ಹಿಂದಿ ಹೆಂಗಸರ ಭಾಷೆ, ಇದಕ್ಕೆ ಜೀವ ಇಲ್ಲ: ನಾಲಿಗೆ ಹರಿಬಿಟ್ಟ ಯೋಗರಾಜ್ ಸಿಂಗ್

ಜನವರಿ 14, 2025 - 09:08
 0  13
ಹಿಂದಿ ಹೆಂಗಸರ ಭಾಷೆ, ಇದಕ್ಕೆ ಜೀವ ಇಲ್ಲ: ನಾಲಿಗೆ ಹರಿಬಿಟ್ಟ ಯೋಗರಾಜ್ ಸಿಂಗ್

ವಿವಾದಾತ್ಮಕ ಹೇಳಿಕೆಗಳಿಂದಲೇ ಸದ್ದು ಮಾಡುವ ಭಾರತ ತಂಡದ ಮಾಜಿ ಆಟಗಾರ ಯೋಗರಾಜ್ ಸಿಂಗ್ ಮತ್ತೊಂದು ಹೇಳಿಕೆ ನೀಡಿದ್ದು, ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ. 

ಎಸ್ ಯೋಗರಾಜ್ ಸಿಂಗ್ ಹಿಂದಿ ಹೆಂಗಸರ ಭಾಷೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹಿಂದಿ ಭಾಷೆಯನ್ನು ಮಹಿಳೆಯರ ಭಾಷೆ ಎಂದು ತುಚ್ಛ ಹೇಳಿಕೆ ನೀಡಿದ್ದಾರೆ. ಹಿಂದಿ ಭಾಷೆಗೆ ಜೀವವಿಲ್ಲ. ಅದು ಗಂಡಸರ ಭಾಷೆಯಲ್ಲ. ಬೇಕಿದ್ದರೆ ಹೆಂಗಸರ ಭಾಷೆಯನ್ನಬಹುದು ಎಂದಿದ್ದಾರೆ.

ನನ್ನ ಪ್ರಕಾರ ಪಂಜಾಬಿ ಗಂಡಸರ ಭಾಷೆ. ಹಿಂದಿಯನ್ನು ಪುರುಷರು ಮಾತನಾಡುವಾಗ ಚೆನ್ನಾಗಿರಲ್ಲ. ಹೀಗಾಗಿಯೇ ನಾನು ಹಿಂದಿಯನ್ನು ಪುರಷರ ಭಾಷೆಯಲ್ಲ ಎಂದು ಹೇಳುತ್ತೇನೆ. ಅದು ಒಂಥಂತರ ಹೆಂಗಸರ ಭಾಷೆ ಎಂದು ಯೋಗರಾಜ್ ಸಿಂಗ್ ವ್ಯಂಗ್ಯವಾಡಿದ್ದಾರೆ.

ನೀವೇ ನೋಡಿ, ಮಹಿಳೆಯರು ಹಿಂದಿ ಭಾಷೆ ಮಾಡನಾಡುವಾಗ ಚೆನ್ನಾಗಿರುತ್ತದೆ. ಅದನ್ನು ಕೇಳುವಾಗ ಇಷ್ಟವಾಗುತ್ತದೆ. ಅದೇ ಪುರುಷರು ಹಿಂದಿಯಲ್ಲಿ ಮಾತನಾಡುವುದನ್ನು ಕೇಳಿ ನೋಡಿ, ಚೆನ್ನಾಗಿರಲ್ಲ ಎಂದರು.

ಇದೇ ವೇಳೆ ಪಂಜಾಬಿ ಭಾಷೆಯನ್ನು ಪುರುಷರ ಭಾಷೆ ಎಂದು ಬಣ್ಣಿಸಿದ ಯೋಗರಾಜ್ ಸಿಂಗ್, ಪಂಜಾಬಿಯಲ್ಲಿ ಗಂಡಸರು ಮಾತನಾಡುವಾಗಲೇ ಒಂದು ಖದರ್ ಇರುತ್ತದೆ. ಅದೇ ಹಿಂದಿಯಲ್ಲಿ ಮಾತನಾಡುವಾಗ ಜೀವವಿರಲ್ಲ. ಹೀಗಾಗಿಯೇ ನಾನು ಪಂಜಾಬಿ ಭಾಷೆಯನ್ನು ಪುರುಷರ ಮತ್ತು ಹಿಂದಿಯನ್ನು ಮಹಿಳೆಯರ ಭಾಷೆ ಎನ್ನುತ್ತೇನೆ.

ಇದೀಗ ಯೋಗರಾಜ್ ಸಿಂಗ್ ನೀಡಿರುವ ಹೇಳಿಕೆಯು ಭಾರೀ ಚರ್ಚೆಗೆ ಕಾರಣವಾಗಿದ್ದು, ಹಿಂದಿ ಭಾಷಾಪ್ರೇಮಿಗಳು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow