ಬ್ಯಾಂಕ್ ಉದ್ಯೋಗ ಅರಸುತ್ತಿರುವವರಿಗೆ ಭರ್ಜರಿ ಅವಕಾಶ..! ತಿಂಗಳಿಗೆ ₹64,820. ರೂ ಸಂಬಳ
ಬ್ಯಾಂಕ್ ಆಫ್ ಮಹಾರಾಷ್ಟ್ರ ತನ್ನ ಅಧಿಕಾರಿ ಸ್ಕೇಲ್ 2 (ಜನರಲಿಸ್ಟ್ ಆಫೀಸರ್) ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ ನೇಮಕಾತಿಯಲ್ಲಿ ಒಟ್ಟು 84 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ bankofmaharashtra.in ಮೂಲಕ ಸೆಪ್ಟೆಂಬರ್ 30ರೊಳಗೆ ಆನ್ಲೈನ್ ಅರ್ಜಿ ಸಲ್ಲಿಸಬಹುದು.
ಅರ್ಹತೆ ಮತ್ತು ವಯೋಮಿತಿ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಬಿಇ, ಬಿಟೆಕ್, ಎಂಎಸ್ಸಿ ಅಥವಾ ಎಂಸಿಎ ಪದವಿಯನ್ನು ಹೊಂದಿರಬೇಕು. ವಯಸ್ಸಿನ ಮಿತಿಯನ್ನು ಕನಿಷ್ಠ 25 ವರ್ಷ ಮತ್ತು ಗರಿಷ್ಠ 50 ವರ್ಷ ಎಂದು ನಿಗದಿಪಡಿಸಲಾಗಿದೆ. ಮೀಸಲಾತಿ ವರ್ಗಗಳಿಗೆ ಸರ್ಕಾರದ ನಿಯಮಾನುಸಾರ ಸಡಿಲಿಕೆ ಸಿಗಲಿದೆ.
ಸಂಬಳದ ವಿವರ:
- ಸ್ಕೇಲ್ II: ₹64,820 – ₹93,960
- ಸ್ಕೇಲ್ III: ₹85,920 – ₹1,05,280
- ಸ್ಕೇಲ್ IV: ₹1,02,300 – ₹1,20,940
- ಸ್ಕೇಲ್ V: ₹1,20,940 – ₹1,35,020
- ಸ್ಕೇಲ್ VI: ₹1,40,500 – ₹1,56,500
ಭತ್ಯೆಗಳೊಂದಿಗೆ ಕೈಗೆ ಬರುವ ಸಂಬಳ ಇನ್ನಷ್ಟು ಹೆಚ್ಚಾಗಲಿದೆ.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಮೊದಲು ಲಿಖಿತ ಪರೀಕ್ಷೆಯ ಮೂಲಕ ಶಾರ್ಟ್ಲಿಸ್ಟ್ ಮಾಡಲಾಗುತ್ತದೆ. ನಂತರ ಸಂದರ್ಶನ ಹಂತ ನಡೆಯಲಿದ್ದು, ಇದರ ಆಧಾರದ ಮೇಲೆ ಅಂತಿಮ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ:
- ಸಾಮಾನ್ಯ, OBC, EWS: ₹1,180
- SC, ST: ₹118
ಅರ್ಜಿ ಸಲ್ಲಿಸುವ ವಿಧಾನ:
ಅಧಿಕೃತ ವೆಬ್ಸೈಟ್ನಲ್ಲಿ “ಹೊಸ ನೋಂದಣಿ” ಲಿಂಕ್ ಮೂಲಕ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ಫೋಟೋ/ಸಹಿಯನ್ನು ಅಪ್ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕ ಪಾವತಿಸಿ. ಅರ್ಜಿ ಸಲ್ಲಿಸಿದ ನಂತರ ಮುದ್ರಣವನ್ನು ತೆಗೆದುಕೊಂಡು ಇಟ್ಟುಕೊಳ್ಳುವುದು ಕಡ್ಡಾಯ.
ನಿಮ್ಮ ಪ್ರತಿಕ್ರಿಯೆ ಏನು?