ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: 10,650 MBBS ಸೀಟು ಹೆಚ್ಚಳ - 41 ಕಾಲೇಜುಗಳ ಸೇರ್ಪಡೆ
ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಮುಂದುವರಿಸಲು ಉತ್ಸುಕರಾಗಿರುವ ವಿದ್ಯಾರ್ಥಿಗಳಿಗಾಗಿ ಮಹತ್ವದ ಘೋಷಣೆಯೊಂದನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಹೊರಡಿಸಿದೆ. ದೇಶದಾದ್ಯಂತ 10,650 ಹೊಸ ಎಂಬಿಬಿಎಸ್ ಸೀಟುಗಳಿಗೆ ಅನುಮೋದನೆ ನೀಡಲಾಗಿದ್ದು, ಇದು ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದ ಅವಕಾಶವನ್ನು ಕಲ್ಪಿಸಲಿದೆ.
ವಿದ್ಯಕೀಯ ಸಂಸ್ಥೆಗಳ ಸಂಖ್ಯೆಯಲ್ಲಿ ದಾಖಲೆ ಹೆಚ್ಚಳ
NMC ಅಧ್ಯಕ್ಷ ಡಾ. ಅಭಿಜಿತ್ ಶೇಠ್ ಅವರ ಪ್ರಕಾರ, ಹೊಸ 41 ವೈದ್ಯಕೀಯ ಕಾಲೇಜುಗಳನ್ನು ಸೇರಿಸುವ ಮೂಲಕ ದೇಶದ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಈಗ 816ಕ್ಕೆ ಏರಿದೆ. ಈ ಹೊಸ ಸೀಟುಗಳ ನಿರ್ಧಾರ 170 ಅರ್ಜಿಗಳ ಪರಿಶೀಲನೆಯ ಬಳಿಕ ತೆಗೆದುಕೊಳ್ಳಲಾಗಿದೆ.
-
41 ಸರ್ಕಾರಿ ಕಾಲೇಜುಗಳು
-
129 ಖಾಸಗಿ ಕಾಲೇಜುಗಳು
ಸ್ನಾತಕೋತ್ತರ ಸೀಟುಗಳಲ್ಲಿಯೂ ವಿಸ್ತರಣೆ
ಪದವಿಪೂರ್ವ ಸೀಟುಗಳೊಂದಿಗೆ, ಸ್ನಾತಕೋತ್ತರ ಹಂತದಲ್ಲಿಯೂ (PG) ಸಾಕಷ್ಟು ವಿಸ್ತರಣೆ ನಿರೀಕ್ಷೆಯಲ್ಲಿದೆ.
-
ಸುಮಾರು 5,000 ಹೊಸ ಪಿಜಿ ಸೀಟುಗಳು ಶೀಘ್ರದಲ್ಲೇ ಸೇರ್ಪಡೆಯಾಗಲಿವೆ
-
ಇದರಿಂದ ಪಿಜಿ ಸೀಟುಗಳ ಒಟ್ಟು ಸಂಖ್ಯೆ 67,000ಕ್ಕೆ ಏರಲಿದೆ
2025-26 ಶೈಕ್ಷಣಿಕ ವರ್ಷದ ಪೋರ್ಟಲ್ ನವೆಂಬರ್‌ನಲ್ಲಿ ತೆರೆಯಲಿದೆ
ಅರ್ಜಿದಾರರು ತಮ್ಮ ಅರ್ಜಿಗಳನ್ನು ಸಲ್ಲಿಸಲು ಬೇಕಾದ 2025-26 ನೇ ಸಾಲಿನ ಪೋರ್ಟಲ್ ಅನ್ನು ನವೆಂಬರ್ ತಿಂಗಳಲ್ಲಿ ತೆರೆಯಲಾಗುವುದು ಎಂದು NMC ತಿಳಿಸಿದೆ. ಎಲ್ಲಾ ಮೌಲ್ಯಮಾಪನ, ಪರಿಶೀಲನೆ ಹಾಗೂ ಅನುಮೋದನಾ ಪ್ರಕ್ರಿಯೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲಾಗುವುದು.
ವೈದ್ಯಕೀಯ ಸಂಶೋಧನೆಗೂ ಉತ್ತೇಜನ
ವೈದ್ಯಕೀಯ ಶಿಕ್ಷಣದಲ್ಲಿ ಗುಣಮಟ್ಟದ ಅಭಿವೃದ್ಧಿಯೊಂದಿಗೆ ಸಂಶೋಧನೆಗೂ ಹೆಚ್ಚಿನ ಒತ್ತುಂಗ ನೀಡಲಾಗುತ್ತಿದೆ.
-
NMC ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಸಹಯೋಗದ ಮೂಲಕ ವೈದ್ಯಕೀಯ ಪಠ್ಯಕ್ರಮದಲ್ಲಿ ಕ್ಲಿನಿಕಲ್ ರಿಸರ್ಚ್ ಅನ್ನು ಸೇರಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ.
-
MARB ನಿರ್ಧಾರಗಳ ಮೇಲ್ಮನವಿಗಳನ್ನೂ ಯಾವುದೇ ನ್ಯಾಯಾಲಯದ ಹಸ್ತಕ್ಷೇಪವಿಲ್ಲದೇ ಪರಿಹರಿಸಲಾಗಿದೆ.
ಸರ್ಕಾರದ ಗುರಿ: 5 ವರ್ಷದಲ್ಲಿ 75,000 ಹೊಸ ವೈದ್ಯಕೀಯ ಸೀಟುಗಳು
ಪ್ರಧಾನಿ ನರೇಂದ್ರ ಮೋದಿಯವರ ಭರವಸೆಯಂತೆ, ಮುಂದಿನ ಐದು ವರ್ಷಗಳಲ್ಲಿ 75,000 ಹೊಸ ವೈದ್ಯಕೀಯ ಸೀಟುಗಳನ್ನು ಸೃಷ್ಟಿಸುವ ದಿಟ್ಟ ಗುರಿಯನ್ನು ಸರ್ಕಾರ ಹೊಂದಿದೆ.
ನಿಮ್ಮ ಪ್ರತಿಕ್ರಿಯೆ ಏನು?