ಮನೆಯಲ್ಲಿ ವಿಪರೀತ ಗೆದ್ದಲು ಕಾಟ ಇದೆಯಾ? ಹೆಚ್ಚು ರಿಸ್ಕ್ ಬೇಡ, ಜಸ್ಟ್ ಹೀಗೆ ಮಾಡಿ!

ಡಿಸೆಂಬರ್ 1, 2024 - 07:14
ನವೆಂಬರ್ 29, 2024 - 17:36
 0  12
ಮನೆಯಲ್ಲಿ ವಿಪರೀತ ಗೆದ್ದಲು ಕಾಟ ಇದೆಯಾ? ಹೆಚ್ಚು ರಿಸ್ಕ್ ಬೇಡ, ಜಸ್ಟ್ ಹೀಗೆ ಮಾಡಿ!

ಅನೇಕ ಜನರ ಮನೆಯಲ್ಲಿ ಗೆದ್ದಲಿನ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಮರದ ಪೀಠೋಪಕರಣಗಳು, ಕಿಟಕಿಗಳು ಮತ್ತು ಬಾಗಿಲುಗಳಿಗೆ ಗೆದ್ದಲು ಹಿಡಿಯುತ್ತಿರುತ್ತದೆ. ಮಳೆಗಾಲದಲ್ಲಿ ಗಾಳಿಯಲ್ಲಿ ತೇವಾಂಶ ಅಧಿಕಾಗಿರುವುದರಿಂದ ಈ ಸಮಸ್ಯೆ ಹೆಚ್ಚಿರುತ್ತದೆ. ಆದರೆ, ಅನೇಕ ಜನರು ಗೆದ್ದಲನ್ನು ತೋಲಗಿಸಲು ಪೆಸ್ಟ್ ಕಂಟ್ರೊಲ್​ ಗಳನ್ನು ಬಳಸುತ್ತಾರೆ. ಆದರೆ, ಇದರಲ್ಲಿರುವ ರಾಸಾಯನಿಕಗಳು ಹಲವು ಆರೋಗ್ಯ ಸಮಸ್ಯೆಗಳನ್ನುಂಟು ಮಾಡುತ್ತವೆ. ಹೀಗಾಗಿ ಗೆದ್ದಲನ್ನು ನೈಸರ್ಗಿಕವಾಗಿ ತೊಡೆದುಹಾಕಲು ತಜ್ಞರು ಸಲಹೆ ಕೊಡುತ್ತಾರೆ. 

ಹಾಗಾದರೆ ಈ ಗೆದ್ದಲು ಹುಳಗಳನ್ನು ಹೇಗೆ ಓಡಿಸುವುದು ಎಂದು ನೀವು ಚಿಂತೆ ಮಾಡುತ್ತಿದ್ದರೆ ಅದಕ್ಕೆ ಇಲ್ಲಿದೆ ನೋಡಿ ಪರಿಹಾರ. ಈ ರೀತಿ ಮಾಡಿದರೆ ಖಂಡಿತ ನಿಮಗೆ ಗೆದ್ದಲು ಹುಳದ ಸಮಸ್ಯೆ ಇರುವುದಿಲ್ಲ.

ಈ ಗೆದ್ದಲುಗಳು ನೋಡಲು ತುಂಬಾ ಚಿಕ್ಕದಾಗಿರುತ್ತವೆ. ಆದರೆ ಇವು ಮಾಡುವ ಹಾನಿ ಅಷ್ಟಿಷ್ಟಲ್ಲ. ಈ ಗೆದ್ದಲುಗಳು ಮರದ ಕಿಟಕಿಗಳು, ಗೋಡೆಗಳು, ಬಾಗಿಲುಗಳ ಜೊತೆಗೆ ಪುಸ್ತಕಗಳನ್ನು ತಿನ್ನುತ್ತವೆ. ಇದರಿಂದಾಗಿ ಬಹಳಷ್ಟು ನಷ್ಟವಾಗುತ್ತದೆ. ಇವುಗಳನ್ನು ಹಾಗೆಯೇ ಬಿಟ್ಟರೆ, ಅವು ನಮ್ಮ ಮನೆಯನ್ನೇ ನಾಶಮಾಡುತ್ತವೆ. 

