ಬ್ಯಾಂಕ್ ನಲ್ಲಿ ಕೆಲಸ ಮಾಡೋ ಆಸಕ್ತಿ ಇದ್ಯಾ!? ಹಾಗಿದ್ರೆ ಬ್ಯಾಂಕ್ ಆಫ್ ಬರೋಡಾದಲ್ಲಿದೆ ಹಲವು ಉದ್ಯೋಗ!

ಫೆಬ್ರವರಿ 27, 2025 - 08:03
ಫೆಬ್ರವರಿ 25, 2025 - 15:19
 0  11
ಬ್ಯಾಂಕ್ ನಲ್ಲಿ ಕೆಲಸ ಮಾಡೋ ಆಸಕ್ತಿ ಇದ್ಯಾ!? ಹಾಗಿದ್ರೆ ಬ್ಯಾಂಕ್ ಆಫ್ ಬರೋಡಾದಲ್ಲಿದೆ ಹಲವು ಉದ್ಯೋಗ!

ತನ್ನಲ್ಲಿ ಖಾಲಿ ಇರುವ ಹಲವು ಹುದ್ದೆಗಳ ಭರ್ತಿಗೆ ಬ್ಯಾಂಕ್ ಆಫ್ ಬರೋಡಾ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಒಟ್ಟಾರೆ 4000 ಹುದ್ದೆಗಳಿಗೆ ಇದೀಗ ಅರ್ಜಿ ಆಹ್ವಾನಿಸಿದೆ. ಯಾವುದೇ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಫೆಬ್ರುವರಿ 19 ರಿಂದ ಆನ್‌ಲೈನ್‌ ಅರ್ಜಿ ಸ್ವೀಕಾರ ಆರಂಭಿಸಲಾಗಿದೆ. ಮಾರ್ಚ್‌ 11 ರವರೆಗೆ ಅಪ್ಲಿಕೇಶನ್‌ ಸಲ್ಲಿಸಬಹುದು.

ಉದ್ಯೋಗ ಬ್ಯಾಂಕ್ ಬ್ಯಾಂಕ್‌ ಆಫ್‌ ಬರೋಡಾಹುದ್ದೆಗಳ ಹೆಸರು ಗ್ರಾಜುಯೇಟ್ ಅಪ್ರೆಂಟಿಸ್.ಹುದ್ದೆಗಳ ಸಂಖ್ಯೆ 4000ಕರ್ನಾಟಕದ ಬ್ರ್ಯಾಂಚ್‌ಗಳಲ್ಲಿ ಹುದ್ದೆಗಳ ಸಂಖ್ಯೆ 537ಹುದ್ದೆಯ ಅವಧಿ 2025-26ನೇ ಸಾಲಿಗೆ ಒಂದು ವರ್ಷ ಮಾತ್ರ.

ಬ್ಯಾಂಕ್‌ ಆಫ್‌ ಬರೋಡಾ ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗೆ ವಿದ್ಯಾರ್ಹತೆ, ವಯಸ್ಸಿನ ಅರ್ಹತೆಗಳು
ಯಾವುದೇ ಅಂಗೀಕೃತ ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳಿಂದ ಪದವಿ ಪಡೆದಿರಬೇಕು.
ಕನಿಷ್ಠ 20 ವರ್ಷ ಆಗಿರಬೇಕು. ಗರಿಷ್ಠ 28 ವರ್ಷ ವಯಸ್ಸು ಮೀರಿರಬಾರದು.

ಬ್ಯಾಂಕ್‌ ಆಫ್‌ ಬರೋಡಾ ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
ಆನ್‌ಲೈನ್‌ ಮೂಲಕ ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ: 19-02-2025
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 11-03-2025

ಅಪ್ಲಿಕೇಶನ್‌ ಶುಲ್ಕ ಮಾಹಿತಿ
ಸಾಮಾನ್ಯ ಅರ್ಹತೆಗಳು, ಒಬಿಸಿ, ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.800.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಶುಲ್ಕ ರೂ.600.
ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ರೂ.400.
ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್‌, ಕ್ರೆಡಿಟ್ ಕಾರ್ಡ್‌, ಇಂಟರ್ನೆಟ್‌ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬಹುದು.

ಸ್ಟೈಫಂಡ್
ಅಪ್ರೆಂಟಿಸ್ ಹುದ್ದೆಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕ ರೂ.15000 ವರೆಗೆ ನೀಡಲಾಗುತ್ತದೆ.
ಮೆಟ್ರೋ ಸಿಟಿಗಳು / ನಗರ ಪ್ರದೇಶಗಳಲ್ಲಿ ರೂ.15,000.
ಗ್ರಾಮೀನ ಮತ್ತು ಹೋಬಳಿ ಮಟ್ಟದ ಶಾಖೆಗಳಿಗೆ ನೇಮಕ ಆಗುವ ಅಭ್ಯರ್ಥಿಗಳಿಗೆ ರೂ.12,000 ಮಾಸಿಕ ಸ್ಟೈಫಂಡ್ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸಗಳು: https://www.apprenticeshipindia.gov.in/ https://nats.education.gov.in/

ಸದರಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ, ಮೊದಲು Students ಮೆನು ಆಯ್ಕೆ ಮಾಡಿ, ರಿಜಿಸ್ಟ್ರೇಷನ್‌ ಪಡೆದುಕೊಳ್ಳಿ. ನಂತರ ಅರ್ಜಿ ಸಲ್ಲಿಸಬೇಕು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow