ಬಿಗ್ ಬಾಸ್ ಬಂದ್: ಡಿಕೆಶಿಗೂ, ಸುದೀಪ್ ಗೂ ತಂದಿಡೋ ಕೆಲಸ ಬೇಡ - ಶಾಸಕ ಬಾಲಕೃಷ್ಣ

ಅಕ್ಟೋಬರ್ 8, 2025 - 16:27
 0  9
ಬಿಗ್ ಬಾಸ್ ಬಂದ್: ಡಿಕೆಶಿಗೂ, ಸುದೀಪ್ ಗೂ ತಂದಿಡೋ ಕೆಲಸ ಬೇಡ - ಶಾಸಕ ಬಾಲಕೃಷ್ಣ

ಬಿಗ್ ಬಾಸ್ ಶೋ ಬಂದ್  ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆಶಿಗೂ, ಸುದೀಪ್ ಗೂ ತಂದಿಡೋ ಕೆಲಸ ಬೇಡ ಎಂದು ಶಾಸಕ ಬಾಲಕೃಷ್ಣ ಮನವಿ ಮಾಡಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನಟ್ಟು ಬೋಲ್ಟ್ ವಿಚಾರಕ್ಕೂ ಬಿಗ್‌ಬಾಸ್ ಶೋ ಬಂದ್ ಆಗಿದ್ದಕ್ಕೆ ಯಾವುದೇ ಸಂಬಂಧ ಇಲ್ಲ. ಈ ವಿಚಾರದಲ್ಲಿ ಸುದೀಪ್‌ಗೂ ಡಿಕೆಶಿ ಅವರಿಗೂ ತಂದಿಡೋದು ಬೇಡ. 

ಜೆಡಿಎಸ್ ಅವರು ಹೇಳ್ತಾರೆ. ಅವಘಡಗಳು ನಡೆದ್ರೆ ಯಾರು ಹೊಣೆ ಆಗ್ತಾರೆ? ಇದೇ ಭಾಗದಲ್ಲಿ ಮಂಗಳವಾರ ಸಿಲಿಂಡರ್ ಅವಘಡ ಆಗಿದೆ. ಇದು ಇಂಡಸ್ಟಿçಯಲ್ ಪ್ರದೇಶ ಆಗಿರುವುದರಿಂದ ಅವಘಡಗಳು ಆಗುತ್ತಿವೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ತೆಗೆದುಕೊಂಡಿರುವ ನಿರ್ಧಾರ ಎಂದು ಸಮರ್ಥಿಸಿಕೊಂಡರು.

ಜಿಲ್ಲಾಡಳಿತ 15 ದಿನ ಕಾಲಾವಕಾಶ ಕೊಟ್ಟಿರುವ ವಿಚಾರ ನನಗೆ ಗೊತ್ತಿಲ್ಲ. ಡಿಸಿಎಂ ಅವರು ದ್ವೇಷದ ರಾಜಕಾರಣ ಮಾಡಲ್ಲ. ಡಿಕೆಶಿ ಅವರಿಗೆ ಯಾವುದೇ ಹಳೆ ದ್ವೇಷ ಇಲ್ಲ. ಡಿಕೆಶಿ ಅವರೇ ಬಿಗ್‌ಬಾಸ್ ಶೋಗೆ ಅವಕಾಶ ಕೊಡಿ ಅಂತಾ ಹೇಳಿದ್ದಾರೆ. ಹಾಗಿದ್ದ ಮೇಲೆ ದ್ವೇಷದ ವಿಚಾರ ಎಲ್ಲಿಂದ ಬಂತು ಎನ್ನುವ ಮೂಲಕ ಡಿಸಿಎಂ ಪರ ಬ್ಯಾಟ್ ಬೀಸಿದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow