ರಾಮಾಯಣ ಸಿನಿಮಾ ಆಫರ್ ರಿಜೆಕ್ಟ್ ಮಾಡಿದ ಕೆಜಿಎಫ್ ರೀನಾ! ರಾಕಿಭಾಯ್ ಜೊತೆ ನಟಿಸಲು ಶ್ರೀನಿಧಿ ನೋ ಅಂದಿದ್ಯಾಕೆ?

ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ರಾಮಾಯಣ ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ಈ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ರಾವಣನಾಗಿ ಮಿಂಚಲಿದ್ದಾರೆ. ಆದರೆ ಈ ಸಿನಿಮಾಗೆ ಸೀತೆ ಪಾತ್ರಧಾರಿಯಾಗಿ ನಟಿಸೋಕೆ ಈ ಹಿಂದೆ ಕೆಜಿಎಫ್ ನಟಿ ಶ್ರೀನಿಧಿ ನೋ ಎಂದಿದ್ದರಂತೆ. ಹೌದು ಯಶ್ ಜೊತೆ ನಟಿಸಲು ನಟಿ ಹಿಂದೇಟು ಹಾಕಿದ್ಯಾಕೆ ಎಂಬ ವಿಚಾರ ಇಲ್ಲಿ ತಿಳಿಸಲಾಗಿದೆ ನೋಡಿ.
ಹೌದು, ಕೆಜಿಎಫ್ ಸಿನಿಮಾದಲ್ಲಿ ರೀನಾ ಪಾತ್ರದಲ್ಲಿ ಶ್ರೀನಿಧಿ ಶೆಟ್ಟಿ ಅಮೋಘವಾಗಿ ನಟಿಸಿದ್ದರು. ಶ್ರೀನಿಧಿ ಹಾಗೂ ಯಶ್ ಅವರ ಕಾಂಬೋ ಪ್ರೇಕ್ಷಕರಿಗೂ ಇಷ್ಟವಾಗಿತ್ತು. ಈ ಜೋಡಿಯನ್ನು ಮತ್ತೊಮ್ಮೆ ನೋಡಲು ಕಾಯುತ್ತಿದ್ದವರಿಗೆ ಶ್ರೀನಿಧಿ ಶೆಟ್ಟಿ ಇಂಟ್ರೆಸ್ಟಿಂಗ್ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ.
ಹಿಟ್ 3 ಸಿನಿಮಾ ಪ್ರಚಾರದ ವೇಳೆ ಶ್ರೀನಿಧಿ ತಮಗೆ ರಾಮಾಯಣ ಸಿನಿಮಾದಿಂದ ಆಫರ್ ಬಂದಿರುವುದಾಗಿ ಹೇಳಿದ್ದಾರೆ. ರಾಮಾಯಣ ಚಿತ್ರಕ್ಕೆ ಸ್ಕ್ರೀನ್ ಟೆಸ್ಟ್ ನೀಡಿ ಬಂದಿದ್ದರಂತೆ. ಈ ಬಗ್ಗೆ ಮಾತನಾಡಿರುವ ಅವರು, “ಹೌದು, ನಾನು ಸ್ಕ್ರೀನ್ ಟೆಸ್ಟ್ ನೀಡಿದ್ದೇನೆ. ಮೂರು ದೃಶ್ಯಗಳನ್ನು ಮಾಡಿ ತೋರಿಸಿದ್ದೆ. ಆ ವೇಳೆ, ಯಶ್ ಕೂಡ ಈ ಸಿನಿಮಾದ ಭಾಗವಾಗ್ತಾರೆ ಎಂದು ಕೇಳಿಪಟ್ಟಿದ್ದೆ, ಅದೇ ಸಮಯದಲ್ಲೇ ‘ಕೆಜಿಎಫ್ 2’ ರಿಲೀಸ್ ಆಗಿತ್ತು. ನನ್ನ ಮತ್ತು ಯಶ್ ಜೋಡಿಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಎರಡೂ ತಿಂಗಳಲ್ಲಿ, ರಾಮಾಯಣ ಆಡಿಷನ್ ಆಗಿತ್ತು. ಆಗ ನಾನು ಯಶ್ ಅವರು ರಾವಣನ ಪಾತ್ರ ನಿರ್ವಹಿಸುತ್ತಾರೆ ಎಂದು ಅಂದುಕೊಂಡಿದ್ದೆ ಎಂದು ಹೇಳಿಕೊಂಡಿದ್ದಾರೆ.
ಆಗ ನಾನು ಯೋಚಿಸಿದ್ದು ಇಷ್ಟೇ ಯಶ್ ರಾವಣನಾಗಿ, ನಾನು ಸೀತೆಯಾಗಿ ನಟಿಸಿದ್ರೆ ಅಭಿಮಾನಿಗಳು ಒಪ್ಪಿಕೊಳ್ತಾರೆ ಎಂದೆನಿಸಲಿಲ್ಲ. ಅಷ್ಟು ನಮ್ಮ ಜೋಡಿ ಅಭಿಮಾನಿಗಳು ಇಷ್ಟಪಟ್ಟಿದ್ದರು. ಹಾಗಾಗಿ ಈ ಸಿನಿಮಾವನ್ನು ಬಿಟ್ಟೆ ಎಂದು ಶ್ರೀನಿಧಿ ಶೆಟ್ಟಿ ಇಂಟ್ರೆಸ್ಟಿಂಗ್ ವಿಚಾರವನ್ನು ರಿವೀಲ್ ಮಾಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






