ಮಂಗಳವಾರ ಈ ಕೆಲಸ ಮಾಡಿದ್ರೆ ಮನೆಯಲ್ಲಿ ಕಾಡುತ್ತೆ ಹಣದ ಸಮಸ್ಯೆ..!

ಜನವರಿ 21, 2025 - 07:10
 0  9
ಮಂಗಳವಾರ ಈ ಕೆಲಸ ಮಾಡಿದ್ರೆ ಮನೆಯಲ್ಲಿ ಕಾಡುತ್ತೆ ಹಣದ ಸಮಸ್ಯೆ..!

 ಮಂಗಳವಾರ ಆಂಜನೇಯನ ವಾರ ಎನ್ನಲಾಗುತ್ತದೆ. ಈ ದಿನ ನೀವು ಹನುಮಂತನ ಆರಾಧನೆ ಮಾಡುವುದರಿಂದ ಧೈರ್ಯ ಹಾಗೂ ಶಕ್ತಿ ಹೆಚ್ಚಾಗುತ್ತದೆ.  ಆದ್ರೆ ಮಂಗಳವಾರದಂದು ಕೆಲವೊಂದು ಕೆಲಸಗಳನ್ನು ಮಾಡುವುದು ಅಶುಭವಾಗಿರುತ್ತದೆ. ಹಾಗಾದರೆ, ಮಂಗಳವಾರ ನಾವು ಯಾವೆಲ್ಲಾ ಕೆಲಸಗಳನ್ನು ಮಾಡಬಾರದು ಗೊತ್ತೇ..?

ಕ್ಷೌರ ಮಾಡದಿರಿ:
ಮಂಗಳವಾರ ಕ್ಷೌರ ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ. ಇದು ಮಂಗಳ ದೋಷಕ್ಕೂ ಕಾರಣವಾಗುತ್ತದೆ. ಕಾರಣಕ್ಕಾಗಿ ಅಂದರೆ, ಬುಧವಾರವನ್ನು ಕ್ಷೌರ ಮಾಡುವುದಕ್ಕೆ ಅತ್ಯಂತ ವಿಶೇಷವಾದ ದಿನವೆಂದು ಪರಿಗಣಿಸಲಾಗುತ್ತದೆ.

ಇದನ್ನು ಖರೀದಿಸದಿರಿ:
ಮಂಗಳವಾರ ಮೇಕಪ್ ವಸ್ತುಗಳನ್ನು ಖರೀದಿಸಬೇಡಿ. ದಿನ ಸೌಂದರ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವುದರಿಂದ ವೈವಾಹಿಕ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ ಎನ್ನುವ ನಂಬಿಕೆಯಿದೆ. ಸೋಮವಾರ ಮತ್ತು ಶುಕ್ರವಾರವನ್ನು ಇದಕ್ಕಾಗಿ ಉತ್ತಮ ದಿನವೆಂದು ಪರಿಗಣಿಸಲಾಗುತ್ತದೆ.

ಉಗುರುಗಳನ್ನು ಕತ್ತರಿಸದಿರಿ:
ಮಂಗಳವಾರ ಉಗುರುಗಳನ್ನು ಕತ್ತರಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಇದನ್ನು ಮಾಡುವುದರಿಂದ ನೀವು ಅನೇಕ ತೊಂದರೆಗಳನ್ನು ಎದುರಿಸಬಹುದು. ಮಂಗಳವಾರ ತಪ್ಪಿಯೂ ಉಗುರುಗಳನ್ನು ಕತ್ತರಿಸುವ ಸಹವಾಸಕ್ಕೆ ಕೈಹಾಕಲೇಬೇಡಿ.

ಸಹೋದರರೊಂದಿಗೆ ಜಗಳವಾಡದಿರಿ:
ಮಂಗಳವಾರ ಹಿರಿಯ ಸಹೋದರರೊಂದಿಗೆ ಜಗಳವಾಡಬೇಡಿ. ಮಂಗಳವು ಅಣ್ಣನಿಗೆ ಸಂಬಂಧಿಸಿದ ಗ್ರಹವೆಂದು ಹೇಳಲಾಗುತ್ತದೆ. ಸಹೋದರನೊಂದಿಗಿನ ವಿವಾದವು ಜ್ಯೋತಿಷ್ಯದಲ್ಲಿ ಮಂಗಳ ಗ್ರಹದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ವ್ಯಕ್ತಿಯು ಅಪಘಾತ ಮತ್ತು ಇತರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಷ್ಟು ಮಾತ್ರವಲ್ಲ, ಕೌಟುಂಬಿಕ ಜೀವನದಲ್ಲೂ ನಿಮಗೆ ಸಮಸ್ಯೆಗಳು ಎದುರಾಗಬಹುದು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow