ಬಿಗ್ ಮನೆಗೆ ಎಂಟ್ರಿ ಕೊಟ್ಟ ನೂರು ಜನ್ಮಕ್ಕೂ ಸೀರಿಯಲ್ ತಂಡ: ವಿಜಿ ನೋಡಿ ಗೀತಾ ಭಾವುಕ!

ಕಲರ್ಸ್ ಕನ್ನಡದಲ್ಲಿ ಹೊಸದಾಗಿ ಶುರುವಾಗುತ್ತಿರುವ ನೂರು ಜನ್ಮಕ್ಕೂ ಸೀರಿಯಲ್ ತಂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದೆ. ಈ ಧಾರವಾಹಿಯಲ್ಲಿ ನಾಯಕನಾಗಿ ನಟಿಸುತ್ತಿರುವ ಧನುಷ್ ಅವರು ಹಿಂದೆ ಸೀರಿಯಲ್ ನಲ್ಲಿ ಮನೆ ಮಾತಾಗಿದ್ದರು. ಈ ಸೀರಿಯಲ್ ನಲ್ಲಿ ಭವ್ಯ ಕೂಡ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಹೀರೋ ಆಗಿ ಗೀತಾ ಸೀರಿಯಲ್ ಖ್ಯಾತಿಯ ಧನುಷ್ ಗೌಡ ಕಂಬ್ಯಾಕ್ ಮಾಡಿದ್ದಾರೆ. ನಾಯಕಿಯಾಗಿ ಶಿಲ್ಪಾ ಕಾಮತ್ ನಟಿಸುತ್ತಿದ್ದಾರೆ. ಆತ್ಮದ ಪಾತ್ರವನ್ನು ಚಂದನಾ ಗೌಡ ಬಣ್ಣ ಹಚ್ಚಿದ್ದಾರೆ. ಅಂತೆಯೇ ಬಿಗ್ಬಾಸ್ ಮನೆಯಲ್ಲಿ ಆತ್ಮರೂಪದಲ್ಲಿ ಚಂದನಾ ಗೌಡ ಅವರ ಮುಖ ಕಾಣಿಸಿದೆ. ಇದನ್ನು ನೋಡಿ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದಾರೆ.
ಬಿಗ್ಬಾಸ್ ಆಟದಲ್ಲಿ ಸ್ಪರ್ಧಿಗಳ ಜೊತೆಗಿನ ಕಿತ್ತಾಟದಿಂದ ನೆಮ್ಮದಿ ಕಳೆದುಕೊಂಡಿದ್ದ ಭವ್ಯ ಗೌಡಗೆ ಫುಲ್ ರಿಲ್ಯಾಕ್ಸ್ ಸಿಕ್ಕಿದೆ. ಮುಂದಿನ ವಾರಕ್ಕೆ ಕ್ಯಾಪ್ಟನ್ ಆಗಿರೋದು ಒಂದು ವಿಚಾರವಾದರೆ, ಇನ್ನೊಂದು ನಾಮಿನೇಷನ್ನಿಂದ ಪಾರಾಗಿದ್ದಾರೆ. ಇದೀಗ ಆತ್ಮೀಯ ಗೆಳೆಯ ಧನುಷ್ ಗೌಡ ಬಿಗ್ಬಾಸ್ ಮನೆಗೆ ಬಂದಿರೋದು ಮತ್ತೊಂದು ಖುಷಿಯಾಗಿದೆ. ಕಲರ್ಸ್ ಕನ್ನಡದ ಗೀತಾ ಸಿರಿಯಲ್ನಲ್ಲಿ ಭವ್ಯ ಹಾಗೂ ಧನುಷ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ವಿಜಿ ಮತ್ತು ಗೀತಾ ಪಾತ್ರದ ಮೂಲಕ ಈ ಜೋಡಿ ಸಖತ್ ಫೇಮಸ್ ಆಗಿತ್ತು. ಅಲ್ಲಿಂದ ಇವರಿಬ್ಬರ ಸ್ನೇಹದ ಬಾಂಡಿಂಗ್ ತುಂಬಾನೇ ಚೆನ್ನಾಗಿದೆ. ಈಗ ಧನುಷ್ ಬಿಗ್ಬಾಸ್ ಮನೆಗೆ ಬಂದು ಹೋಗಿರೋದು ಗೀತಾ ಅವರಿಗೆ ಮತ್ತಷ್ಟು ಶಕ್ತಿ ಸಿಕ್ಕಂತಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






