ಸೋಮವಾರ ಈ ಕೆಲಸ ಮಾಡಿದ್ರೆ ಜೀವನದಲ್ಲಿ ಸಂತೋಷ, ಸಮೃದ್ಧಿ ಪಡೆದುಕೊಳ್ಳಬಹುದು!

ನವೆಂಬರ್ 25, 2024 - 07:25
 0  12
ಸೋಮವಾರ ಈ ಕೆಲಸ ಮಾಡಿದ್ರೆ ಜೀವನದಲ್ಲಿ ಸಂತೋಷ, ಸಮೃದ್ಧಿ ಪಡೆದುಕೊಳ್ಳಬಹುದು!

ಹಿಂದೂ ಧರ್ಮದಲ್ಲಿ ಪ್ರತಿಯೊಂದು ವಾರ ಅಥವಾ ದಿನಕ್ಕೆ ದೇವ-ದೇವತೆಗಳ ಆರಾಧನೆಗೆ ಮೀಸಲಿಡಲಾಗಿದೆ. ವಿಶೇಷವಾಗಿ ಸೋಮವಾರವನ್ನು ಶಿವನಿಗೆ ಅತಿ ಶ್ರೇಷ್ಠವಾದ ದಿನವೆಂದು ಹೇಳಲಾಗುತ್ತದೆ. ನಿಮ್ಮ ಮನೆಯ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸಲು ನೀವು ಬಯಸಿದರೆ, ಸೋಮವಾರದ ದಿನದಂದು ನೀವು ಭಗವಾನ್ ಶಂಕರನನ್ನು ಪೂಜಿಸಬೇಕು.  ಈ ದಿನ ಶಿವ ಪೂಜೆ ಮಾಡುವುದರಿಂದ ಅಥವಾ ಶಿವ ಮಂತ್ರಗಳನ್ನು ಪಠಿಸುವುದರಿಂದ ಜೀವನದ ಅನೇಕ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಸೋಮವಾರ ಈ ಕೆಲಸಗಳನ್ನು ಮಾಡುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ ಪಡೆದುಕೊಳ್ಳಬಹುದು. 

ಸಿಹಿ ಅರ್ಪಣೆ : ಆರೋಗ್ಯ, ಆಯಸ್ಸು, ಐಶ್ವರ್ಯವನ್ನು ಜನರು ಬಯಸ್ತಾರೆ. ಕುಟುಂಬಸ್ಥರ ಆರೋಗ್ಯ ಸದಾ ಚೆನ್ನಾಗಿರಬೇಕೆಂದು ಬಯಸುವವರು ಸೋಮವಾರದ ದಿನ ಶಿವನಿಗೆ ವಿಶೇಷ ಪೂಜೆ ಸಲ್ಲಿಸಬೇಕು. ಪೂಜೆ ವೇಳೆ ದೇವರಿಗೆ ಬೇಳೆ ಹಿಟ್ಟಿನಿಂದ ಮಾಡಿದ ಯಾವುದೇ ಸಿಹಿ ಪದಾರ್ಥವನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದರಿಂದ ಕುಟುಂಬ ಸದಸ್ಯರ ಆರೋಗ್ಯ ಸುಧಾರಿಸುತ್ತದೆ. 

ಹಾಲು – ಜೇನುತುಪ್ಪ : ಬೆಳಿಗ್ಗೆ ಸ್ನಾನ ಮಾಡಿದ ನಂತರ ಮಹಾದೇವನ ಪೂಜೆ ನಡೆಯುತ್ತದೆ. ಉದ್ಯೋಗದಲ್ಲಿ ವೃದ್ಧಿ, ವ್ಯವಹಾರದಲ್ಲಿ ಯಶಸ್ಸು ಸಿಗ್ಬೇಕೆಂದು ಬಯಸುವವರು ಸೋಮವಾರದ ದಿನ ಬೆಳಿಗ್ಗೆ ಸ್ನಾನ ಮಾಡಿ, ಶಿವನಿಗೆ ಪೂಜೆ ಸಲ್ಲಿಸಬೇಕು. ಈ ವೇಳೆ ಹಾಲು ಮತ್ತು ಜೇನುತುಪ್ಪವನ್ನು ಅರ್ಪಿಸಿದ್ರೆ ಒಳ್ಳೆಯದು. ಉದ್ಯೋಗ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಇದ್ರಿಂದ ದೂರವಾಗುತ್ತವೆ. ಶಿವನ ಕೃಪೆಗೆ ಪಾತ್ರರಾಗುವ ನೀವು, ಉದ್ಯೋಗದಲ್ಲಿ ಪ್ರಗತಿ ಕಾಣುತ್ತೀರಿ ಎಂದು ನಂಬಲಾಗಿದೆ. 

