ವೈರಸ್ ಇಂಜೆಕ್ಟ್ ಮಾಡಿ ಕಚೇರಿಯಲ್ಲೇ ರೇಪ್, ಮುಖದ ಮೇಲೆ ಮೂತ್ರ ಮಾಡಿ ಚಿತ್ರಹಿಂಸೆ: ಮುನಿರತ್ನ ವಿರುದ್ಧ ಮತ್ತೊಂದು FIR

ಬೆಂಗಳೂರು: ಬೆಂಗಳೂರಿನ 40 ವರ್ಷದ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಜೂನ್ 2023 ರಲ್ಲಿ ಹಾಲಿ ಬಿಜೆಪಿ ಶಾಸಕ ಮತ್ತು ಇತರ ಮೂವರು ತಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ. ಹೌದು 40 ವರ್ಷದ ಸಂತ್ರಸ್ತೆಯಾದ ತಾನು ಪೀಣ್ಯ 2ನೇ ಹಂತದ ನಿವಾಸಿಯಾಗಿದ್ದು, ಬಿಜೆಪಿ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿರುವೆ. ಮೊದಲ ಪತಿ ಬಿಟ್ಟು ಹೋಗಿದ್ದರಿಂದ ಐದು ವರ್ಷಗಳ ಹಿಂದೆ 2ನೇ ಮದುವೆ ಮಾಡಿಕೊಂಡು ಸಂಸಾರ ಮಾಡಿಕೊಂಡಿರುವೆ.
ಈ ಮಧ್ಯೆ ವೇಶ್ಯಾವಾಟಿಕೆ ನಡೆಸುತ್ತಿರುವುದಾಗಿ ಪೀಣ್ಯ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸುವಂತೆ ಮಾಡಿ ತನ್ನನ್ನು ಜೈಲಿಗೆ ಕಳುಹಿಸಲಾಗಿತ್ತು. ಅಲ್ಲದೇ ಕೊಲೆ ಯತ್ನ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿತ್ತು.
ಜಾಮೀನು ಪಡೆದು ಹೊರಬಂದ ಬಳಿಕ 2023 ಜೂ.11ರಂದು ವಸಂತ್ ಹಾಗೂ ಆತನ ಸಹಚರರು ಆಗಮಿಸಿ ಶಾಸಕ ಮುನಿರತ್ನ ಅವರೊಂದಿಗೆ ಮಾತನಾಡಿದರೆ ನಿನ್ನ ಮೇಲಿನ ಪ್ರಕರಣ ಹಿಂಪಡೆಯುದಾಗಿ ಹೇಳಿ ಕಾರಿನಲ್ಲಿ ಜೆ.ಪಿ.ಪಾರ್ಕ್ ಬಳಿಯಿರುವ ಕಚೇರಿಗೆ ಕರೆದುಕೊಂಡು ಹೋಗಿದ್ದರು'' ಎಂದು ದೂರಿನಲ್ಲಿ ಸಂತ್ರಸ್ತೆ ಮಹಿಳೆ ತಿಳಿಸಿದ್ದಾರೆ.
''ಕಚೇರಿಗೆ ಕರೆದೊಯ್ದ ಬಳಿಕ ತನ್ನನ್ನ ಬಲವಂತವಾಗಿ ಕಟ್ಟಿ ಹಾಕಿ ಶಾಸಕ ಹಾಗೂ ಆತನ ಸಹಚರರು ತನ್ನನ್ನ ವಿವಸ್ತ್ರಗೊಳಿಸಿದರು. ಬಳಿಕ ಮುನಿರತ್ನ ಸೂಚನೆಯಂತೆ ವಸಂತ್ ಹಾಗೂ ಕಮಲ್ ಮೂಲಕ ತಮ್ಮ ಮೇಲೆ ಆತ್ಯಾಚಾರ ಮಾಡಿಸಿದರು'' ಎಂದು ದೂರಿನಲ್ಲಿ ಸಂತ್ರಸ್ತೆ ಆರೋಪಿಸಿದ್ದಾರೆ.
''ಆತ್ಯಾಚಾರದ ಬಳಿಕ ಮುನಿರತ್ನ ತನ್ನ ಮೇಲೆ ಮೂತ್ರ ವಿರ್ಸಜನೆ ಮಾಡಿದರು. ಬಳಿಕ ಅಪರಿಚಿತ ವ್ಯಕ್ತಿಯು ತಂದಿದ್ದ ಬಿಳಿ ಬಣ್ಣದ ಬಾಕ್ಸ್ನಲ್ಲಿದ್ದ ಇಂಜೆಕ್ಷನ್ ಚುಚ್ಚಿದ್ದಾರೆ. ಈ ವಿಷಯ ಯಾರಿಗಾದರೂ ತಿಳಿಸಿದರೆ ಸಾಯಿಸುವುದಾಗಿ ಬೆದರಿಸಿದ್ದರು'' ಎಂದು ಮಹಿಳೆಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆ ಹೇಳಿಕೆ ದಾಖಲಿಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ನಿಮ್ಮ ಪ್ರತಿಕ್ರಿಯೆ ಏನು?






