ಸವಾರರೇ ಎಚ್ಚರ.. ಇನ್ಮುಂದೆ ಬೈಕ್ ನಂಬರ್ ಪ್ಲೇಟ್ ಮರೆಮಾಚಿದ್ರೆ ಬೀಳುತ್ತೆ ಕೇಸ್!
ಬೆಂಗಳೂರು: ನಂಬರ್ ಪ್ಲೇಟ್ ಮರೆಮಾಚುವ ಅಥವಾ ತಿದ್ದುವ ಬೈಕ್ ಸವಾರರಿಗೆ ಬಿಸಿ ಮುಟ್ಟಿಸಲು ಬೆಂಗಳೂರು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ. ಹೌದು ನಗರದಲ್ಲಿ ಬೈಕ್ ನಂಬರ್ ಪ್ಲೇಟ್ ಸರಿಯಾಗಿ ಕಾಣಿಸದಿದ್ದರೆ, ಟ್ರಾಫಿಕ್ ಪೊಲೀಸರು ಕ್ರಿಮಿನಲ್ ಕೇಸ್ (ವಂಚನೆ) ದಾಖಲಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ತಪಾಸಣೆಯಲ್ಲಿ ಹಲವಾರು ಬೈಕ್ ಸವಾರರು ತಮ್ಮ ನಂಬರ್ ಪ್ಲೇಟ್ ಮರೆಮಾಚಿ ಸಂಚಾರ ಮಾಡುತ್ತಿರುವುದು ಗಮನಕ್ಕೆ ಬಂದಿದೆ.
ಸವಾರರು ಕೊನೆ ನಂಬರ್ ಭಾಗದಲ್ಲಿ ಬಣ್ಣ ಬಳಸಿ, ಟೇಪ್ ಹಾಕಿ ಅಥವಾ ಬಟ್ಟೆ ಸುತ್ತಿ ನಂಬರ್ ಪ್ಲೇಟ್ ಹಚ್ಚುವುದು ಸಾಮಾನ್ಯವಾಗಿ ಕಂಡುಬರುತ್ತಿದೆ. ಇದರಿಂದ ಎಐ ಕ್ಯಾಮೆರಾಗೆ ಬೈಕ್ ಪತ್ತೆಯಾಗದೆ, ಟ್ರಾಫಿಕ್ ನಿಯಮ ಉಲ್ಲಂಘನೆ ದಾಖಲು ಮಾಡಲು ಅಸೌಕರ್ಯ ಉಂಟಾಗುತ್ತದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಅಂದುಕೊಂಡು 43 ಬೈಕ್ ಸವಾರರ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ. ಕಳೆದ ಒಂದು ವಾರದಲ್ಲಿ 1200 ನಕಲಿ ನಂಬರ್ ಪ್ಲೇಟ್ ಬರುವ ಬೈಕ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ನಗರದಲ್ಲಿ ರಾತ್ರಿ ವೇಳೆ ತಪಾಸಣೆ ನಡೆಸಿದಾಗ, ನಕಲಿ ಅಥವಾ ಮಡಚಿದ ನಂಬರ್ ಪ್ಲೇಟ್‌ಗಳು ಕಂಡುಬರುತ್ತಿವೆ. ಆದ್ದರಿಂದ, ವಾಹನ ಮಾಲೀಕರು ತಮ್ಮ ನಂಬರ್ ಪ್ಲೇಟ್ ಸರಿಯಾಗಿ ಹೊಂದಿಸಿಕೊಳ್ಳುವುದು ಕಾನೂನಿನ ಅಗತ್ಯ ಎಂದು ಪೊಲೀಸ್ ಇಲಾಖೆಯು ಒತ್ತಾಯಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?