ಹುಟ್ಟುಹಬ್ಬದ ಸಂಭ್ರಮದಲ್ಲಿ KL Rahul: ಮಗಳ ಹೆಸರು ರಿವೀಲ್ ಮಾಡಿದ ಕೆ.ಎಲ್.ರಾಹುಲ್, ಅಥಿಯಾ ಶೆಟ್ಟಿ!

ಕೆಎಲ್ ರಾಹುಲ್ ಪ್ರಸ್ತುತ ಐಪಿಎಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಐಪಿಎಲ್ ಆಡುತ್ತಿರುವ ಕೆ ಎಲ್ ರಾಹುಲ್ ಇಂದು ತಮ್ಮ 33ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಐಪಿಎಲ್ 2025 ರಲ್ಲಿ ಅವರ ಬ್ಯಾಟಿಂಗ್ ಅದ್ಭುತವಾಗಿದೆ. ಇನ್ನೂ ಕೆ.ಎಲ್ ರಾಹುಲ್ ಅವರ ಪತ್ನಿ ಅಥಿಯಾ ಶೆಟ್ಟಿ ಅವರು ಕಳೆದ ತಿಂಗಳು ಅಂದರೆ ಮಾರ್ಚ್ 24 ರಂದು ಕ್ಯೂಟ್ ಆಗಿರೋ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಅಂದಿನಿಂದ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ ಎನ್ನಬಹುದು. ಕೆ.ಎಲ್ ರಾಹುಲ್, ಅಥಿಯಾ ತಂದೆ, ತಾಯಿ ಜವಾಬ್ದಾರಿ ತೆಗೆದುಕೊಂಡರೇ, ಅಥಿಯಾ ಅವರ ತಂದೆ ನಟ ಸುನಿಲ್ ಶೆಟ್ಟಿಯವರು ಅಜ್ಜನಾಗಿ ತಮ್ಮ ಸಂತಸದ ಕ್ಷಣಗಳನ್ನು ಕಳೆಯುತ್ತಿದ್ದಾರೆ.
ಕಳೆದ ತಿಂಗಳು ಜನಿಸಿದ್ದ ತಮ್ಮ ಮುದ್ದಾದ ಕಂದಮ್ಮಗೆ ಇವಾರಾ ಎಂದು ಕೆ.ಎಲ್ ರಾಹುಲ್ ಅವರ ಪತ್ನಿ ಅಥಿಯಾ ಶೆಟ್ಟಿ ಅವರು ನಾಮಕರಣ ಮಾಡಿದ್ದಾರೆ. ಫೋಟೋದಲ್ಲಿ ಮಗಳನ್ನು ಎತ್ತಿಕೊಂಡಿರುವ ರಾಹುಲ್ ಜೊತೆಯಲ್ಲಿ ಅಥಿಯಾ ಕೂಡ ಇದ್ದಾರೆ.
ಮಗಳು ದೇವರ ಕೊಡುಗೆ ಎಂದು ಟ್ಯಾಗ್ಲೈನ್ ಬರೆದುಕೊಂಡಿದ್ದಾರೆ. ಮಗಳ ಹೆಸರು ಇವಾರಾ ಆಗಿದ್ದು ಇದರ ಅರ್ಥ ದೇವರ ಕೊಡುಗೆ ಎಂದು ದಂಪತಿ ತಿಳಿಸಿದ್ದಾರೆ. ಸದ್ಯ ಈ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ಸೆಲೆಬ್ರಿಟಿಸ್ ಸೇರಿದಂತೆ ಸಾಕಷ್ಟು ಜನರು ಕಮೆಂಟ್ಸ್ ಮಾಡುತ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