ನಿಮ್ಮ ಮನೆಯಲ್ಲಿ ಗೆದ್ದಲುಗಳಿದ್ದರೆ ಅವುಗಳನ್ನು ಮೊದಲೇ ಗುರುತಿಸಿ. ಒಂದು ವೇಳೆ ಇದ್ದರೆ.. ಮನೆಯಿಂದ ಹೇಗೆ ಓಡಿಸಬೇಕೆಂದು ಈಗ ತಿಳಿದುಕೊಳ್ಳೋಣ

ಲವಂಗ: ಗೆದ್ದಲನ್ನು ತಡೆಯಲು ಲವಂಗ ತುಂಬಾ ಉಪಯುಕ್ತ ಎನ್ನುತ್ತಾರೆ ತಜ್ಞರು. ಅದಕ್ಕಾಗಿ ಮೊದಲು ಕೆಲವು ಲವಂಗ ತೆಗೆದುಕೊಂಡು ನೀರಿನಲ್ಲಿ ಚೆನ್ನಾಗಿ ಕುದಿಸಬೇಕು. ಆ ನೀರು ತಣ್ಣಗಾದ ನಂತರ, ಅದನ್ನು ಸ್ಪ್ರೇ ಬಾಟಲಿಗೆ ಸುರಿದುಕೊಂಡು ಗೆದ್ದಲು ಇರುವಲ್ಲಿ ಸಿಂಪಡಿಸಬೇಕು. ಆಗಾಗ್ಗೆ ಹೀಗೆ ಮಾಡುವುದರಿಂದ ಲವಂಗದ ವಾಸನೆಗೆ ಗೆದ್ದಲು ಹುಳುಗಳು ಸಾಯುತ್ತವೆ ಎನ್ನುತ್ತಾರೆ ತಜ್ಞರು.ಬೇವಿನ ಎಣ್ಣೆ:ಗೆದ್ದಲು ಹುಳುಗಳು ನಿವಾರಿಸಲು ಬೇವಿನ ಎಣ್ಣೆಯು ಸಹ ಪರಿಣಾಮಕಾರಿ ಕೆಲಸ ಮಾಡುತ್ತದೆ. ಮೊದಲು ಸ್ಪ್ರೇ ಬಾಟಲಿಗೆ ಬೇವಿನ ಎಣ್ಣೆಯನ್ನು ಸುರಿದುಕೊಂಡು ಗೆದ್ದಲು ಇರುವೆಡೆ ಸಿಂಪಡಿಸಿ. ಇಲ್ಲದಿದ್ದರೆ, ನೀವು ಒಣ ಬಟ್ಟೆಯ ಮೇಲೆ ಸ್ವಲ್ಪ ಬೇವಿನ ಎಣ್ಣೆಯನ್ನು ಸುರಿದುಕೊಂಡು ಗೆದ್ದಲು ಇರುವ ಪ್ರದೇಶದಲ್ಲಿ ಒರೆಸಬೇಕು. ಹೀಗೆ ಮಾಡಿದರೆ ಗೆದ್ದಲು ಬರದಂತೆ ತಡೆಯಬಹುದು ಎನ್ನುತ್ತಾರೆ ತಜ್ಞರು. ಅಲ್ಲದೇ, ಈ ಸ್ಪ್ರೇ ಅನ್ನು ಕಿಟಕಿ, ಬಾಗಿಲು ಮತ್ತು ಕೋಣೆಯ ಮೂಲೆಗಳಲ್ಲಿ ಸಿಂಪಡಿಸುವುದರಿಂದ ಸೊಳ್ಳೆಗಳು ಮತ್ತು ಕೀಟಗಳು ಸಹ ಬರುವುದಿಲ್ಲ.


ನಿಂಬೆ ರಸ, ವಿನೆಗರ್

ನಿಂಬೆ ರಸ ಮತ್ತು ವಿನೆಗರ್‌ನಿಂದ ಮನೆಯಲ್ಲಿ ಗೆದ್ದಲುಗಳನ್ನು ತೊಡೆದುಹಾಕಬಹುದು. ಗೆದ್ದಲುಗಳನ್ನು ಮನೆಯಿಂದ ಓಡಿಸಲು ಈ ಎರಡೂ ತುಂಬಾ ಪರಿಣಾಮಕಾರಿ. ಗೆದ್ದಲುಗಳಿಗೆ ನಿಂಬೆ ವಾಸನೆ ಇಷ್ಟವಾಗುವುದಿಲ್ಲ.

