ಕವಲುದಾರಿ ರಿಷಿ ಮನೆಯಲ್ಲಿ ಸಂಭ್ರಮ: ಚೊಚ್ಚಲ ಮಗುವಿಗೆ ವೆಲ್ಕಮ್ ಹೇಳಿದ ನಟ!

ಅಪರೇಷನ್ ಅಲಮೇಲಮ್ಮ', 'ಕವಲುದಾರಿ' ಸಿನಿಮಾಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ಗಮನಸೆಳೆದ ನಟ ರಿಷಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಕವಲುದಾರಿ ಹಾಗೂ ಆಪರೇಷನ್ ಅಲಮೇಲಮ್ಮ ಖ್ಯಾತಿಯ ನಟ ರಿಷಿ ಅವರು ತಂದೆಯಾದ ಖುಷಿಯಲ್ಲಿದ್ದಾರೆ. ಪತ್ನಿ ಸ್ವಾತಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ನಟ ರಿಷಿ ತಿಳಿಸಿದ್ದಾರೆ.
ನಟ ರಿಷಿ 2019ರಲ್ಲಿ ಚೆನ್ನೈನಲ್ಲಿ ತಮ್ಮ ಗೆಳತಿ ಸ್ವಾತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ 5 ವರ್ಷಗಳ ಬಳಿಕ ಈಗ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ. ಇನ್ನೂ, ಕಿರುತೆರೆಯಲ್ಲಿ ನಟನೆಯನ್ನು ಶುರು ಮಾಡಿ ಬೆಳ್ಳಿತೆರೆಗೆ ಕಾಲಿಟ್ಟ ನಟ ರಿಷಿ ನಾಯಕನಾಗಿ ನಟಿಸಿದ ಮೊದಲ ಸಿನಿಮಾದಲ್ಲೇ ಸಿನಿಪ್ರೇಮಿಗಳ ಗಮನ ಸೆಳೆದಿದ್ದರು.
ಬೆಳ್ಳಿತೆರೆಗೆ ಬರುವ ಮೊದಲು ಮಹಾಪರ್ವ ಹಾಗೂ ಅನುರೂಪ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ರೇಡಿಯೋ ಜಾಕಿ ಆಗಿಯೂ ಕೂಡ ಗುರುತಿಸಿಕೊಂಡಿದ್ದರು. ಇನ್ನೂ, ಆಪರೇಷನ್ ಅಲಮೇಲಮ್ಮ, ಕವಲುದಾರಿ ಸಿನಿಮಾ ಮೂಲಕ ಕನ್ನಡ ಸಿನಿಪ್ರಿಯರಿಗೆ ಪರಿಚಿತರಾದರು.
ಸದ್ಯ ಮೊದಲ ಮಗುವನ್ನು ಬರಮಾಡಿಕೊಂಡ ನಟ ರಿಷಿ ತಮ್ಮ ಇನ್ಸ್ಟಗ್ರಾಮ್ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಚಾರ ಕೇಳಿದ ಅಭಿಮಾನಿಗಳು ದಂಪತಿಗೆ ಶುಭ ಹಾರೈಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






