ಬೆಂಗಳೂರಿನಲ್ಲಿ Job ಸರ್ಚ್ ಮಾಡ್ತಿದ್ದೀರಾ!? ನಿಮಗಿಲ್ಲಿದೆ ಗುಡ್ ನ್ಯೂಸ್! ಕನ್ನಡಿಗರಿಗೆ ಮಾತ್ರ ಅವಕಾಶ!

ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಬೆಸ್ಕಾಂ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಬೆಸ್ಕಾಂ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನ ಮಾಡಿದ್ದು ಇತರೆ ಮೂಲಗಳಿಂದ ಬರುವ ಅರ್ಜಿಗಳನ್ನು ಸ್ವೀಕಾರ ಮಾಡಲ್ಲ ಎಂದು ಇಲಾಖೆ ಹೇಳಿದೆ. ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿಗೆ ನೀಡಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಮೀಸಲಾತಿ ಅನ್ವಯವಾಗುತ್ತದೆ. ಹೀಗಾಗಿ ಅರ್ಜಿ ಸಲ್ಲಿಕೆ ಮಾಡುವಾಗ ಅಭ್ಯರ್ಥಿ ಕೇಳಿದ ಮೀಸಲಾತಿ ಮಾತ್ರ ಉದ್ಯೋಗದಲ್ಲಿ ಅನ್ವಯ ಆಗುತ್ತದೆ. 18 ವರ್ಷ ಮೇಲ್ಪಟ್ಟವರಿಗೆ ಅವಕಾಶ ಇದೆ. ಒಂದು ವರ್ಷದವರೆಗೆ ತರಬೇತಿ ನೀಡಲಾಗುತ್ತದೆ.
ಅಪ್ರೆಂಟೀಸ್ ಉದ್ಯೋಗದ ಮಾಹಿತಿ
ಬಿಇ/ ಬಿಟೆಕ್- ಇಇ ಇಂಜಿನಿಯರಿಂಗ್- 130 ಹುದ್ದೆಗಳು
ಬಿಎ, ಬಿಎಸ್ಸಿ, ಬಿಕಾಮ್, ಬಿಬಿಎ, ಬಿಸಿಎ, ಬಿಬಿಎಂ, ಬಿಇ, ಬಿಟೆಕ್- 305 ಕೆಲಸಗಳು
ಡಿಪ್ಲೋಮಾದಲ್ಲಿ ಎಲ್ಲ ಕೋರ್ಸ್ಗಳು- 75
ಒಟ್ಟು ಉದ್ಯೋಗಗಳು= 510
ತರಬೇತಿ ವೇಳೆ ಮಾಸಿಕ ವೇತನ
8,000 ದಿಂದ 9,008 ರೂಪಾಯಿಗಳು
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ- 20 ಫೆಬ್ರುವರಿ 2025
ಆಯ್ಕೆ ಆದ ಅಭ್ಯರ್ಥಿಗಳ ಪಟ್ಟಿ ಘೋಷಣೆ ದಿನಾಂಕ- 01 ಮಾರ್ಚ್ 2025
ಸಂಪರ್ಕ ಮಾಡಲು-
knplacement@boat-srp.com
ದೂರವಾಣಿ ಸಂಖ್ಯೆ- 044- 22542235, 080- 22356756
ಆನ್ಲೈನ್ ಅಪ್ಲೇಗಾಗಿ- https://nats.education.gov.in/
ಸೂಚನೆ:-
ಕೇವಲ ಕರ್ನಾಟಕಕ್ಕೆ ಸೇರಿದ ಅಭ್ಯರ್ಥಿಗಳು ಮಾತ್ರ ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಹೊರ ರಾಜ್ಯದವರಿಗೆ ಅವಕಾಶ ಇರುವುದಿಲ್ಲ.
ನಿಮ್ಮ ಪ್ರತಿಕ್ರಿಯೆ ಏನು?






