ಬೆಂಗಳೂರಿಗರ ಗಮನಕ್ಕೆ: ನಾಳೆ ಈ ಏರಿಯಾದಲ್ಲಿ ಪವರ್ ಕಟ್! ಎಲ್ಲೆಲ್ಲಿ?

ಜೂನ್ 26, 2025 - 16:01
 0  16
ಬೆಂಗಳೂರಿಗರ ಗಮನಕ್ಕೆ: ನಾಳೆ ಈ ಏರಿಯಾದಲ್ಲಿ ಪವರ್ ಕಟ್! ಎಲ್ಲೆಲ್ಲಿ?

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನಾಳೆ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ನಾಳೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಅದರಂತೆ ನಗರದ ಯಲಹಂಕ ನ್ಯೂ ಟೌನ್, ಬಳ್ಳಾರಿ ರಸ್ತೆ ಬಳಿಯ ವಡೇರಹಳ್ಳಿ, ವೈ-ಮ್ಯಾಕ್ ಸರ್ಕಲ್, ನಿಸರ್ಗ ಲೇಔಟ್, ಐವಿಆರ್‌ಐ, ಶ್ರೀಕ್ ಅಪಾರ್ಟ್‌ಮೆಂಟ್, ಬಿಎಂಎಸ್ ಹಾಸ್ಟೆಲ್, ಕಾಶಿರಾಮ್ ನಗರ, ಎಚ್‌ವಿವಿ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

ಅನಂತಪುರ, ಪುಟ್ಟೇನಹಳ್ಳಿ, ಇಸ್ರೋ ಲೇಔಟ್, ಎಲ್‌ಬಿಎಸ್ ನಗರ, ರಾಜನಕುಂಟೆ, ನೆಲಕುಂಟೆ, ಮಾರಸಂದ್ರ, ಸಿಲ್ವರ್ ಓಕ್ ಭಾಗಗಳು ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಈ ಕಾರಣ ಬೆಸ್ಕಾಂ, ಸಾರ್ವಜನಿಕರಿಗೆ ತೊಂದರೆಯಾಗಂದತೆ ಮುಂಜಾಗ್ರತಾ ಕ್ರಮವಾಗಿ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಿಕೊಂಳ್ಳುವುದಾಗಿ ತಿಳಿಸಿದೆ. ಅಲ್ಲದೆ, ಗ್ರಾಹಕರು ಹೆಚ್ಚಿನ ಮಾಹಿತಿಯನ್ನು ಸಹಾಯವಾಣಿ ಮೂಲಕ ತಿಳಿದುಕೊಳ್ಳಬಹುದು ಎಂದು ತಿಳಿಸಿದೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow