ರಾಷ್ಟ್ರಪತಿ ಭವನದಲ್ಲಿ ಮೊದಲ ಬಾರಿಗೆ ಮದುವೆ ಸಮಾರಂಭ.! ಇತಿಹಾಸದಲ್ಲಿ ಮೊದಲು – ಯಾರ ವಿವಾಹ ಗೊತ್ತಾ..?

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ರಾಷ್ಟ್ರಪತಿ ಭವನದಲ್ಲಿರುವ ಭವ್ಯ ಆವರಣದಲ್ಲಿ ವಿವಾಹ ಸಮಾರಂಭ ನಡೆಸಲು ಅವಕಾಶ ನೀಡುವ ಅಭೂತಪೂರ್ವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಹೌದು ರಾಷ್ಟ್ರಪತಿ ಭವನದ ವೈಯಕ್ತಿಕ ಭದ್ರತಾ ಅಧಿಕಾರಿ (ಪಿಎಸ್ಒ) ಪೂನಂ ಗುಪ್ತಾ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಸಹಾಯಕ ಕಮಾಂಡೆಂಟ್ ಅವಿನಾಶ್ ಕುಮಾರ್ ನಡುವೆ ವಿವಾಹ ನಡೆಯಲಿದೆ. ಫೆಬ್ರವರಿ 12 ರಂದು ವಿವಾಹ ನೆರವೇರಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಸ್ವತಃ ಈ ವಿವಾಹ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಪೂನಂ ಗುಪ್ತಾ ಯಾರು?
ಪ್ರಸ್ತುತ ರಾಷ್ಟ್ರಪತಿ ಭವನದಲ್ಲಿ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿ (ಪಿಎಸ್ಒ) ಸೇವೆ ಸಲ್ಲಿಸುತ್ತಿರುವ ಪೂನಂ ಗುಪ್ತಾ 74ನೇ ಗಣರಾಜ್ಯೋತ್ಸವ ಪರೇಡ್ನಲ್ಲಿ ಸಂಪೂರ್ಣ ಮಹಿಳಾ ತುಕಡಿಯನ್ನು ನಿರ್ವಹಿಸಿದ್ದರು.
ಗಣಿತಶಾಸ್ತ್ರ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಪೂನಂ ಗ್ವಾಲಿಯರ್ನ ಜಿವಾಜಿ ವಿಶ್ವವಿದ್ಯಾಲಯದಿಂದ BEd ಪದವಿ ಪಡೆದುಕೊಂಡಿದ್ದಾರೆ. 2018ರ ಯುಪಿಎಸ್ಸಿ ಸಿಆರ್ಪಿಎಫ್ ಪರೀಕ್ಷೆಯಲ್ಲಿ 81ನೇ ರ್ಯಾಂಕ್ ವಿಜೇಯರಾಗಿದ್ದರು. ಬಿಹಾರದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದ ಪೂನಂ ಆ ಬಳಿಕ ಕಠಿಣ ಪ್ರದೇಶಗಳಲ್ಲೂ ತಮ್ಮ ಕರ್ತವ್ಯ ನಿಷ್ಠೆ ಮೆರೆದು ಸೈ ಎನಿಸಿಕೊಂಡಿದ್ದರು.
ಸೋಷಿಯಲ್ ಮೀಡಿಯಾದಲ್ಲೂ ತಮ್ಮದೇ ಅಭಿಮಾನಿ ಬಳಗ ಹೊಂದಿರುವ ಪೂನಂ, ಆಗಾಗ್ಗೆ ಮಹಿಳಾ ಸಬಲೀಕರಣ ಹಾಗೂ ಸ್ಫೋರ್ತಿದಾಯಕ ಸಂದೇಶಘಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಜೊತೆಗೆ ಸಾರ್ವಜನಿಕರನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಾ ಬರುತ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






