ಮಂತ್ರಾಲಯಕ್ಕೆ ಭೇಟಿ ಕೊಟ್ಟ ಶಿವಣ್ಣ: ಕುಟುಂಬ ಸಮೇತ ರಾಯರಿಗೆ ಪೂಜೆ!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇನ್ನು ರೆಸ್ಟ್ ಅಲ್ಲಿಯೇ ಇದ್ದಾರೆ. ವಿಶ್ರಾಂತಿಯಲ್ಲಿಯೇ ಇದ್ದು ತಮ್ಮ ಇಷ್ಟದ ಜಾಗಕ್ಕೂ ಹೋಗುತ್ತಿದ್ದಾರೆ. ಮನೆಗೆ ಬರೋ ಅಭಿಮಾನಿಗಳನ್ನ ಕೂಡ ಭೇಟಿ ಆಗುತ್ತಿದ್ದಾರೆ. ಇದರ ಮಧ್ಯೆ ಇದೀಗ ಶಿವರಾಜ್ ಕುಮಾರ್ ಮಂತ್ರಾಲಯಕ್ಕೂ ಹೋಗಿದ್ದಾರೆ.
ಇನ್ನೂ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಇತ್ತೀಚೆಗೆ ಅಮೇರಿಕಾದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದಿದ್ದಾರೆ.
ವಿಶ್ರಾಂತಿಯಲ್ಲಿರುವ ಶಿವಣ್ಣ ಶೂಟಿಂಗ್ನಿಂದ ಬಿಡುವು ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ರಾಯರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಶಿವಣ್ಣ ಜೊತೆ ಪತ್ನಿ ಗೀತಾ ಶಿವರಾಜ್ಕುಮಾರ್, ಪುತ್ರಿ ನಿವೇದಿತಾ ಕೂಡ ಇದ್ದರು. ಡಾ.ರಾಜ್ ಕುಟುಂಬ ಮೊದಲಿನಿಂದಲೂ ಗುರು ರಾಯರನ್ನು ಆರಾಧಿಸುತ್ತ ಬಂದಿದೆ.
ಇನ್ನು ಕೆಲವೇ ದಿನಗಳಲ್ಲಿ ಶಿವಣ್ಣ ಚಿತ್ರೀಕರಣಕ್ಕೆ ವಾಪಸ್ಸಾಗಲಿದ್ದು, ಈಗಾಗಲೇ ಬಿರುಸಿನ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಸದ್ಯಕ್ಕೆ 45 ಸಿನಿಮಾ ಕೊನೆಯ ಹಂತದ ಪ್ಯಾಚ್ ವರ್ಕ್ನಲ್ಲಿದೆ. ಪ್ರಮೋಷನಲ್ ಸಾಂಗ್ ಶೂಟಿಂಗ್ಗಾಗಿ ಶಿವಣ್ಣ ಉಗಾಂಡಗೆ ತೆರಳುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಶಿವಣ್ಣಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಹೀಗಾಗಿ ಅಮೆರಿಕಗೆ ತೆರಳಿದ್ದ ಅವರು, ಅಲ್ಲಿ ಚಿಕಿತ್ಸೆ ಪಡೆದು ವಾಪಸ್ ಆಗಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






