ಬೆಂಗಳೂರಲ್ಲಿ ಯುವತಿಗೆ ಲವ್ ಸೆ*ಕ್ಸ್ ದೋಖಾ? ಮದುವೆ ಆಗಬೇಕಂದ್ರೆ ಮತಾಂತರವಾಗಬೇಕಂತೆ..!
ಬೆಂಗಳೂರು ಹೆಚ್‌ಎಸ್‌ಆರ್ ಪೊಲೀಸ್ ಠಾಣೆಯಲ್ಲಿ ಲವ್ ಜಿಹಾದ್ ಆರೋಪದ ಪ್ರಕರಣ ದಾಖಲಾಗಿದ್ದು, ಮೊಹಮ್ಮದ್ ಇಶಾಕ್ ಎಂಬಾತನ ವಿರುದ್ಧ ಸಂತ್ರಸ್ತೆ ದೂರು ನೀಡಿದ್ದಾಳೆ.
2024 ಅಕ್ಟೋಬರ್ 17 ರಂದು ಪರಿಚಯವಾದ ಇಶಾಕ್ ಮತ್ತು ಯುವತಿಯ ನಡುವಿನ ಸಂಬಂಧ ಸ್ನೇಹದಿಂದ ಪ್ರೀತಿಯಾಗಲು ಹೆಚ್ಚು ಸಮಯ ಬೇಡವಾಗಿತ್ತು. ಅಕ್ಟೋಬರ್ 30 ರಂದು ಥಣಿಸಂದ್ರದ ಮಾಲ್ ನಲ್ಲಿ ಭೇಟಿಯಾದ ಇಬ್ಬರು ನಂತರ ಮದುವೆ ಬಗ್ಗೆ ಮಾತನಾಡಿಕೊಂಡಿದ್ದರು. ಇಶಾಕ್ ಮದುವೆಯ ಭರವಸೆ ನೀಡಿ, ದಾಸರಹಳ್ಳಿ ಖಾಸಗಿ ಹೋಟೆಲ್ ನಲ್ಲಿ ಯುವತಿಯನ್ನು ಕರೆಸಿ ಸಂಪರ್ಕ ಬೆಳೆಸಿದನೆಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಆದರೆ ನಂತರ ಇಶಾಕ್ ಬೇರೆ ಯುವತಿಯರ ಜೊತೆ ಸಂಪರ್ಕ ಹೊಂದುತ್ತಿರುವುದು ಗೊತ್ತಾಗಿದ್ದು, 2025 ಸೆಪ್ಟೆಂಬರ್ 14ರಂದು ಮುಸ್ಲಿಂ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯ ತಿಳಿದ ಬಳಿಕ, ಇಶಾಕ್ ಯುವತಿಯನ್ನು ಪದೇ ಪದೇ ಬೆದರಿಕೆ ಹಾಕುತ್ತಾನೆ ಎಂದು ಆರೋಪಿಸಲಾಗಿದೆ. "ನಿನ್ನ ದಾರಿಯನ್ನು ನೀನು ನೋಡಿಕೊ" ಎಂದು ತಿಳಿಸಿದ ಜೊತೆಗೆ, ಕರೆ ಮಾಡಿದರೆ ಕೊಲೆಮಾಡುವ ಬೆದರಿಕೆ ನೀಡಿದ್ದಾನೆ ಎಂದು ಸಂತ್ರಸ್ತೆ ದೂರು ಮಾಡಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಸಂತ್ರಸ್ತೆ, ಒಮ್ಮೆ ನಾನು ಆತ್ಮಹತ್ಯೆಗೆ ಯತ್ನಿಸಿದಾಗ ಇಶಾಕ್ ಕುಟುಂಬದವರು ಕರೆ ಮಾಡಿ ಕರೆಸಿಕೊಂಡಿದ್ದರು. ಯಾವ ಕಾರಣಕ್ಕೆ ಸೂಸೈಡ್ ಮಾಡಿಕೊಳ್ತೀಯಾ? ಕೇಸ್ ಅಂತೆಲ್ಲಾ ಹೋಗಬೇಡ. ಅವನೊಂದಿಗೆ ಮಾತನಾಡಿ ಒಂದು ನಿರ್ಧಾರ ಮಾಡು. ಏನಾದರೂ ಇದ್ರು ಮಾತನಾಡಿ ಬಗೆಹರಿಸಿಕೊಳ್ಳೋಣ ಎಂದು ಹೇಳಿದ್ದರು. ನನ್ನ ವಿಷಯವನ್ನು ಕುಟುಂಬಸ್ಥರಿಗೆ ಹೇಳಿರಲಿಲ್ಲ ಎಂದಿದ್ದಾರೆ.
ಒಂದು ದಿನ ಇಶಾಕ್‌ನ ಸೋದರ ಮತ್ತು ಬಾವ ಬಂದು ನನ್ನೊಂದಿಗೆ ಮಾತನಾಡಿ ಮತಾಂತರ ಆಗುವಂತೆ ಹೇಳಿದ್ದರು. ಮತಾಂತರವಾಗಲು 40 ದಿನ ಸಮಯ ಇರುತ್ತೆ. ನಮಾಜ್ ಮಾಡಲು ಕಲಿತುಕೊಳ್ಳಬೇಕು. ಮೊದಲು ಮತಾಂತರ ಆಗು, ಆನಂತರ ಮದುವೆ ಬಗ್ಗೆ ಮಾತನಾಡೋಣ ಎಂದಿದ್ದರು ಅಂತ ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ. ಸದ್ಯ
ನಿಮ್ಮ ಪ್ರತಿಕ್ರಿಯೆ ಏನು?