ಬ್ರೇಕ್ ಫಾಸ್ಟ್ʼಗೆ ಬ್ರೆಡ್ ಆಮ್ಲೆಟ್ ಸೇಫ್ ಅಲ್ವಾ? ತಿನ್ನೋಕು ಮೊದ್ಲು ಈ ವಿಚಾರ ತಿಳಿದುಕೊಳ್ಳಿ
ಬೆಳಗಿನ ಉಪಾಹಾರ ದಿನಪೂರ್ತಿ ಶಕ್ತಿಯುತವಾಗಿರಲು ನೆರವಾಗುತ್ತದೆ. ಆದರೆ ಇತ್ತೀಚಿನ ತ್ವರಿತ ಜೀವನಶೈಲಿಯಲ್ಲಿ ಹೆಚ್ಚಿನವರು ಸುಲಭವಾಗಿ 10 ನಿಮಿಷದಲ್ಲಿ ತಯಾರಾಗುವ ಫಾಸ್ಟ್ ಫುಡ್ ಆಯ್ಕೆಮಾಡುತ್ತಿದ್ದಾರೆ. ಈ ಪೈಕಿ ಬ್ರೆಡ್ ಆಮ್ಲೆಟ್ ಹೆಚ್ಚು ಜನಪ್ರಿಯವಾಗಿದೆ. ಆದರೆ ಇದನ್ನು ಪ್ರತಿದಿನವೂ ತಿನ್ನುವುದು ಆರೋಗ್ಯಕರವೇ?
ಪ್ರಯೋಜನಗಳು:
ಬ್ರೆಡ್ ಆಮ್ಲೆಟ್‌ನಲ್ಲಿ ಬಳಸುವ ಮೊಟ್ಟೆ ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ಸ್ನಾಯುಗಳಿಗೆ ಬಲ, ಚರ್ಮ, ಉಗುರು, ಮತ್ತು ಕೂದಲಿಗೆ ಆರೋಗ್ಯವನ್ನು ನೀಡುತ್ತದೆ. ಅಮೈನೋ ಆಮ್ಲಗಳು ದೇಹದ ಚಯಾಪಚಯ ಕ್ರಿಯೆಗೆ ಸಹಕಾರಿಯಾಗುತ್ತವೆ.
ಆಮ್ಲೆಟ್‌ನಲ್ಲಿ ಸಿಗುವ ಪೋಷಕಾಂಶಗಳು:
-
ಪ್ರೋಟೀನ್
-
ಕೊಬ್ಬು
-
ವಿಟಮಿನ್ B12, ವಿಟಮಿನ್ D
-
ಸಹಜ ಶಕ್ತಿದಾಯಕ ಅಂಶಗಳು
ಬ್ರೆಡ್ ಆಯ್ಕೆಯ ಮಹತ್ವ:
ಆರೋಗ್ಯಕರ ಬ್ರೆಡ್ ಆಯ್ಕೆ ಮಾಡುವುದು ಮುಖ್ಯ. ಬಹುಧಾನ್ಯದಿಂದ (whole grain) ತಯಾರಿಸಿದ ಬ್ರೆಡ್ ಫೈಬರ್ ಒಳಗೊಂಡಿರುತ್ತವೆ, ಜೀರ್ಣಕ್ರಿಯೆ ಸುಧಾರಿಸುತ್ತದೆ. ಆದರೆ ಸಾಧಾರಣ ಮೈದಾ ಅಥವಾ ಹಿಟ್ಟಿನ ಬ್ರೆಡ್ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸಬಹುದು.
ಎಚ್ಚರಿಕೆಯಿಂದ ಸೇವನೆ ಅಗತ್ಯ:
-
ಬ್ರೆಡ್‌ನಲ್ಲಿ ಪೋಷಕಾಂಶಗಳ ಪ್ರಮಾಣ ಕಡಿಮೆ ಮತ್ತು ಕ್ಯಾಲರಿ ಹೆಚ್ಚು ಇದ್ದರೆ ದೇಹಕ್ಕೆ ಸಂಪೂರ್ಣ ಪೌಷ್ಠಿಕಾಂಶ ಸಿಗದು.
-
ಬಡ್ತಿ ಮಾಡುವ ಅಡುಗೆ ಎಣ್ಣೆ (ಅಧಿಕ ಕೊಬ್ಬು) ಬಳಸಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
-
ವಾರದಲ್ಲಿ 2 ಮೊಟ್ಟೆ ಸೇವನೆಯು ಆರೋಗ್ಯಕರ, ಆದರೆ ಹೆಚ್ಚು ಸೇವಿಸಿದರೆ ಕೊಲೆಸ್ಟ್ರಾಲ್ ಸಮಸ್ಯೆಯು ಉಂಟಾಗುವ ಸಾಧ್ಯತೆಯಿದೆ ಎಂದು ಅಧ್ಯಯನಗಳು ಸೂಚಿಸುತ್ತವೆ.
ಮಿತವಾದ ಸೇವನೆ ಮುಖ್ಯ:
ಬ್ರೆಡ್ ಆಮ್ಲೆಟ್ ತಿನ್ನುವುದರಿಂದ ತಾತ್ಕಾಲಿಕ ಶಕ್ತಿ ಸಿಗುತ್ತದೆ. ಆದರೆ ಪ್ರತಿದಿನವೂ ಇದನ್ನು ಉಪಾಹಾರವನ್ನಾಗಿ ಮಾಡಿಕೊಂಡರೆ ಪೌಷ್ಠಿಕಾಂಶದ ಕೊರತೆ ಎದುರಾಗಬಹುದು. ಹೀಗಾಗಿ ಇದು ಒಳ್ಳೆಯ ಉಪಹಾರ ಆಯ್ಕೆಯಾದರೂ, ಮಿತವಾಗಿ ಹಾಗೂ ಸಮತೋಲನದೊಂದಿಗೆ ಸೇವಿಸುವುದು ಉತ್ತಮ.ಬ್ರೆಡ್ ಆಮ್ಲೆಟ್ ಆರೋಗ್ಯಕರ, ಆದರೆ ಯಾವ ರೀತಿ ತಯಾರಿಸುತ್ತೀರಿ, ಎಂತಹ ಬ್ರೆಡ್ ಬಳಸುತ್ತೀರಿ ಮತ್ತು ಎಷ್ಟು ಪ್ರಮಾಣದಲ್ಲಿ ಸೇವಿಸುತ್ತೀರಿ ಎಂಬುದರ ಮೇಲೆ ಇದರ ಪರಿಣಾಮ ಅವಲಂಬಿತವಾಗಿರುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?