ರಾಜಣ್ಣನ ಬಳಿಕ ಸತೀಶ್ ಜಾರಕಿಹೊಳಿ ಮುಗಿಸಲು ಪ್ಲಾನ್ ಇದೆ: ಮಾಜಿ ಸಚಿವರ ಹೊಸ ಬಾಂಬ್

ಆಗಸ್ಟ್ 12, 2025 - 18:05
 0  16
 ರಾಜಣ್ಣನ ಬಳಿಕ ಸತೀಶ್ ಜಾರಕಿಹೊಳಿ ಮುಗಿಸಲು ಪ್ಲಾನ್ ಇದೆ: ಮಾಜಿ ಸಚಿವರ ಹೊಸ ಬಾಂಬ್

ಸುರಪುರ: ರಾಜ್ಯದಲ್ಲಿ ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕರನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ಹೈಕಮಾಂಡ್ ಷಡ್ಯಂತ್ರ ನಡೆಸುತ್ತಿದೆ ಎಂದು ಮಾಜಿ ಸಚಿವ ರಾಜುಗೌಡ ಆರೋಪಿಸಿದ್ದಾರೆ.

ಕೇಂದ್ರ ಮಂತ್ರಿ ಮಂಡಳಿಯಿಂದ ಕೆ.ಎನ್. ರಾಜಣ್ಣ ಅವರನ್ನು ವಜಾಗೊಳಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ರಮೇಶ್ ಜಾರಕಿಹೊಳಿ, ನಾಗೇಂದ್ರ ಅವರ ನಂತರ ಈಗ ರಾಜಣ್ಣ ಅವರನ್ನೂ ರಾಜಕೀಯವಾಗಿ ಮುಗಿಸಲಾಗಿದೆ. ಮುಂದಿನ ಸರದಿ ಸತೀಶ್ ಜಾರಕಿಹೊಳಿ ಅವರದ್ದು” ಎಂದು ಭವಿಷ್ಯ ನುಡಿದರು.

ರಾಜಣ್ಣ ಅವರ ಮತದಾರರ ಪಟ್ಟಿ ಕುರಿತ ಹೇಳಿಕೆಯಲ್ಲಿ ತಪ್ಪೇನೂ ಇಲ್ಲ ಎಂದು ಸಮರ್ಥಿಸಿದ ಅವರು, “ಪಟ್ಟಿಯನ್ನು ಅಧಿಕಾರಿಗಳು ಸಿದ್ಧಪಡಿಸುತ್ತಾರೆ, ನಮ್ಮದೇ ಪಕ್ಷ ಅಧಿಕಾರದಲ್ಲಿತ್ತು. ಇದರಲ್ಲಿ ತಪ್ಪೇನಿದೆ? ನಿಮ್ಮ ವಿರುದ್ಧ ಮಾತನಾಡಿದರೆ ವಜಾ ಮಾಡ್ತೀರಾ? ನೀವೇನು ಸುಪ್ರೀಂನಾ?” ಎಂದು ಪ್ರಶ್ನಿಸಿದರು.

ಇದೇ ವೇಳೆ, ಕಾಂಗ್ರೆಸ್ ಹೈಕಮಾಂಡ್‌ನ ಕ್ರಮವನ್ನು ಟೀಕಿಸಿದ ಅವರು, “ರಾಹುಲ್ ಗಾಂಧಿ ಪಂಜರದಲ್ಲಿ ಬೆಳೆದವರು, ಅವರಿಗೆ ರಾಜಕೀಯ ಜ್ಞಾನ ಅಷ್ಟಾಗಿ ಇಲ್ಲ ಅನಿಸುತ್ತೆ” ಎಂದು ವ್ಯಂಗ್ಯವಾಡಿದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow