ಮಾಡೆಲ್ ನೋಡ್ತಿದ್ದಂತೆ ಹಸ್ತಮೈಥುನ ಮಾಡಿಕೊಂಡ ಕಾಮುಕ!
ಜೈಪುರ:- ಕಾಮಕನೋರ್ವ ಮಾಡೆಲ್ ನೋಡಿ ರಸ್ತೆಯಲ್ಲಿಯೇ ಹಸ್ತಮೈಥುನ ಮಾಡಿಕೊಂಡ ಘಟನೆ ಜೈಪುರದ ಗುರ್ಗಾಂವ್ನಲ್ಲಿ ಜರುಗಿದೆ. ಈ ಬಗ್ಗೆ ತಮಗಾದ ಕೆಟ್ಟ ಅನುಭವದ ಬಗ್ಗೆ ಮಾಡೆಲ್ ವಿಡಿಯೋ ಮಾಡಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಗುರ್ಗಾಂವ್ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಕಿರುಕುಳದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ದೆಹಲಿ-ಜೈಪುರ ಹೆದ್ದಾರಿಯ ರಾಜೀವ್ ಚೌಕ್ ಬಳಿ ಈ ಮಾಡೆಲ್ ಕ್ಯಾಬ್‌ಗಾಗಿ ಕಾಯುತ್ತಿದ್ದಾಗ ಮುಖಕ್ಕೆ ಮಾಸ್ಕ್ ಧರಿಸಿದ್ದ ವ್ಯಕ್ತಿ ಆಕೆ ಸುತ್ತ ಸುತ್ತಾಡಲು ಶುರು ಮಾಡಿದ್ದಾನೆ. ಆಗಸ್ಟ್ 2 ರಂದು ಬೆಳಿಗ್ಗೆ 11 ಗಂಟೆಗೆ ಈ ಘಟನೆ ನಡೆದಿದ್ದು,
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದಾರೆ. ಈ ವ್ಯಕ್ತಿ ನನ್ನ ಹತ್ತಿರ ಬಂದು ಸುತ್ತುತ್ತಿದ್ದ ನನ್ನನ್ನು ದಿಟ್ಟಿಸುತ್ತಿದ್ದ. ಆರಂಭದಲ್ಲಿ ನಾನು ಕೂಡ ಆತನನ್ನು ಗಮನಿಸಿಲ್ಲ. ಆದರೆ ಸ್ವಲ್ಪ ಹೊತ್ತಿನ ನಂತರ ಪ್ಯಾಂಟ್ ಜಿಪ್ ಬಿಚ್ಚಿರುವುದನ್ನು ನಾನು ಗಮನಿಸಿದೆ. ಅವನು ನನ್ನನ್ನು ದಿಟ್ಟಿಸಿ ಹಸ್ತಮೈಥುನ ಮಾಡಿಕೊಳ್ಳಲು ಪ್ರಾರಂಭಿಸಿದ್ದಾನೆ. ಅವನು ಮಾನಸಿಕ ಅಸ್ವಸ್ಥನಲ್ಲ. ತಾನು ಏನು ಮಾಡುತ್ತಿದ್ದೇನೆ ಎಂಬುದನ್ನು ತಿಳಿದಿತ್ತು. ಆದರೆ ಆತನ ಈ ಕ್ರಿಯೆ ನನಗೆ ತುಂಬಾ ಅಸಹ್ಯವನ್ನುಂಟು ಮಾಡಿತ್ತು ಎಂದು ಹೇಳಿಕೊಂಡಿದ್ದಾರೆ.
ಮೊದಲು ನನಗೂ ತುಂಬಾ ಭಯ ಆಗಿತ್ತು. ಆದರೆ ನಂತರದಲ್ಲಿ ನಾನು ಆತನ ಈ ಅಸಹ್ಯ ಕೃತ್ಯವನ್ನು ವಿಡಿಯೋ ಮಾಡಿದ್ದೇನೆ. ನಂತರ ಮನೆಗೆ ಹೋದ್ಮೇಲೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇನೆ. ಈ ಮಾಡೆಲ್ ವಿಡಿಯೋವನ್ನು ಆಧಾರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?