ಸಿಲಿಕಾನ್ ಸಿಟಿಯ ಅಪಾರ್ಟ್ಮೆಂಟ್’ನಲ್ಲಿ ಅಸ್ಥಿಪಂಜರ ಪತ್ತೆ! ಇದು ಮನುಷ್ಯನದ್ದೋ, ಪ್ರಾಣಿಯದ್ದೋ?

ಜೂನ್ 19, 2025 - 12:00
 0  12
ಸಿಲಿಕಾನ್ ಸಿಟಿಯ ಅಪಾರ್ಟ್ಮೆಂಟ್’ನಲ್ಲಿ ಅಸ್ಥಿಪಂಜರ ಪತ್ತೆ! ಇದು ಮನುಷ್ಯನದ್ದೋ, ಪ್ರಾಣಿಯದ್ದೋ?

ಬೆಂಗಳೂರು: ಹಿಂದೆ ಚಿತ್ರದುರ್ಗದ ಮನೆಯಲ್ಲಿ ಪತ್ತೆಯಾದ ಅಸ್ತಿಪಂಜರದ ವಿಷ್ಯ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಬೆಂಗಳೂರು ನಗರದ ಬೇಗೂರಿನ ಒಂದು ಅಪಾರ್ಟ್ಮೆಂಟ್ ಸಂಪ್ನಲ್ಲಿ ಮುಚ್ಚಲ ತೆಗೆದು ಸ್ವಚ್ಛ ಮಾಡುವ ಕಾರ್ಯ ನಡೆಯುತ್ತಿರುವಾಗ ಅಸ್ತಿಪಂಜರ ಕಾಣಿಸಿಕೊಂಡಿದೆಮೂಳೆಗಳು, ತಲೆಬುರುಡೆ ರೀತಿಯ ಭಾಗಗಳು ಪತ್ತೆಯಾಗಿದ್ದು, ಮಾಹಿತಿ ಮೇರೆಗೆ ಪೊಲೀಸರು ಯುಡಿಆರ್ ದಾಖಲಿಸಿಕೊಂಡಿದ್ದಾರೆ.

ಸಿಕ್ಕ ಅಸ್ಥಿಪಂಜರ ಮನುಷ್ಯರದ್ದಾ ಅಥವಾ ಪ್ರಾಣಿಗಳಿದ್ದಾ ಎಂಬುದನ್ನು ಅರಿಯಲು ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಿದ್ದಾರೆ. ವರದಿಯ ಬಳಿಕ ಸ್ಪಷ್ಪತೆ ಸಿಗಲಿದೆ. ಬೇಗೂರಿನ ಕೈಗಾರಿಕಾ ಪ್ರದೇಶದ ಅಪಾರ್ಟ್​​ಮೆಂಟ್​​​ವೊಂದರಲ್ಲಿ ಜೂನ್ 16ರಂದು ಗುತ್ತಿಗೆ ಕಾರ್ಮಿಕರು ಶೌಚಗುಂಡಿಗಳನ್ನು ಸ್ವಚ್ಚಗೊಳಿಸುವಾಗ ಅಸ್ಥಿಪಂಜರ ಕಂಡುಬಂದಿತ್ತು.‌ ಇದನ್ನು ಕಂಡು ಅಪಾರ್ಟ್ಮೆಂಟ್​​ ನಿವಾಸಿಗಳು ಆತಂಕಗೊಂಡಿದ್ದರು.

ಕಳೆದ‌ 10 ವರ್ಷಗಳ ಹಿಂದೆ ಅಪಾರ್ಟ್​​ಮೆಂಟ್ ನಿರ್ಮಾಣವಾಗುವ ಜಾಗದ ಬಳಿ ಸ್ಮಶಾನವಿತ್ತು ಎಂದು ಸ್ಥಳೀಯರು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಯುಡಿಆರ್ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಫ್ಎಸ್​​ಎಲ್ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow