ಶಾದಿ ಭಾಗ್ಯ! ಮದುವೆಯಾಗುವ ಬ್ಯಾಚುಲರ್‌ಗಳಿಗೆ ಸರ್ಕಾರ 31 ಲಕ್ಷ ರೂ ಕೊಡುತ್ತಂತೆ!

ಶಾದಿ ಭಾಗ್ಯ! ಮದುವೆಯಾಗುವ ಬ್ಯಾಚುಲರ್‌ಗಳಿಗೆ ಸರ್ಕಾರ 31 ಲಕ್ಷ ರೂ ಕೊಡುತ್ತಂತೆ!
ದಕ್ಷಿಣ ಕೊರಿಯಾದ ಜನಸಂಖ್ಯೆಯು ವೇಗವಾಗಿ ಕಡಿಮೆಯಾಗುತ್ತಿದೆ. ಅಲ್ಲಿ ಪ್ರತಿ ಮಹಿಳೆ ಸರಾಸರಿ 0.72 ಮಕ್ಕಳಿಗೆ ಜನ್ಮ ನೀಡುತ್ತಾಳೆ. ಅಂದರೆ, ಮಹಿಳೆಯು ಮಗುವನ್ನು ಸಹ ಗರ್ಭ ಧರಿಸಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ, ದಕ್ಷಿಣ ಕೊರಿಯಾದ ಸರ್ಕಾರವು ಜನಸಂಖ್ಯೆಯ ಬೆಳವಣಿಗೆ ಮತ್ತು ಫಲವತ್ತತೆ ದರವನ್ನು ಹೆಚ್ಚಿಸಲು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ.
ನಮ್ಮ ಭಾರತದಲ್ಲಿ ಶ್ರಾವಣ ಭಾದ್ರಪದ ಮಾಸಗಳ ಕಾಲ – ಮದುವೆ ಸೀಸನ್ ಜೋರಾಗಿ ನಡೆಯುತ್ತಿದೆ. ಈ ಮಧ್ಯೆ, ಆ ಒಂದು ದೇಶದಲ್ಲಿ ಮದುವೆ ಆಗಲು ಬಯಸುವ ಯುವಕರಿಗೆ ಸರಕಾರ ಲಕ್ಷಗಟ್ಟಲೆ ಹಣ ನೀಡುತ್ತಿದೆ. ಯುವತಿಯನ್ನು ಮದುವೆಯಾದರೆ ಕೈತುಂಬಾ ಹಣ ಸಿಗುತ್ತದೆ. ಕೇಳಲು ಆಶ್ಚರ್ಯವಾದರೂ ಇದನ್ನು ನಂಬಿ! ಓಹ್, ಯಾವ ದೇಶದಲ್ಲಪ್ಪಾ ಹೀಗೆಲ್ಲಾ ನಡೆಯುತ್ತಿರುವುದು ಎಂದು ಹುಬ್ಬೇರಿಸಿದಿರಾ!? ಹೌದು ಸರ್ಕಾರವೇ ಹೀಗೊಂದು ಶಾದಿ ಭಾಗ್ಯವನ್ನು ಕಲ್ಪಿಸುತ್ತಿದೆ! ಅದೂ… ಮದುವೆಯಾಗುವ ಬ್ಯಾಚುಲರ್‌ಗಳಿಗೆ ಸರ್ಕಾರ 31 ಲಕ್ಷ ರೂ ಕೊಡುತ್ತಂತೆ! ತಡವೇಕೆ ಬಾಸಿಂಗ ಕಟ್ಟಿಕೊಂಡು ರೆಡಿಯಾಗಿ…
ಹೌದು, ಏಷ್ಯಾ ಖಂಡದ ದಕ್ಷಿಣ ಕೊರಿಯಾ ರಾಷ್ಟ್ರದಲ್ಲಿ ವಿವಾಹವಾಗುವ ಜೋಡಿಗಳಿಗೆ ಅಲ್ಲಿನ ಸರ್ಕಾರ 31 ಲಕ್ಷ ರೂ. ಪ್ರೋತ್ಸಾಹ ಧನ ಕೊಡಲು ಮುಂದಾಗಿದೆ. ಮದುವೆಗಳನ್ನು ಪ್ರೋತ್ಸಾಹಿಸುವುದಕ್ಕೆ ಸರ್ಕಾರ ಕಂಕಣಬದ್ಧವಾಗಿದೆ. ಇನ್ನು ಮಕ್ಕಳಾದ ಮೇಲೆ ಅವರ ವಿದ್ಯಾಭ್ಯಾಸಕ್ಕೆ ಸಹ ಹೆಚ್ಚು ಖರ್ಚು ಮಾಡಲು ಸರ್ಕಾರ ಬದ್ಧವಾಗಿದೆ. ಏಕೆಂದರೆ… ದಕ್ಷಿಣ ಕೊರಿಯಾದಲ್ಲಿ ಜನನ ಪ್ರಮಾಣ ಗಣನೀಯವಾಗಿ ತಗ್ಗಿದೆ. ಇದರಿಂದಾಗಿ ನವ ಜೋಡಿಗಳು ಮದುವೆಯಾಗಲು ಮತ್ತು ಹೆಚ್ಚು ಮಕ್ಕಳನ್ನು ಹೊಂದುವುದನ್ನು ಪ್ರೋತ್ಸಾಹಿಸಲು ಸರ್ಕಾರ ಈ ಯೋಜನೆಯನ್ನು ಪರಿಚಯಿಸಿದೆ. ಇದನ್ನು ಸಾಕ್ಷೀಕರಿಸಲು ದಕ್ಷಿಣ ಕೊರಿಯಾದ ಬುಸಾನ್ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಾಹಿತ ದಂಪತಿಗಳಿಗೆ 38,000 ಡಾಲರ್ (38 K South Korean Won – 31 ಲಕ್ಷ ರೂ.) ನೀಡುವುದಾಗಿ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.
ದಕ್ಷಿಣ ಕೊರಿಯಾದ ಜನಸಂಖ್ಯೆಯು ವೇಗವಾಗಿ ಕಡಿಮೆಯಾಗುತ್ತಿದೆ. ಅಲ್ಲಿ ಪ್ರತಿ ಮಹಿಳೆ ಸರಾಸರಿ 0.72 ಮಕ್ಕಳಿಗೆ ಜನ್ಮ ನೀಡುತ್ತಾಳೆ. ಅಂದರೆ, ಮಹಿಳೆಯು ಮಗುವನ್ನು ಸಹ ಗರ್ಭ ಧರಿಸಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ, ದಕ್ಷಿಣ ಕೊರಿಯಾದ ಸರ್ಕಾರವು ಜನಸಂಖ್ಯೆಯ ಬೆಳವಣಿಗೆ ಮತ್ತು ಫಲವತ್ತತೆ ದರವನ್ನು ಹೆಚ್ಚಿಸಲು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ದಕ್ಷಿಣ ಕೊರಿಯಾದ ಜನಸಂಖ್ಯೆ ಕೇವಲ 5 ಕೋಟಿ. ಇದಲ್ಲದೆ, ಜಪಾನ್‌ನಲ್ಲಿಯೂ ಸಹ ಇದೇ ರೀತಿಯ ಪರಿಸ್ಥಿತಿ ಉದ್ಭವಿಸಿದೆ. ದಕ್ಷಿಣ ಕೊರಿಯಾದಂತೆ ಜಪಾನ್ ಕೂಡ ಕಡಿಮೆ ಜನಸಂಖ್ಯೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಹಿಂದೆ ವರ್ಷಕ್ಕೆ 50 ಲಕ್ಷ ಇದ್ದ ಜನನ ಪ್ರಮಾಣ ಈಗ 7.60 ಲಕ್ಷಕ್ಕೆ ಕುಸಿದಿದೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






