ಹೊಟ್ಟೆಯಲ್ಲಿರೋ ಮಗುವಿಗಾಗಿ ನಿತ್ಯಾಗೆ ತಾಳಿ ಕಟ್ಟೇಬಿಟ್ಟ ಕರ್ಣ! ಇದೇನಿದು ಹೊಸ ಟ್ವಿಸ್ಟ್‌

ಸೆಪ್ಟೆಂಬರ್ 30, 2025 - 20:10
 0  19
ಹೊಟ್ಟೆಯಲ್ಲಿರೋ ಮಗುವಿಗಾಗಿ ನಿತ್ಯಾಗೆ ತಾಳಿ ಕಟ್ಟೇಬಿಟ್ಟ ಕರ್ಣ! ಇದೇನಿದು ಹೊಸ ಟ್ವಿಸ್ಟ್‌

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಕರ್ಣ’ದಲ್ಲಿ ಯಾರೂ ಊಹಿಸದ ರೀತಿಯ ತಿರುವು ಸಂಭವಿಸಿದೆ. ಇಷ್ಟು ದಿನ ನಿಧಿಯನ್ನು ಪ್ರೀತಿಸುತ್ತಿದ್ದ ಕರ್ಣ, ಅಚ್ಚರಿಯಾಗಿ ನಿತ್ಯಾಳಿಗೆ ಮದುವೆಯಾದ ದೃಶ್ಯವನ್ನು ವಾಹಿನಿಯು ಹೊಸ ಪ್ರೋಮೋ ಮೂಲಕ ಹಂಚಿಕೊಂಡಿದೆ.

ಕರ್ಣ ಒಬ್ಬ ವೈದ್ಯರು, ನಿಧಿ ವಿದ್ಯಾರ್ಥಿನಿ. ಇಬ್ಬರ ಮಧ್ಯೆ ಪ್ರೀತಿ ಬೆಳೆಯುತ್ತಿದ್ದಂತೆಯೇ ಅಭಿಮಾನಿಗಳು ಇವರ ಮಿಲನಕ್ಕಾಗಿ ಕಾಯುತ್ತಿದ್ದರು. ಮೊದಲು ನಿತ್ಯಾ ಕರ್ಣನಿಗೆ ಪ್ರಪೋಸ್ ಮಾಡಿದರೂ, ಆ ಪ್ರೇಮವನ್ನು ಕರ್ಣ ಒಪ್ಪಿಕೊಂಡಿರಲಿಲ್ಲ. ಮಾರಿಗುಡಿಗೆ ಹೋಗಿ ಬರುವ ಸಂದರ್ಭದಲ್ಲೇ ಕರ್ಣ-ನಿಧಿ ನಡುವಿನ ಸಂಬಂಧ ಗಾಢವಾಯಿತು.

ಅಭಿಮಾನಿಗಳು ಕರ್ಣ-ನಿಧಿ ಮದುವೆಗೆ ನಿರೀಕ್ಷಿಸುತ್ತಿದ್ದಾಗ, ಕಥೆ ಸಂಪೂರ್ಣ ಬದಲಾಗಿದೆ. ಅದ್ದೂರಿಯಾಗಿ ನಡೆದ ಮದುವೆ ಸಮಾರಂಭದಲ್ಲಿ ಕರ್ಣ, ನಿಧಿಗೆ ಅಲ್ಲ, ನಿತ್ಯಾಳಿಗೆ ತಾಳಿ ಕಟ್ಟುತ್ತಾನೆ. ಈ ದೃಶ್ಯವನ್ನು ನೋಡಿ ನಿಧಿ ಕಣ್ಣೀರಿನಲ್ಲಿ ಮುಳುಗುತ್ತಾಳೆ.

ಪ್ರೋಮೋದ ಕೊನೆಯಲ್ಲಿ ಮತ್ತೊಂದು ಟ್ವಿಸ್ಟ್ ಬರುವ ಸುಳಿವನ್ನು ವಾಹಿನಿಯು ಕೊಟ್ಟಿದ್ದು, ನಿತ್ಯಾಗೆ ಈಗಾಗಲೇ ವಿವಾಹ ಫಿಕ್ಸ್ ಆಗಿತ್ತು. ಇನ್ನು ಕೆಲವೇ ದಿನದಲ್ಲಿ ತೇಜಸ್ ಜೊತೆ ಮದುವೆ ಕೂಡ ಆಗುವುದರಲ್ಲಿ ಇತ್ತು. ಆದರೆ, ಈ ವಿವಾಹ ಹೇಗೋ ಮುರಿದು ಬಿದ್ದಿದೆ.

ಕೊನೆಯ ಕ್ಷಣದಲ್ಲಿ ಆ ಹುಡುಗ ಹಿಂದಕ್ಕೆ ಸರಿದಿದ್ದಾನೆ. ಈ ವೇಳೆ ನಿತ್ಯಾ ಪ್ರೆಗ್ನೆಂಟ್ ಎಂಬ ವಿಚಾರವೂ ಪ್ರೋಮೋದಲ್ಲಿ ರಿವೀಲ್ ಆಗಿದೆ. ‘ನಿತ್ಯಾ ಒಡಲಲ್ಲಿ ಅಡಗಿದ ಸತ್ಯಕ್ಕೆ ನಾಡಿ ಬಡಿತವೇ ಸಾಕ್ಷಿ’ ಎಂದು ಪ್ರೋಮೋದಲ್ಲಿ ಹೇಳಲಾಗಿದೆ. ಈ ಮೂಲಕ ಆಕೆ ಪ್ರೆಗ್ನೆಂಟ್ ಎಂಬ ವಿಚಾರ ರಿವೀಲ್ ಆಗಿದೆ.  ಮುಂದಿನ ಭಾಗದಲ್ಲಿ ಕಥೆ ಹೇಗೆ ಸಾಗುತ್ತದೆ ಎಂಬ ಕುತೂಹಲ ಹೆಚ್ಚಿಸಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow