ಸರ್ಕಾರಿ ಅಧಿಕಾರಿಗಳು ಧರಿಸುವ ಐಡಿ ಕಾರ್ಡ್ ನಲ್ಲಿ ಕೆಂಪು-ಹಳದಿ ಬಣ್ಣ ಕಡ್ಡಾಯ: ರಾಜ್ಯ ಸರ್ಕಾರ!

ಅಕ್ಟೋಬರ್ 30, 2024 - 16:02
 0  12
ಸರ್ಕಾರಿ ಅಧಿಕಾರಿಗಳು ಧರಿಸುವ ಐಡಿ ಕಾರ್ಡ್ ನಲ್ಲಿ ಕೆಂಪು-ಹಳದಿ ಬಣ್ಣ ಕಡ್ಡಾಯ: ರಾಜ್ಯ ಸರ್ಕಾರ!

ಬೆಂಗಳೂರು:- ಸರ್ಕಾರಿ ಅಧಿಕಾರಿಗಳು ಧರಿಸುವ ಐಡಿ ಕಾರ್ಡ್ ನಲ್ಲಿ ಕೆಂಪು-ಹಳದಿ ಬಣ್ಣ ಕಡ್ಡಾಯ ಇರಬೇಕೆಂದು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. 

ಕನ್ನಡ ರಾಜ್ಯೋತ್ಸವದೊಳಗೆ ಸರ್ಕಾರಿ ಅಧಿಕಾರಿಗಳು ಕಡ್ಡಾಯವಾಗಿ ಗುರುತಿನ ಚೀಟಿಗೆ ಕೆಂಪು-ಹಳದಿ ಬಣ್ಣದ ಟ್ಯಾಗ್​​ ಅನ್ನೇ​ ಧರಿಸಬೇಕು ಎಂದು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಡಿಪಿಎಆರ್ ಸೂಚನೆ ನೀಡಿದೆ.

ಕರ್ನಾಟಕ ರಾಜ್ಯ ಉದಯವಾಗಿ 50 ವರ್ಷವಾದ ಹಿನ್ನೆಲೆಯಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವನ್ನು ಬಹಳಷ್ಟು ವಿಜೃಂಭಣೆಯಿಂದ ಆಚರಿಸಲು ರಾಜ್ಯ ಸರ್ಕಾರ  ನಿರ್ಧರಿಸಿದಂತೆ. ನಾಡಿನಾದ್ಯಂತ ಕನ್ನಡ ಕಲರವ ಮನೆ-ಮನವನ್ನು ಮುಟ್ಟಿಸಲು ಮುಂದಾಗಿದೆ. ಇದರ ಭಾಗವೆಂಬಂತೆ ಅಧಿಕಾರಿಗಳು ಕಡ್ಡಾಯವಾಗಿ ಪಾಲಿಸಬೇಕಾದ ನಿಯಮವನ್ನು ಸರ್ಕಾರ ಜಾರಿಗೆ 
ತಂದಿದೆ. ಸರ್ಕಾರಿ ಅಧಿಕಾರಿಗಳು ಧರಿಸುವ ಗುರುತಿನ ಚೀಟಿ ಟ್ಯಾಗ್​ ನಾಡಧ್ವಜ ಬಣ್ಣದಲ್ಲೇ ಇರಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರಿ ಅಧಿಕಾರಿಗಳು ಕನ್ನಡ ರಾಜ್ಯೋತ್ಸವದೊಳಗೆ ಕಡ್ಡಾಯವಾಗಿ ಗುರುತಿನ ಚೀಟಿಗೆ ಕೆಂಪು-ಹಳದಿ ಬಣ್ಣದ ಟ್ಯಾಗ್​​ ಅನ್ನೇ​ ಧರಿಸಬೇಕು ಎಂದು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಡಿಪಿಎಆರ್ ಸೂಚನೆ ನೀಡಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow