ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಮನೆ ಸೇರಲಿದ್ದಾರೆ ಖ್ಯಾತ ನಟಿಯ ಅಕ್ಕ.. ಯಾರವರು?
ಮಾಜಿ ಪೊಲೀಸ್ ಅಧಿಕಾರಿ ಭಾರತೀಯ ರಾಜಕಾರಣಿ ಭಾಸ್ಕರ್ ರಾವ್ ಅವರು ತಮ್ಮ ಕರ್ತವ್ಯ ನಿಷ್ಟೆಯಿಂದ ಭಾರೀ ಹೆಸರು ಮಾಡಿದವರು. 2 ಆಗಸ್ಟ್ 2019 ರಿಂದ 1 ಆಗಸ್ಟ್ 2020 ರವರೆಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ.
ಇನ್ನೂ ಇವರ ಮನೆಗೆ ಸ್ಯಾಂಡಲ್ವುಡ್ ನಟಿ ರೀಷ್ಮಾ ನಾಣಯ್ಯ ನಿವಾಸದಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಇಂದು ನಟಿ ರೀಷ್ಮಾ ನಾಣಯ್ಯ ಅವರ ಅಕ್ಕ ವಿಷ್ಮಾ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಸಂತನಗರದ ಕೊಡವ ಸಮಾಜದಲ್ಲಿ ಮದುವೆ ಸಮಾರಂಭ ನಡೆದಿದೆ.
ವಿಶೇಷ ಏನೆಂದರೆ ರೀಷ್ಮಾ ನಾಣಯ್ಯ ಅಕ್ಕ ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರ ಪುತ್ರ ಅನಿರುದ್ಧ್ ಜೊತೆಗೆ ಮದುವೆಯಾಗಿದ್ದಾರೆ. ಅಕ್ಕನ ಅದ್ಧೂರಿ ಮದುವೆಯಲ್ಲಿ ತಂಗಿ ರೀಷ್ಮಾ ನಾಣಯ್ಯ ಲಕ ಲಕ ಅಂತ ಮಿಂಚಿದ್ದಾರೆ. ಹಳದಿ ಬಣ್ಣದ ಸೀರೆಯನ್ನು ತೊಟ್ಟು ಕ್ಯೂಟ್ ಆಗಿ ನಗುತ್ತಿದ್ದಾರೆ. ಸದ್ಯ ಅಕ್ಕನ ಮದುವೆ ಸಂಭ್ರಮದಲ್ಲಿ ರೀಷ್ಮಾ ನಾಣಯ್ಯ ಬ್ಯುಸಿಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಕೊಡಗಿ ಕುವರಿಯಾಗಿರೋ ನಟಿ ರೀಷ್ಮಾ ನಾಣಯ್ಯ ಜೋಗಿ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಸಿನಿಮಾ ಮೂಲಕ ರೀಷ್ಮಾ ನಾಣಯ್ಯ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಈ ಸಿನಿಮಾದಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು.
ನಿಮ್ಮ ಪ್ರತಿಕ್ರಿಯೆ ಏನು?