Bigg Boss ಗೆ ಮತ್ತೊಂದು ವಿಘ್ನ: ರಕ್ಷಿತಾ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ - ಅಶ್ವಿನಿ ಗೌಡ ವಿರುದ್ಧ ದೂರು ದಾಖಲು
ಬೆಂಗಳೂರು: ಪರಿಸರ ನಿಯಮ ಉಲ್ಲಂಘನೆ ಪ್ರಕರಣದ ವಿವಾದ ಇನ್ನೂ ಮಾಸದ ಮುನ್ನವೇ, ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸಹ ಸ್ಪರ್ಧಿ ರಕ್ಷಿತಾ ಶೆಟ್ಟಿ ಕುರಿತು “S” ಪದ ಬಳಕೆ ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ, ಹೈಕೋರ್ಟ್ ವಕೀಲ ಪ್ರಶಾಂತ್ ಮೆತಾಲ್ ಬಿಡದಿ ಪೊಲೀಸ್ ಠಾಣೆಯಲ್ಲಿ ಅಶ್ವಿನಿ ಹಾಗೂ ಆಯೋಜಕರ ವಿರುದ್ಧ ದೂರು ದಾಖಲಿಸಿದ್ದಾರೆ.
ಹೌದು ಕಳೆದ ವಾರ ಅಶ್ವಿನಿ ಮತ್ತು ಜಾನ್ವಿ, ಪುಟ್ಟ ಹುಡುಗಿ ರಕ್ಷಿತ ಶೆಟ್ಟಿ ಕುರಿತಾಗಿ ನಡೆದುಕೊಂಡ ರೀತಿ, ರಕ್ಷಿತಾಗೆ ಕೊಟ್ಟ ಹಿಂಸೆಗೆ ಮನೆಯವರಿಂದಲೇ ವಿರೋಧ ವ್ಯಕ್ತವಾಯ್ತು. ವಯಸ್ಸಿನಲ್ಲಿ ಕಿರಿವಳೆಂದು ಸಹ ನೋಡದೆ ರಕ್ಷಿತಾ ವಿರುದ್ಧ ಕಟು ವಾಗ್ದಾಳಿ ಮಾಡಿದ್ದರು.
ಆದರೆ ಈಗ ಅದೇ ಅಶ್ವಿನಿ ಗೌಡಗೆ ಮುಳುವಾಗಿದೆ. ರಕ್ಷಿತಾ ಮೇಲೆ ಜಗಳ ಮಾಡಿದ ಬಳಿಕ ಅಶ್ವಿನಿ ಗೌಡ ಬೇರೊಬ್ಬ ಸ್ಪರ್ಧಿಯೊಟ್ಟಿಗೆ ರಕ್ಷಿತಾ ಬಗ್ಗೆ ಮಾತನಾಡುತ್ತಾ ಪದವೊಂದನ್ನು ಬಳಕೆ ಮಾಡಿದ್ದರು. ಇದೀಗ ಆ ಕುರಿತಾಗಿ ಬಿಡದಿ ಪೊಲೀಸ್ ಠಾಣೆಯಲ್ಲಿ ಅಶ್ವಿನಿ ವಿರುದ್ಧ ದೂರು ದಾಖಲಾಗಿದೆ. ಹೈಕೋರ್ಟ್ನ ವಕೀಲರೊಬ್ಬರು ಅಶ್ವಿನಿ ಗೌಡ ವಿರುದ್ಧ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಹೈಕೋರ್ಟ್ ವಕೀಲ ಪ್ರಶಾಂತ್ ಮೆಹ್ತಾಲ್ ಎಂಬುವರು ಅಶ್ವಿನಿ ಗೌಡ ಹಾಗೂ ಬಿಗ್ಬಾಸ್ಗೆ ಸಂಬಂಧಿಸಿದ ಸಿನೆಸ್ ಹೆಡ್ ಪ್ರಶಾಂತ್ ನಾಯ್ಕ್, ಸುಷ್ಮಾ, ಪ್ರಕಾಶ್ ಸೇರಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ.
ರಕ್ಷಿತಾ ಕುರಿತಾಗಿ ‘ಶಿ ಈಸ್ ಎ ಎಸ್’ (She is a S) ಎಂದು ಅಶ್ವಿನಿ ಗೌಡ ಹೇಳಿದ್ದರು. ರಕ್ಷಿತಾರ ಉಡುಗೆ, ಆಕೆ ಇರುವ ರೀತಿ ಇದನ್ನೆಲ್ಲ ಉಲ್ಲೇಖಿಸಿ ‘ಶಿ ಈಸ್ ಎ ಎಸ್’ ಎಂದು ಅಶ್ವಿನಿ ಹೇಳಿದ್ದರು. ವೀಕೆಂಡ್ ಎಪಿಸೋಡ್ನಲ್ಲಿ ಸುದೀಪ್ ಸಹ ಅಶ್ವಿನಿ ಅವರ ಈ ಪದ ಬಳಕೆಯನ್ನು ಖಂಡಿಸಿದ್ದರು. ಅಶ್ವಿನಿ ಯಾವ ಅರ್ಥದಲ್ಲಿ ‘ಎಸ್’ ಎಂದಿದ್ದರು ಎಂಬುದು ಸ್ಪಷ್ಟವಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ‘ಎಸ್’ ಎಂಬುದನ್ನು ಬೇರೆ ಬೇರೆ ರೀತಿಯ ಅರ್ಥಗಳನ್ನು ಕೊಡಲಾಗುತ್ತಿದೆ.
ವೀಕೆಂಡ್ ಎಪಿಸೋಡ್ನಲ್ಲಿ, ಅಶ್ವಿನಿ ಅವರು ರಕ್ಷಿತಾ ಬಗ್ಗೆ ಆಡಿದ ಮಾತುಗಳಿಗೆ ಸುದೀಪ್ ಟೀಕಿಸಿದ ಬಳಿಕ ಅಲ್ಲಿಯೇ ಅಶ್ವಿನಿ ಅವರು ರಕ್ಷಿತಾ ಬಳಿ ಕ್ಷಮೆ ಕೇಳಿದರು. ರಕ್ಷಿತಾ ಸಹ ಅಶ್ವಿನಿ ಅವರನ್ನು ಕ್ಷಮಿಸಿದರು. ಆದರೆ ಈಗ ಆ ಘಟನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?