ಮನೆ ಲೀಸ್ ಗೆ ಹೋಗೋ ಮುನ್ನಾ ಈ ಸ್ಟೋರಿ ನೋಡಿ; ನಿಮ್ಮ ಹಣ ಪಂಗನಾಮ ಆಗ್ಬಹುದು ಹುಷಾರ್!

ಸೆಪ್ಟೆಂಬರ್ 16, 2025 - 22:19
 0  16
ಮನೆ ಲೀಸ್ ಗೆ ಹೋಗೋ ಮುನ್ನಾ ಈ ಸ್ಟೋರಿ ನೋಡಿ; ನಿಮ್ಮ ಹಣ ಪಂಗನಾಮ ಆಗ್ಬಹುದು ಹುಷಾರ್!

ಬೆಂಗಳೂರು:- ನಗರದಲ್ಲಿ ಮನೆಗಳನ್ನು ಬಾಡಿಗೆಗೆ ಬದಲು ಲೀಸ್‌ ಗೆ ಹಾಕಿಕೊಂಡರೆ ಹಣ ಉಳಿತಾಯವಾಗುತ್ತದೆ ಎಂದು ಯೋಚನೆ ಮಾಡಿ ಮನೆಗಳನ್ನು ಲೀಸ್‌ಗೆ ಹಾಕಿಸಿಕೊಳ್ಳುವವರೇ ಎಚ್ಚರ.

ಬ್ಯಾಂಕ್‌ಗಳಲ್ಲಿ ಸುರಕ್ಷಿತವಾಗಿರುವ ಹಣವನ್ನು ಲೀಸ್‌ಗೆಂದು ಕೊಡುವ ಮೊದಲು ಸಾಕಷ್ಟು ಯೋಚನೆ ಮಾಡಿ. ಏಕೆಂದರೆ, ಮನೆಗಳನ್ನು ಬಾಡಿಗೆ ಪಡೆದು ಅದೇ ಮನೆಯನ್ನು ಮತ್ತೊಬ್ಬರಿಗೆ ಲಕ್ಷಾಂತರ ರೂ.ಗೆ ಲೀಸ್‌ಗೆ ಕೊಟ್ಟು ಆ ಹಣದೊಂದಿಗೆ ಪರಾರಿಯಾಗುವ ವಂಚಕ ಗ್ಯಾಂಗ್‌ಗಳು ಸಕ್ರಿಯವಾಗಿವೆ. ಅದರಂತೆ ನಗರದ ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ಮಾಲೀಕನ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.

ಮನೆಗಳನ್ನು ಬಾಡಿಗೆ ಪಡೆದು, ಲೀಸ್‍ಗೆ ಕೊಟ್ಟು ನೂರಾರು ಮಂದಿಗೆ ವಂಚನೆ ಮಾಡಿದ ಆರೋಪ ಕೇಳಿ ಬಂದಿದೆ. ವಿವೇಕ್ ಕೇಶವನ್ ಎಂಬಾತ ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಬ್ರೋಕರ್ ಕಂಪನಿಯ ಮಾಲೀಕನಾಗಿದ್ದು, ಈತನ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. 

ಈತ ಮಾರತ್ತಹಳ್ಳಿ, ಬಾಣಸವಾಡಿ, ಅಮೃತಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ಗಳನ್ನು ಬಾಡಿಗೆಗೆ ಪಡೆಯುತ್ತಿದ್ದ. ಬಳಿಕ ಲೀಸ್‍ಗಾಗಿ ಮನೆ ಹುಡುಕುತ್ತಿದ್ದವರಿಗೆ ವೆಬ್‍ಸೈಟ್‍ನಲ್ಲಿ ಗಾಳ ಹಾಕುತ್ತಿದ್ದ. ಬಳಿಕ ಅವರಿಂದ ಹಣ  ಪಡೆದು ಮನೆ ಕೀ ನೀಡುತ್ತಿದ್ದ. ಮನೆ ಮಾಲೀಕರಿಗೆ ಸರಿಯಾಗಿ 2 ತಿಂಗಳು ಬಾಡಿಗೆ ಹಣ ನೀಡುತ್ತಿದ್ದ. ಆಮೇಲೆ ಹಣ ಕೊಡುತ್ತಿರಲಿಲ್ಲ. ಈ ವೇಳೆ ಮನೆಯಲ್ಲಿದ್ದವರನ್ನು ಮಾಲೀಕರು ವಿಚಾರಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ಹೀಗೆ ಸುಮಾರು 60 ಕೋಟಿ ರೂ.ಗೂ ಹೆಚ್ಚಿನ ಹಣವನ್ನು ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ

ಈಗ ಲಕ್ಷಾಂತರ ರೂಪಾಯಿ ಹಣ ಕೊಟ್ಟು ಲೀಸ್‍ಗೆ ಪಡೆದಿದ್ದವರು ಮಾತ್ರ ಬೀದಿಗೆ ಬಿದ್ದಿದ್ದಾರೆ. ಆರೋಪಿ ವಿರುದ್ಧ ಕ್ರಮಕೈಗೊಳ್ಳುವಂತೆ ವಂಚನೆಗೊಳಗಾದ ಜನ ಒತ್ತಾಯಿಸಿದ್ದಾರೆ

ಈ ಸಂಬಂಧ ವಿವೇಕ್ ಕೇಶವನ್ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow