ಯಾವ ಡ್ರೈ ಫ್ರೂಟ್ಸ್ ಯಾವೆಲ್ಲಾ ಆರೋಗ್ಯ ಸಮಸ್ಯೆಗೆ ಪರಿಹಾರ? ಇಲ್ಲಿದೆ ನೋಡಿ
ಒಣ ಹಣ್ಣುಗಳು (Dry Fruits) ಕೇವಲ ರುಚಿಕರವಾಗಿರುವುದಲ್ಲ, ಆರೋಗ್ಯಕ್ಕೂ ತುಂಬಾ ಸಹಾಯಕ. ಪ್ರತಿಯೊಂದು ಡ್ರೈ ಫ್ರೂಟ್ ತನ್ನದೇ ಆದ ಪೋಷಕಾಂಶಗಳನ್ನು ಹೊಂದಿದ್ದು, ದೇಹದ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಪೌಷ್ಟಿಕ ತಜ್ಞೆ ದೀಪ್ಶಿಖಾ ಜೈನ್ ಇತ್ತೀಚೆಗೆ ಹಂಚಿಕೊಂಡ ಮಾಹಿತಿಯ ಪ್ರಕಾರ, ಇಲ್ಲಿದೆ ಡ್ರೈ ಫ್ರೂಟ್ಸ್‌ಗಳ ವಿಶೇಷತೆ:
ದಣಿವು ಮತ್ತು ದೌರ್ಬಲ್ಯ
-
ಖರ್ಜೂರ (Dates): ನೈಸರ್ಗಿಕ ಸಕ್ಕರೆ ಹಾಗೂ ಅಗತ್ಯ ಖನಿಜಗಳಿಂದ ಸಮೃದ್ಧ. ದೇಹಕ್ಕೆ ತಕ್ಷಣ ಶಕ್ತಿ ನೀಡುತ್ತದೆ. ದಿನವಿಡೀ ಚುರುಕಾಗಿ ಕೆಲಸ ಮಾಡಲು ನೆರವಾಗುತ್ತದೆ.
ಮೆದುಳಿನ ಆರೋಗ್ಯ
-
ಬೆರಿಹಣ್ಣುಗಳು (Berries): ಇದರಲ್ಲಿ ಇರುವ ಆಂಥೋಸಯಾನಿನ್‌ಗಳು ಮೆದುಳಿನ ಕೋಶಗಳನ್ನು ಬಲಪಡಿಸಿ ಸ್ಮರಣಶಕ್ತಿಯನ್ನು ಹೆಚ್ಚಿಸುತ್ತವೆ. ಮಕ್ಕಳಿಂದ ಹಿಡಿದು ವಯಸ್ಕರಿಗೆ ಎಲ್ಲರಿಗೂ ಉತ್ತಮ.
ಮೂತ್ರನಾಳದ ಸೋಂಕು (UTI) ತಡೆ
-
ಕ್ರ್ಯಾನ್‌ಬೆರಿಗಳು (Cranberries): ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆದು, ಯುಟಿಐ ಸಮಸ್ಯೆಯಿಂದ ರಕ್ಷಣೆ ನೀಡುತ್ತವೆ. ಸೋಂಕಿನ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.
ಮಲಬದ್ಧತೆ ನಿವಾರಣೆ
-
ಒಣದ್ರಾಕ್ಷಿ (Raisins): ಫೈಬರ್ ಸಮೃದ್ಧವಾಗಿದ್ದು, ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ಕರುಳಿನ ಆರೋಗ್ಯ
-
ಅಂಜೂರ (Figs): ಪ್ರಿಬಯೋಟಿಕ್ಸ್ ಮತ್ತು ಫೈಬರ್‌ಗಳನ್ನು ಹೊಂದಿದ್ದು, ಜೀರ್ಣಕ್ರಿಯೆ ಸುಧಾರಿಸುತ್ತದೆ. ಉತ್ತಮ ಕರುಳಿನ ಬ್ಯಾಕ್ಟೀರಿಯಾವನ್ನು ಬೆಳೆಸಲು ಸಹಾಯಕ.
ನಿಮ್ಮ ಪ್ರತಿಕ್ರಿಯೆ ಏನು?