ಮಾಟ ಮಂತ್ರ ಮಾಡಿ ಮಗು ಬಲಿ ಕೊಡಲು ಮುಂದಾದ ತಂದೆ: ಪೊಲೀಸರ ರಕ್ಷಣೆ ಕೋರಿದ ತಾಯಿ!

ಅಕ್ಟೋಬರ್ 29, 2024 - 18:00
 0  16
ಮಾಟ ಮಂತ್ರ ಮಾಡಿ ಮಗು ಬಲಿ ಕೊಡಲು ಮುಂದಾದ ತಂದೆ: ಪೊಲೀಸರ ರಕ್ಷಣೆ ಕೋರಿದ ತಾಯಿ!

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ನಿಧಿಗಾಗಿ ಹೆತ್ತ ಮಗುವನ್ನೇ ಬಲಿ ಕೊಡಲು  ತಂದೆ ಮುಂದಾದ ಘಟನೆ ಜರುಗಿದೆ. ಸದ್ದಾಂ ಎಂಬಾತ ನಿಧಿಗಾಗಿ ಮಾಟ ಮಂತ್ರ ಮಾಡುತ್ತಿದ್ದನು. ನಿಧಿ ಆಸೆಗಾಗಿ ಕುಟ್ಟಿ ಸೈತಾನ್ ಪೂಜೆಯಲ್ಲಿ ತನ್ನ ಮಗುವನ್ನು ಬಲಿ ಕೊಡಲು ಮುಂದಾಗಿದ್ದು, ಬಲಿ ನೀಡುವಂತೆ ತನ್ನ ಪತ್ನಿಗೆ ಕಿರುಕುಳ ನೀಡಿದ್ದಾನೆ.

ಈ ಘಟನೆ ರಾಜಧಾನಿ ಬೆಂಗಳೂರಿನ ಕೆಆರ್ ಪುರಂ ನಲ್ಲಿ ಜರುಗಿದೆ. ಮಂತ್ರ ಪಠಿಸುತ್ತಾ ಸದ್ದಾಂ ತಡರಾತ್ರಿ ವಾಮಾಚಾರ ಅಭ್ಯಾಸ ಮಾಡುತ್ತಿದ್ದನು. ಮಗು ಬಲಿ ಕೊಡೋಕೆ ಸದ್ದಾಂ ತನ್ನ ಪತ್ನಿಗೆ ಕಿರುಕುಳ ಕೊಟ್ಟಿದ್ದಾನೆ ಎಂದು ತಿಳಿದುಬಂದಿದೆ. ಸೈಕೋಪಾಥ್ ಪತಿಯ ಕಿರುಕುಳಕ್ಕೆ ಬೇಸತ್ತು ಸಂತ್ರಸ್ತೆ ಪೊಲೀಸ್ ಕಮೀಷನರ್ ಬಿ. ದಯಾನಂದ್​ ಅವರಿಗೆ ದೂರು ನೀಡಿದ್ದಾರೆ. ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ.

ಆರೋಪಿ ಸದ್ಧಾಂ ನಾಲ್ಕು ವರ್ಷಗಳ ಹಿಂದೆ ಹಿಂದೂ ಯುವತಿಯನ್ನು ಮದುವೆಯಾಗಿದ್ದನು. ಆಗ ತಾನು ಹಿಂದೂ ಯುವಕ ಎಂದು ನಂಬಿಸಿ ಮದುವೆಯಾಗಿದ್ದನು. ತನ್ನ ಹೆಸರನ್ನು ಆಧೀಶ್ವರ್ ಎಂದು ಹೇಳಿಕೊಂಡಿದ್ದನು. ಕೆಲವುದಿನಗಳ ನಂತರ ಅವರಿಗೆ ಗಂಡು ಮಗು ಜನಸಿತು. ಆ ನಂತರ ಕುಟ್ಟಿ ಸೈತಾನ್ ಪೂಜೆಗೆ ಒತ್ತಾಯ ಮಾಡಲು ಶುರು ಮಾಡಿದನು. ಕುಟ್ಟಿ ಸೈತಾನ್ ಪೂಜೆಯಲ್ಲಿ ಮಗು ಬಲಿ ಕೊಡಬೇಕು ಎಂದು ಹೇಳಿದ್ದನು.

ಮಗುವನ್ನ ಬಲಿ ಕೊಟ್ರೆ ಸಮೃದ್ದಿ ಹೆಚ್ಚಾಗತ್ತೆ, ನಿಧಿ ಸಿಗತ್ತೆ ಎಂದಿದ್ದನು. ತಡರಾತ್ರಿ ಮಂತ್ರ ಪಠಿಸುತ್ತಾ ವಾಮಾಚಾರ ವಿದ್ಯೆ ಅಭ್ಯಾಸ ಮಾಡ್ತಿದ್ದ. ಪತಿ ಸದ್ದಾಂ ವರ್ತನೆಯನ್ನು ಕಂಡು ಸಂತ್ರಸ್ತೆ ಭಯಭೀತಳಾಗಿದ್ದಳು. ತುಮಕೂರಿಗೆ ತೆರಳಿ ಮಗು ಬಲಿ ಕೊಡೋಣ ಅಂತ ದಿನನಿತ್ಯ ಪತ್ನಿಗೆ ಟಾರ್ಚರ್ ಮಾಡುತ್ತಿದ್ದನು ಎಂದು ಸದ್ದಾಂ ವಿರುದ್ಧ ಕೆ.ಆರ್.ಪುರಂ ಠಾಣೆಗೆ ಮಹಿಳೆ ದೂರು ನೀಡಿದ್ದಾಳೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow