ಕಿಂಗ್ ಕೊಹ್ಲಿಯ ಫಿಟ್ನೆಸ್ ರಹಸ್ಯ ಬಯಲು: ಅಬ್ಬಬ್ಬಾ ಇದು ಕಷ್ಟ ಅಂತಿದ್ದಾರೆ ಫ್ಯಾನ್ಸ್!

ವಿಶ್ವದ ಫಿಟ್ಟೆಸ್ಟ್ ಕ್ರಿಕೆಟರ್ಗಳಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಆದ್ರೆ ಒಂದು ಕಾಲದಲ್ಲಿ ವಿರಾಟ್ಗೆ ರುಚಿ ರುಚಿ ತಿನಿಸುಗಳೆಂದ್ರೆ ತುಂಬಾ ಇಷ್ಟ. ದೆಹಲಿ ಗಲ್ಲಿಗಳಲ್ಲಿ ಸಿಗೋ ಛೋಲೆ ಭಟೂರೆಯಿಂದ ಹಿಡಿದು ಪನೀರ್ ಖುರ್ಚನ್ವರೆಗೆ ತಿನ್ನದೆ ಒಂದು ದಿನವೂ ಇರೋಕೆ ಆಗ್ತಿರ್ಲಿಲ್ಲ.
ಇತ್ತೀಚಿನ ವರ್ಷಗಳಲ್ಲಿ ಅವರು ಆರೋಗ್ಯ ಸಮಸ್ಯೆಯಿಂದ ಅವರು ಪೂರ್ತಿ ವೆಜಿಟೇರಿಯನ್ ಆಗಿದ್ದಾರೆ. ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ಮತ್ತು ಆರೋಗ್ಯಕ್ಕಾಗಿ ಪಾಲಿಸುವ ಡಯಟ್ ಪ್ಲಾನ್ ಬಗ್ಗೆ ತಿಳಿದುಕೊಳ್ಳಲೇಬೇಕು. ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಸರಿಯಾದ ಆಹಾರಕ್ರಮ ಮತ್ತು ವ್ಯಾಯಾಮವನ್ನು ಅವರು ಪಾಲಿಸುತ್ತಾರೆ.
ಎಸ್, ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕಿಂಗ್ ಕೊಹ್ಲಿ ಫೀಲ್ಡಿಗೆ ಎಂಟ್ರಿ ಕೊಟ್ರೆ ಎಂಥವರು ಫಿದಾ ಆಗ್ತಾರೆ. ಅಂತಹ ಫಿಟ್ನೆಸ್ ಅವರು ಕಾಪಾಡಿಕೊಂಡಿದ್ದಾರೆ. ಅವರ ಫಿಟ್ನೆಸ್ ಬಗ್ಗೆ ಅವರು ದಾಖಲೆಯೇ ಬರೆದಿದ್ದಾರೆ.
ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುವ ವಿರಾಟ್ ಕೊಹ್ಲಿ ಮೊಸರು, ಡೈರಿ ಉತ್ಪನ್ನಗಳು, ಗೋಧಿ ಹಿಟ್ಟಿನ ಚಪಾತಿಗಳನ್ನು ತಿನ್ನುವುದಿಲ್ಲ. ಕಾರ್ಬೋಹೈಡ್ರೇಟ್ ಹೆಚ್ಚಿರುವ ಯಾವ ಊಟವನ್ನೂ ವಿರಾಟ್ ಸೇವಿಸುವುದಿಲ್ಲ.
ವಿರಾಟ್ಕೊಹ್ಲಿ ಡಯಟ್ನಲ್ಲಿ ಒಂದು ವಿಶೇಷ ಅಕ್ಕಿಯಿಂದ ತಯಾರಾಗು ಅನ್ನವೂ ಸೇರಿದೆ. ಈ ಅನ್ನ ದೇಹಕ್ಕೆ ಹೆಚ್ಚು ಶಕ್ತಿ ನೀಡುತ್ತದೆ. ಕೊಹ್ಲಿ ಸಾಮಾನ್ಯವಾಗಿ ಬಳಕೆ ಮಾಡುವ ಅಕ್ಕಿಯ ಅನ್ನವನ್ನು ತಿನ್ನುವುದಿಲ್ಲವಂತೆ
ಕೊಹ್ಲಿ ತಿನ್ನುವ ಈ ಅಕ್ಕಿ ಆಹಾರ ಸಂಸ್ಕರಣಾ ಘಟಕದಲ್ಲಿ ವಿಶೇಷ ರೀತಿಯಲ್ಲಿ ತಯಾರಾಗುತ್ತದೆ. ಗ್ಲುಟನ್ ಮುಕ್ತವಾಗಿರುವ ಅಕ್ಕಿಯ ಅನ್ನವನ್ನೇ ಕೊಹ್ಲಿ ತಿನ್ನುತ್ತಾರಂತೆ.
ಕಡಿಮೆ ಕಾರ್ಬೋಹೈಡ್ರೇಟ್ ಹೊಂದಿರುವ ಈ ವಿಶೇಷ ಅಕ್ಕಿಯ ಬೆಲೆ ಕೆಜಿಗೆ ಸುಮಾರು 400 ರಿಂದ 500 ರೂ ಅಂತೆ. ಸಿಹಿ ತಿಂಡಿಗಳನ್ನಂತೂ ಕೊಹ್ಲಿ ಮುಟ್ಟುದೇ ಇಲ್ಲವಂತೆ. ಚೋಲೆ ಬಟೋರೆ ಕೊಹ್ಲಿಯ ನೆಚ್ಚಿನ ಆಹಾರ.
ಸ್ಟಾರ್ ಸ್ಪೋರ್ಟ್ಸ್ ಸಂದರ್ಶನವೊಂದರಲ್ಲಿ, ಕೊಹ್ಲಿ ತಮ್ಮ ಆಹಾರ ಪದ್ಧತಿಯನ್ನು ಬಹಿರಂಗಪಡಿಸಿದರು. ವಿಟಮಿನ್ಗಳು, ಪ್ರೋಟೀನ್ ಹೆಚ್ಚಿರುವ ಆಹಾರ ತಿನ್ನುವುದಾಗಿ ತಿಳಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?






