ಮುಸ್ಲಿಮರಿಗೆ ಸೈಕಲ್ ಪಂಕ್ಚರ್ʼಗಳನ್ನು ಹಾಕುವ ಪರಿಸ್ಥಿತಿ ಬರುತ್ತಿರಲಿಲ್ಲ: ಪ್ರಧಾನಿ ಮೋದಿ

ಚಂಡೀಗಢ: ಮುಸ್ಲಿಮರಿಗೆ ಸೈಕಲ್ ಪಂಕ್ಚರ್ʼಗಳನ್ನು ಹಾಕುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ರ‍್ಯಾಲಿಯೊಂದರಲ್ಲಿ ಮಾತನಾಡಿದ್ದ ಅವರು, ವಕ್ಫ್ ಕಾನೂನು ಪರಿಣಾಮಕಾರಿಯಾಗಿ ಮತ್ತು ಪ್ರಾಮಾಣಿಕವಾಗಿ ಜಾರಿಯಲ್ಲಿದ್ದಿದ್ದರೆ, ಮುಸ್ಲಿಮರು ಸೈಕಲ್ ಪಂಕ್ಚರ್‌ಗಳನ್ನು ಹಾಕುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಮೋದಿ ತಿಳಿಸಿದ್ದಾರೆ.
ಈ ಕಾನೂನನ್ನು ಭೂ ಮಾಫಿಯಾಗಳು ದುರ್ಬಲರಿಗೆ ಸಹಾಯ ಮಾಡುವ ಬದಲು ದೇಶಾದ್ಯಂತ ಅಮೂಲ್ಯವಾದ ಆಸ್ತಿಗಳನ್ನು ಕಬಳಿಸಲು ಬಳಸುತ್ತಿವೆ ಎಂದು ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ. ವಕ್ಫ್ ಕಾಯ್ದೆ ವಿರೋಧಿಸಿದ್ದ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಕ್ಫ್ ಆಸ್ತಿಗಳ ದುರುಪಯೋಗವನ್ನು ಎತ್ತಿ ತೋರಿಸಿ ಹಲವಾರು ಮುಸ್ಲಿಂ ವಿಧವೆಯರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ನಾವು ಅವರ ಕಳವಳಗಳನ್ನು ಗಂಭೀರವಾಗಿ ಪರಿಗಣಿಸಿ ಕಾನೂನನ್ನು ತಿದ್ದುಪಡಿ ಮಾಡಿದ್ದೇವೆ ಎಂದು ಪ್ರಧಾನಿ ತಿಳಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






