ಏಕದಿನ ಸರಣಿಗೆ ಸಜ್ಜಾದ ಟೀಮ್ ಇಂಡಿಯಾ! ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!

ಫೆಬ್ರವರಿ 4, 2025 - 09:15
 0  18
ಏಕದಿನ ಸರಣಿಗೆ ಸಜ್ಜಾದ ಟೀಮ್ ಇಂಡಿಯಾ! ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!

ಆಂಗ್ಲರ ವಿರುದ್ಧ ಟಿ20 ಸರಣಿಯನ್ನು 4-1 ಅಂತರದಿಂದ ಗೆದ್ದು ಬೀಗಿರುವ ಟೀಮ್ ಇಂಡಿಯಾ ಇದೀಗ ಏಕದಿನ ಸರಣಿಗಾಗಿ ಸಜ್ಜಾಗುತ್ತಿದೆ. 

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯು ಫೆಬ್ರವರಿ 6 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಒಟ್ಟು 3 ಪಂದ್ಯಗಳನ್ನಾಡಲಾಗುತ್ತದೆ.ಮುಂಬರುವ ಚಾಂಪಿಯನ್ಸ್ ಟ್ರೋಫಿ ದೃಷ್ಟಿಯಿಂದ ಟೀಮ್ ಇಂಡಿಯಾ ಪಾಲಿಗೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ತುಂಬಾ ಮಹತ್ವದ್ದು. ಏಕೆಂದರೆ ಆಂಗ್ಲರ ವಿರುದ್ಧದ ಸರಣಿ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಗಾಗಿ ತೆರಳಲಿದೆ.  ಹೀಗಾಗಿ ಗೆಲುವಿನ ಲಯದೊಂದಿಗೆ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಪಾಲ್ಗೊಳ್ಳಲು ಭಾರತ ತಂಡ ಇಂಗ್ಲೆಂಡ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಲೇಬೇಕು. 

ಫೆಬ್ರವರಿ 06, ಗುರುವಾರ:-     ಭಾರತ vs ಇಂಗ್ಲೆಂಡ್, ಮೊದಲ ಏಕದಿನ ಪಂದ್ಯ (ನಾಗ್ಪುರ)     01:30 PM IST

ಫೆಬ್ರವರಿ 09, ಭಾನುವಾರ:-    ಭಾರತ vs ಇಂಗ್ಲೆಂಡ್, ಎರಡನೇ ಏಕದಿನ ಪಂದ್ಯ ( ಕಟಕ್)     01:30 PM IST

ಫೆಬ್ರವರಿ 12 ಬುಧವಾರ    :- ಭಾರತ vs ಇಂಗ್ಲೆಂಡ್, ಮೂರನೇ ಏಕದಿನ ಪಂದ್ಯ (ಅಹಮದಾಬಾದ್)     01:30 PM IST

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ರವೀಂದ್ರ ಜಡೇಜಾ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow