ಮಗ ಬೌಲಿಂಗ್ ನೋಡ್ತಿದ್ದ ತಂದೆಗೆ ಹೃದಯಾಘಾತ! ಸುದ್ದಿ ಕೇಳಿ ಓಡಿಹೋದ ಡುನಿತ್ ವೆಲ್ಲಾಲ
ಕೊಲಂಬೊ: ಶ್ರೀಲಂಕಾದ ಆಲ್‌ರೌಂಡರ್ ಡುನಿತ್ ವೆಲ್ಲಾಲಗೆ ಏಷ್ಯಾಕಪ್ ಪಂದ್ಯಾವಳಿಯ ಮಧ್ಯೆಯೇ ಕುಟುಂಬಕ್ಕೆ ಶಾಕಿಂಗ್ ನ್ಯೂಸ್ ಕಾದಿತ್ತು.. ಅಫ್ಘಾನಿಸ್ತಾನ ವಿರುದ್ಧ ನಡೆದ ಪಂದ್ಯದ ವೇಳೆ ಡುನಿತ್ ಅವರ ತಂದೆ ಸುರಂಗ ವೆಲ್ಲಾಲಗೆ ಹೃದಯಾಘಾತದಿಂದ ನಿಧನರಾದರು ಎಂದು ಶ್ರೀಲಂಕಾದ ಮಾಧ್ಯಮಗಳು ವರದಿ ಮಾಡಿವೆ.
ಪಂದ್ಯದ ಸಮಯದಲ್ಲೇ ಈ ವಿಷಯ ತಿಳಿದುಬಂದರೂ, ಡುನಿತ್ ಅವರಿಗೆ ಸುದ್ದಿಯನ್ನು ಪಂದ್ಯದ ನಂತರ ಮಾತ್ರ ತಿಳಿಸಲಾಯಿತು. ಕೇವಲ 22 ವರ್ಷದ ಆಲ್‌ರೌಂಡರ್‌ಗೆ ಇದು ವೃತ್ತಿ ಮತ್ತು ವೈಯಕ್ತಿಕ ಜೀವನದ ಎರಡರಲ್ಲಿಯೂ ಕಹಿ ದಿನವಾಗಿತ್ತು. ಆ ದಿನ ಅವರು ನಾಲ್ಕು ಓವರ್‌ಗಳಲ್ಲಿ 49 ರನ್ ಬಿಟ್ಟು ಕೇವಲ ಒಂದು ವಿಕೆಟ್ ಪಡೆದಿದ್ದರು. ಇನ್ನಿಂಗ್ಸ್‌ನ ಕೊನೆಯ ಓವರ್ ಬೌಲಿಂಗ್ ಮಾಡುವಾಗ, ಮೊಹಮ್ಮದ್ ನಬಿ ಅವರಿಂದ ಸತತ ಐದು ಸಿಕ್ಸರ್‌ಗಳು ಬಿದ್ದವು.
ಈ ನಡುವೆ, ಡುನಿತ್‌ಗೆ ತಂಡದ ಸಹ ಆಟಗಾರರು, ವ್ಯವಸ್ಥಾಪಕರು ಹಾಗೂ ಸಹಾಯಕ ಸಿಬ್ಬಂದಿ ಬೆಂಬಲ ನೀಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.ಕಳೆದ ತಿಂಗಳು ಭಾರತ ವಿರುದ್ಧದ ಏಕದಿನ ಪಂದ್ಯದಲ್ಲಿ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ (5/27) ನೀಡಿದ್ದ ಡುನಿತ್, ಶ್ರೀಲಂಕಾ ತಂಡದಲ್ಲಿ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದರು. ಆದರೆ ಅಫ್ಘಾನಿಸ್ತಾನ ವಿರುದ್ಧದ ಈ ಪಂದ್ಯವು ಅವರಿಗೆ ಶಾಶ್ವತವಾಗಿ ದುಃಖದ ನೆನಪು ತಂದಿದೆ.
ನಿಮ್ಮ ಪ್ರತಿಕ್ರಿಯೆ ಏನು?