ಶ್ರೀಗಂಧ : ಸೋಮವಾರ ಶಿವನ ದೇವಸ್ಥಾನದಲ್ಲಿ ಜಲಾಭಿಷೇಕ ನಡೆಯುತ್ತದೆ. ಹಾಗೆ ಶಿವಲಿಂಗವನ್ನು ಮನೆಯಲ್ಲಿಟ್ಟು ಪೂಜೆ ಮಾಡುವವರು ಕೂಡ ಜಲಾಭಿಷೇಕ ಮಾಡ್ತಾರೆ. ಅಭಿಷೇಕದ ನಂತರ ಸೋಮವಾರದಂದು ಶಿವಲಿಂಗದ ಮೇಲೆ ಶ್ರೀಗಂಧದವನ್ನು ಲೇಪಿಸುವುದು ಒಳ್ಳೆಯದು. ಜೀವನದಲ್ಲಿ ಸಂತೋಷ ಮತ್ತು ಶಾಂತಿ ಬಯಸುವ ಭಕ್ತರು, ಶ್ರೀಗಂಧವನ್ನು ಅರ್ಪಿಸಿದ್ರೆ ಮನೆ ಹಾಗೂ ಮನಸ್ಸಿನಲ್ಲಿ ಸದಾ ಶಾಂತಿ, ಸಂತೋಷ ನೆಲೆಸಿರುತ್ತದೆ. 

ಪ್ರಾರ್ಥನೆ : ಶಿವನಿಗೆ ಪ್ರಿಯವಾದ ಹೂವು ಮತ್ತು ಹಣ್ಣುಗಳನ್ನು ಅರ್ಪಿಸಿ, ನಂಬಿಕೆಯ ಪ್ರಕಾರ ಆರತಿ ಮಾಡಲಾಗುತ್ತದೆ. ಶಿವ ಒಲಿಯಬೇಕೆಂದ್ರೆ ಭೋಲೇನಾಥನನ್ನು ಮನಃಪೂರ್ವಕವಾಗಿ ಧ್ಯಾನಿಸಬೇಕು. ಆಗ ಮನಸ್ಸು ಪ್ರಸನ್ನವಾಗುತ್ತದೆ. ಶಿವ ಪೂಜೆಯಲ್ಲಿ ಪ್ರಾರ್ಥನೆ ಕೂಡ ಮಹತ್ವ ಪಡೆಯುತ್ತದೆ. 

ಹಸಿರು ಬಣ್ಣ  : ಭೋಲೆನಾಥನ ನೆಚ್ಚಿನ ಬಣ್ಣ ಹಸಿರು. ಈ ಬಣ್ಣದ ಬಟ್ಟೆಗಳನ್ನು ಧರಿಸಿ ಪೂಜೆ ಮಾಡುವುದಕ್ಕೆ ವಿಶೇಷ ಮನ್ನಣೆ ಇದೆ. ಅಲ್ಲದೆ, ಹಳದಿ, ಕೆಂಪು ಅಥವಾ ಬಿಳಿ ಬಣ್ಣದ ಬಟ್ಟೆಗಳನ್ನು ಸಹ ಧರಿಸಬಹುದು. ಆದರೆ ಪುರಾಣಗಳ ಪ್ರಕಾರ, ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಿ ಎಂದಿಗೂ ಶಿವನ ಪೂಜೆ ಮಾಡಬಾರದು. 

ಸೋಮವಾರದ ದಿನವನ್ನು ಮಹಾದೇವನಿಗೆ ಅರ್ಪಿಸಲಾಗಿದೆ. ದೇವರ ದೇವರೆಂದು ಕರೆಯಲ್ಪಡುವ ಮಹಾದೇವನನ್ನು ಮೆಚ್ಚಿಸಲು ಭಕ್ತರು ನಿರಂತರ ಪ್ರಯತ್ನ ನಡೆಸುತ್ತಿರುತ್ತಾರೆ. ಶಿವನನ್ನು ಮೆಚ್ಚಿಸಲು ಯಶಸ್ವಿಯಾದ ವ್ಯಕ್ತಿಯ ಜೀವನದಲ್ಲಿ ಯಾವಾಗಲೂ ಸಂತೋಷ ಮತ್ತು ಸಮೃದ್ಧಿ ಇರುತ್ತದೆ ಎಂದು ನಂಬಲಾಗಿದೆ. 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow