ಚಕ್ರವರ್ತಿಯ ಮಹಾರಾಣಿಯಾದ ನ್ಯಾಷನಲ್ ಕ್ರಷ್: ಐತಿಹಾಸಿಕ ಪಾತ್ರಕ್ಕೆ ಬಣ್ಣ ಹಚ್ಚಿದ ರಶ್ಮಿಕಾ!

ಬಾಲಿವುಡ್ನ ಛಾವಾ ಚಿತ್ರದ ರಶ್ಮಿಕಾ ಮಂದಣ್ಣ ಪಾತ್ರದ ಲುಕ್ ರಿವೀಲ್ ಆಗಿದೆ. ಒಬ್ಬ ಮಹಾನ್ ರಾಜನ ಹಿಂದೆ ಸರಿಸಾಟಿಯಿಲ್ಲದ ಶಕ್ತಿಯುತ ಪತ್ನಿ ಇರ್ತಾಳೆ ಅನ್ನೋದನ್ನ ಹೇಳುತ್ತಲೇ ರಶ್ಮಿಕಾ ಪಾತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಚಿತ್ರದ ಟ್ರೈಲರ್ ಇದೇ ತಿಂಗಳು ಜನವರಿ-22 ರಂದು ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲೇ ರಶ್ಮಿಕಾ ಪಾತ್ರದ ಎರಡು ಪೋಸ್ಟರ್ ರಿಲೀಸ್ ಆಗಿವೆ. ಈ ಮೂಲಕ ಕೊಡಗಿನ ಕುವರಿಯ ಹಿಸ್ಟೋರಿಕಲ್ ಸಿನಿಮಾದ ಮಹಾನ್ ರಾಣಿಯ ರೂಪವೂ ಹೆಚ್ಚು ಗಮನ ಸೆಳೆಯುತ್ತಿದೆ.
ಹೌದು, ರಶ್ಮಿಕಾ ಮಂದಣ್ಣ ಅವರು ಮೊದಲ ಬಾರಿಗೆ ಐತಿಹಾಸಿಕ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಯಶುಬಾಯ್ ಮಹಾರಾಣಿಯಾಗಿ ರಶ್ಮಿಕಾ ಮಿಂಚಿದ್ದು, ಮೊದಲ ಪೋಸ್ಟರ್ ಬಿಡುಗಡೆ ಆಗಿದೆ. ರಶ್ಮಿಕಾ ಮಂದಣ್ಣ ಅವರ ಮಹಾರಾಣಿ ಗೆಟಪ್ಗೆ ಅಭಿಮಾನಿಗಳು ಫಿದಾ ಆಗಿದ್ದು, ಫೋಟೋ ಫುಲ್ ವೈರಲ್ ಆಗಿದೆ.
ಪುಷ್ಪ 2 ಬಳಿಕ ರಶ್ಮಿಕಾ ಮಂದಣ್ಣ ಅವರು ಛಾವ ಸಿನಿಮಾದ ಐತಿಹಾಸಿಕ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. Chhaava ಸಿನಿಮಾ ಛತ್ರಪತಿ ಶಿವಾಜಿ ಮಹಾರಾಜರ ಉತ್ತರಾಧಿಕಾರಿ ಛತ್ರಪತಿ ಸಾಂಭಾಜಿ ಮಹಾರಾಜ್ ಜೀವನನಾಧಾರಿತ ಚಿತ್ರ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಸಾಂಭಾಜಿ ಮಹಾರಾಜ್ ಪತ್ನಿ ಯಶುಬಾಯ್ ಮಹಾರಾಣಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದು, ಇದೇ ಫೆಬ್ರವರಿ 14ರಂದು ಛಾವ ಬಿಡುಗಡೆ ಆಗುತ್ತಿದೆ.ಡುಗಡೆ ಆಗುತ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?






