಲಿ, ಜಪಾನ್ ವಿದೇಶಾಂಗ ಸಚಿವ ತಕೇಶಿ ಇವಾಯಾ ಹಿಂದೆ ಕುಳಿತಿರುವುದು ಕಂಡುಬಂದಿದೆ.
ನಿಮ್ಮ ಪ್ರತಿಕ್ರಿಯೆ ಏನು?