ಗೆದ್ದಲುಗಳನ್ನು ತೊಡೆದುಹಾಕಲು ಎರಡು ಟೀ ಚಮಚ ವಿನೆಗರ್‌ನಲ್ಲಿ ಒಂದು ಟೀ ಚಮಚ ನಿಂಬೆ ರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಸ್ವಲ್ಪ ನೀರು ಹಾಕಿ ಮಿಶ್ರಣ ಮಾಡಿ. ಇದನ್ನು ಗೆದ್ದಲುಗಳಿರುವ ಜಾಗದಲ್ಲಿ ಸ್ಪ್ರೇ ಮಾಡಿ. ಹೀಗೆ ಆಗಾಗ್ಗೆ ಮಾಡಿದರೆ ಗೆದ್ದಲುಗಳು ನಾಶವಾಗುತ್ತವೆ. ಮತ್ತೆ ಮನೆಗೆ ಬರುವುದಿಲ್ಲ.

ಲವಂಗ

ಲವಂಗದಿಂದಲೂ ಮನೆಯಲ್ಲಿ ಗೆದ್ದಲುಗಳನ್ನು ತೊಡೆದುಹಾಕಬಹುದು. ಆದರೆ ಇವುಗಳನ್ನು ನೇರವಾಗಿ ಬಳಸಬಾರದು. ಒಂದು ಪಾತ್ರೆಯಲ್ಲಿ ನೀರು ಹಾಕಿ ಲವಂಗವನ್ನು ಹಾಕಿ ಚೆನ್ನಾಗಿ ಕುದಿಸಿ. ಈ ನೀರು ತಣ್ಣಗಾದ ನಂತರ ಸ್ಪ್ರೇ ಬಾಟಲಿಯಲ್ಲಿ ಹಾಕಿ. ಇದನ್ನು ಗೆದ್ದಲುಗಳಿರುವ ಜಾಗದಲ್ಲಿ ಸ್ಪ್ರೇ ಮಾಡಿ. ಇದರಿಂದ ಗೆದ್ದಲುಗಳು ಸಂಪೂರ್ಣವಾಗಿ ನಾಶವಾಗುತ್ತವೆ.

ಸಿಟ್ರಸ್ ಎಣ್ಣೆ

ಸಿಟ್ರಸ್ ಎಣ್ಣೆಯಿಂದಲೂ ಗೆದ್ದಲುಗಳನ್ನು ಓಡಿಸಬಹುದು. ನಿಂಬೆ ಹಣ್ಣಿನಲ್ಲಿ ಸಿಟ್ರಸ್ ಹೆಚ್ಚಾಗಿರುತ್ತದೆ. ಮನೆಯಲ್ಲಿ ಗೆದ್ದಲುಗಳನ್ನು ತೊಡೆದುಹಾಕಲು ನೀವು ಸಿಟ್ರಸ್ ಎಣ್ಣೆಯನ್ನು ಬಳಸಿ. ಈ ಸಿಟ್ರಸ್ ಎಣ್ಣೆ ಎಲ್ಲಾ ಅಂಗಡಿಗಳಲ್ಲಿ ಸಿಗುತ್ತದೆ. ಈ ಎಣ್ಣೆಯನ್ನು ಸ್ಪ್ರೇ ಮಾಡಿದರೆ ಗೆದ್ದಲುಗಳು ಸಂಪೂರ್ಣವಾಗಿ ಹೋಗುತ್ತವೆ.

ಬೇವಿನ ಎಣ್ಣೆ

ಬೇವಿನ ಎಣ್ಣೆಯಿಂದಲೂ ಗೆದ್ದಲುಗಳನ್ನು ಸಂಪೂರ್ಣವಾಗಿ ತೊಡೆದುಹಾಕಬಹುದು. ಬೇವಿನ ಎಣ್ಣೆಯ ವಾಸನೆ ಗೆದ್ದಲುಗಳನ್ನು ನಾಶಮಾಡುತ್ತದೆ. ಈ ಎಣ್ಣೆಯಿಂದ ಗೆದ್ದಲುಗಳು ಮಾತ್ರವಲ್ಲ, ಮನೆಯಲ್ಲಿರುವ ನೊಣಗಳು, ಚಿಟ್ಟೆಗಳು, ಸಣ್ಣ ಪುಟ್ಟ ಹುಳುಗಳನ್ನು ಕೂಡ ತೊಡೆದುಹಾಕಬಹುದು. ಇದಕ್ಕಾಗಿ ಬೇವಿನ ಎಣ್ಣೆಯನ್ನು ಒಂದು ಬಟ್ಟೆಯಲ್ಲಿ ಅದ್ದಿ ಗೆದ್ದಲುಗಳಿರುವ ಜಾಗದಲ್ಲಿ ಒರೆಸಿದರೆ ಸಾಕು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow