ಸಾಲಗಾರರ ಕಿರುಕುಳ: ನಾಲ್ವರು ಮಕ್ಕಳ ಜೊತೆ ನಾಲೆಗೆ ಹಾರಿದ ದಂಪತಿ- ಆಮೇಲೇನಾಯ್ತು?

ಸೆಪ್ಟೆಂಬರ್ 10, 2025 - 22:13
 0  18
ಸಾಲಗಾರರ ಕಿರುಕುಳ: ನಾಲ್ವರು ಮಕ್ಕಳ ಜೊತೆ ನಾಲೆಗೆ ಹಾರಿದ ದಂಪತಿ- ಆಮೇಲೇನಾಯ್ತು?

ಬೀದರ್:- ಭಾಲ್ಕಿ ತಾಲೂಕಿನ ಮರೂರು ಗ್ರಾಮದಲ್ಲಿ ಸಾಲಗಾರರ ಕಿರುಕುಳದಿಂದ ಮನನೊಂದು ಒಂದೇ ಕುಟುಂಬದ ನಾಲ್ವರು ಕಾರಂಜಾ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಜರುಗಿದೆ.

ಮೃತರನ್ನು ಶಿವಮೂರ್ತಿ ಮಾರುತಿ (45), 8 ತಿಂಗಳ ಪುಟ್ಟ ಕಂದ ರಾಕೇಶ್, ಶ್ರೀಕಾಂತ್ (8) ಹಾಗೂ ರಿತಿಕ್ (4)  ಎಂದು ಗುರುತಿಸಲಾಗಿದೆ. ತಾಯಿ ರಮಾಬಾಯಿ ಮತ್ತು ಇನ್ನೋಬ್ಬ 7 ವರ್ಷದ ಮಗನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಲು ನಾಲ್ಕು ಮಕ್ಕಳ ಸಮೇತ ದಂಪತಿ ಕಾಲುವೆಗೆ ಹಾರಿದ್ದಾರೆ. ಈ ವೇಳೆ ತಾಯಿ ಮತ್ತು ಇನ್ನೊಬ್ಬ ಮಗನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. 

ಮೃತದೇಹವನ್ನು ಭಾಲ್ಕಿ ತಾಲೂಕು ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಶಾಸಕ ಈಶ್ವರ್ ಖಂಡ್ರೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow